IRCTC Update: 324 ರೈಲುಗಳು ರದ್ದು, ಸಂಪೂರ್ಣ ಪಟ್ಟಿ ಪರಿಶೀಲಿಸಿ

ನಿರ್ವಹಣೆ ಹಾಗೂ ಬೇರೆ ಅಗತ್ಯ ಕಾರ್ಯಗಳು ಇರುವ ಕಾರಣದಿಂದಾಗಿ ಭಾರತೀಯ ರೈಲ್ವೆಯು ಸೋಮವಾರ, ಫೆಬ್ರವರಿ 13ರಂದು ಸುಮಾರು 324 ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಈ ಹಿಂದೆಯೂ ಹಲವಾರು ಬಾರಿ ಭಾರತೀಯ ರೈಲ್ವೆಯು ಇದೇ ಕಾರಣವನ್ನು ನೀಡಿ ರೈಲು ಸಂಚಾರವನ್ನು ರದ್ದು ಮಾಡಿದೆ

ಪ್ರಮುಖವಾಗಿ ನಿರ್ವಹಣೆ ಹಾಗೂ ಮೂಲಸೌಕರ್ಯ, ಸುರಕ್ಷಿತ ಕಾರ್ಯಗಳನ್ನು ನಡೆಸಲಿರುವ ಕಾರಣದಿಂದಾಗಿ ಫೆಬ್ರವರಿ 13ರಂದು ಭಾರತೀಯ ರೈಲ್ವೆಯು 324 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆ ನೀಡಿದ ಮಾಹಿತಿ ಪ್ರಕಾರ 91 ರೈಲುಗಳು ಇಂದು ಭಾಗಶಃವಾಗಿ ರದ್ದು ಮಾಡಲಾಗಿದೆ. ಉಳಿದ ರೈಲುಗಳು ಸಂಪೂರ್ಣವಾಗಿ ರದ್ದುಗೊಂಡಿದೆ.

ರೈಲು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಯಾವೆಲ್ಲ ಸಂಖ್ಯೆಯ ರೈಲನ್ನು ರದ್ದು ಮಾಡಲಾಗಿದೆ, ನಾವು ಪ್ರಯಾಣ ಮಾಡುವ ರೈಲಿನ ಸಂಖ್ಯೆಯು ಈ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲನೆ ಮಾಡಬಹುದು. ಆ ಪಟ್ಟಿಯನ್ನು ಡೌನ್‌ಲೋಡ್ ಮಾಡಲು ಕೂಡಾ ಸಾಧ್ಯವಾಗುತ್ತದೆ. ಯಾವೆಲ್ಲ ರೈಲುಗಳು ರದ್ದಾಗಿದೆ?, ನೀವು ರೈಲು ಸಂಖ್ಯೆಯನ್ನು ಪರಿಶೀಲನೆ ಮಾಡುವುದು ಹೇಗೆ, ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

 ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ ಪರಿಶೀಲಿಸಿ

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ ಪರಿಶೀಲಿಸಿ

00468, 01373, 01374, 01539, 01540, 01541, 01542, 01583, 01590, 01605, 01607, 01608, 01625, 01626, 01823, 01824, 03085, 03086, 03111, 03359, 03360, 03591, 03592, 03649, 03650, 04029, 04030, 04041, 04042, 04139, 04148, 04149, 04263, 04264, 04267, 04268, 04303, 04304, 04305, 04306, 04319, 04335, 04336, 04338, 04356, 04376, 04379, 04380, 04403, 04404, 04408, 04421, 04424, 04549, 04550, 04568, 04577, 04597, 04598, 04648, 04845, 04846, 04901, 04902, 04909, 04910, 04912, 04913, 04916, 04919, 04927, 04938, 04941, 04946, 04950, 04953, 04958, 04959, 04961, 04963, 04964, 04987, 04988, 04999, 05000, 05035, 05036, 05039, 05040, 05091, 05092, 05093, 05094, 05117, 05118, 05155, 05156, 05459, 05460, 05470, 05471, 06601, 06602, 06609, 06610, 06651, 06652, 06653, 06654, 06655, 06656, 06780, 06802, 06803, 06919, 06920, 06921, 06922, 06934, 06937, 06958, 06959, 06964, 06967, 06977, 06991, 06994, 06995, 06996, 07322, 07329, 07330, 07331, 07795, 07906, 07907, 08167, 08168, 09108, 09109, 09110, 09113, 09197, 09198, 09199, 09200, 09351, 09352, 09353, 09354, 09369, 09370, 09431, 09432, 09433, 09434, 09437, 09438, 09475, 09476, 09481, 09482, 09487, 09488, 09491, 09492, 09535, 09536, 09541, 09542, 09559, 09560, 09587, 09588, 09589, 09590, 09703, 09704, 10101, 10102, 11025, 11026, 11123, 11305, 11306, 11425, 11426, 12120, 12171, 12217, 12241, 12242, 12316, 12358, 12369, 12370, 12397, 12529, 12530, 12537, 12538, 12572, 12595, 12873, 13015, 13029, 13309, 13310, 13345, 13346, 14005, 14006, 14213, 14214, 14217, 14218, 14235, 14236, 14505, 14506, 14523, 14617, 14618, 14673, 14819, 14820, 14821, 14822, 14823, 14824, 14891, 14892, 15026, 15081, 15082, 15083, 15084, 15119, 15120, 15127, 15129, 15130, 15159, 15203, 15204, 15280, 15620, 15903, 16337, 16731, 16732, 17035, 17036, 17331, 18103, 18175, 18176, 19303, 19304, 19343, 19344, 19577, 20924, 20948, 20949, 22441, 22442, 22983, 22984, 31411, 31414, 31423, 31432, 31711, 31712, 36011, 36012, 36031, 36032, 36033, 36034, 36035, 36036, 36037, 36038, 36811, 36812, 36813, 36816, 36825, 36829, 36836, 36840, 36850, 36851, 37327, 37329, 37332, 37338, 37781, 37782, 37812, 37813, 37817, 37827, 37834, 37837, 37838, 37842, 38923, 38924, 47110, 47111, 47119, 47135, 47137, 47177, 47181, 47183, 47185, 47186, 47212, 47217, 52539

 ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ

ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ

ನೀವು ಪ್ರಯಾಣ ಮಾಡಲಿರುವ ರೈಲು ರದ್ದಾಗಿದೆಯೇ ಎಂದು ಪರಿಶೀಲನೆ ಮಾಡಲು ನೀವು ಈ ಕೆಳಗಿನ ಹಂತವನ್ನು ಪಾಲಿಸಬಹುದು.

ಹಂತ 1: indianrail.gov.in/mntes ಗೆ ಭೇಟಿ ನೀಡಿ
ಹಂತ 2: ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ
ಹಂತ 4: ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ
ಹಂತ 6: ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಿ

 

 ರಿಫಂಡ್ ಬಗ್ಗೆ ಮಾಹಿತಿ

ರಿಫಂಡ್ ಬಗ್ಗೆ ಮಾಹಿತಿ

ಸಾಮಾನ್ಯವಾಗಿ ರೈಲು ರದ್ದಾದರೆ ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗುತ್ತದೆ, ಹಾಗೆಯೇ ರಿಫಂಡ್ ಕೂಡಾ ಬ್ಯಾಂಕ್ ಖಾತೆಗೆ ಆಗುತ್ತದೆ. ಆದರೆ ನೀವು ಪ್ರಯಾಣ ಮಾಡುವ ರೈಲು 3 ಗಂಟೆ ಅಥವಾ ಅದಕ್ಕಿಂತ ಅಧಿಕ ತಡವಾಗಿ ಬರುವುದಾದರೆ ನೀವು ಆ ಟಿಕೆಟ್ ಅನ್ನು ರದ್ದು ಮಾಡಿ ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ರೈಲ್ವೆ ರೆಗ್ಯೂಲೇಷನ್ ಪ್ರಕಾರ 3 ಗಂಟೆ ಅಥವಾ ಅದಕ್ಕಿಂತ ಅಧಿಕ ವಿಳಂಬವಾದ ಕಾರಣದಿಂದಾಗಿ ರೈಲ್ವೆ ಟಿಕೆಟ್ ಅನ್ನು ಪ್ರಯಾಣಿಕರು ರದ್ದು ಮಾಡಿದರೆ, ಸಂಪೂರ್ಣ ಮೊತ್ತದ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಕೌಂಟರ್ ಮೂಲಕ ಟಿಕೆಟ್ ಬುಕ್ ಮಾಡಿದ್ದರೆ ಅಲ್ಲೇ ಹೋಗಿ ಟಿಕೆಟ್ ರದ್ದು ಮಾಡಿ ರಿಫಂಡ್ ಪಡೆಯಬಹುದು.

ಹಂತ 1: ಐಆರ್‌ಸಿಟಿಸಿ ಖಾತೆಗೆ ಸೈನ್‌ ಇನ್ ಆಗಬೇಕು
ಹಂತ 2: ಲಾಗಿನ್ ಆದ ಬಳಿಕ MY ACCOUNT ಆಯ್ಕೆ ಮಾಡಿ
ಹಂತ 3: My Transactionಗೆ ಹೋಗಿ, ಟಿಡಿಆರ್‌ ಫೈಲಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ನಿಮ್ಮ ಟಿಕೆಟ್ ಅನ್ನು ಲೀಸ್ಟ್‌ನಲ್ಲಿ ಆಯ್ಕೆ ಮಾಡಿ ಟಿಡಿಆರ್ ಸಲ್ಲಿಸಿ
ಹಂತ 5: ಟಿಡಿಆರ್ ಸಲ್ಲಿಸಿದ 5ರಿಂದ 7 ದಿನದಲ್ಲಿ ರೈಲ್ವೆ ನಿಮ್ಮ ಕ್ಲೈಮ್ ಅನ್ನು ಪರಿಷ್ಕರಿಸಿ ರಿಫಂಡ್ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+