ನೀವು ರೈಲಿನಲ್ಲಿ ಪ್ರಯಾಣ ಮಾಡಲು ಇನ್ನು ಕೆಲವೇ ಕೆಲವು ನಿಮಿಷಗಳ ಇರುವಾಗ ರೈಲಿನ ಟಿಕೆಟ್ ಅನ್ನು ಕಳೆದುಕೊಂಡರೇ ಹೇಗೆ?, ಕೊನೆಯ ಕ್ಷಣದಲ್ಲಿ ರೈಲಿನ ಟಿಕೆಟ್ ಕಳೆದುಕೊಂಡರೆ, ಟಿಕೆಟ್ ಇಲ್ಲದೆಯೇ ಪ್ರಯಾಣ ಮಾಡುವ ಆತಂಕಕ್ಕೆ ನೀವು ಒಳಗಾಗುತ್ತೀರಿ. ಆದರೆ ಈ ಆತಂಕಕ್ಕೆ ನೀವು ಒಳಗಾಗಬೇಕಾಗಿಲ್ಲ. ನೀವು ಡುಪ್ಲಿಕೇಟ್ ಟಿಕೆಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ನೀವು ದಂಡವನ್ನು ಪಾವತಿ ಮಾಡಿ ಡುಪ್ಲಿಕೇಟ್ ಟಿಕೆಟ್ ಪ್ರತಿಯನ್ನು ಪಡೆಯುವ ಅವಕಾಶವನ್ನು ಭಾರತೀಯ ರೈಲ್ವೆಯು ನಿಡುತ್ತದೆ. ನೀವು ಖಚಿತವಾದ ಅಥವಾ ಆರ್‌ಎಸಿ ಟಿಕೆಟ್ ಅನ್ನು ಕಳೆದುಕೊಂಡರೆ, ಸ್ಲೀಪರ್-ಕ್ಲಾಸ್ ಪ್ಯಾಸೆಂಜರ್ ಟಿಕೆಟ್ ಅನ್ನು ಕಳೆದರುಕೊಂಡರೆ ಮತ್ತು ಬೇರೆ ಕ್ಲಾಸ್ ಟಿಕೆಟ್ ಅನ್ನು ಕಳೆದುಕೊಂಡರೆ, ಬೇರೆ ಬೇರೆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ. ಎಲ್ಲ ಟಿಕೆಟ್‌ಗೂ ಒಂದೇ ದಂಡವಿಲ್ಲ.
ಇನ್ನು ರಿಸರ್ವೇಷನ್ ಚಾರ್ಟ್ ಬಂದ ಬಳಿಕ ನೀವು ಟಿಕೆಟ್ ಅನ್ನು ಕಳೆದುಕೊಂದರೆ, ಡುಪ್ಲಿಕೇಟ್ ಟಿಕೆಟ್‌ಗೆ ಟಿಕೆಟ್‌ನ ಶೇಕಡ 50ರಷ್ಟು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಎಷ್ಟು ಶುಲ್ಕ ಇರಲಿದೆ, ಡುಪ್ಲಿಕೇಟ್ ಟಿಕೆಟ್ ಅನ್ನು ಪಡೆಯುವುದು ಹೇಗೆ, ಟಿಕೆಟ್ ಅನ್ನು ಕಳೆದುಕೊಂಡಾಗ ನೀವು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....
ಡುಪ್ಲಿಕೇಟ್ ರೈಲು ಟಿಕೆಟ್
ನಿಮ್ಮ ರೈಲಿನ ಟಿಕೆಟ್ ಕಳೆದುಹೋದರೆ, ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಯಾಕೆಂದರೆ ರೈಲ್ವೆಯು ಇದು ಯಾರಿಂದಲೂ ಆಗಬಹುದಾದ ಸಾಮಾನ್ಯ ತಪ್ಪು ಎಂದು ತಿಳಿದಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಒಂದು ಸೌಲಭ್ಯವನ್ನು ಒದಗಿಸುತ್ತದೆ. ರೈಲು ಟಿಕೆಟ್ ಕಳೆದುಹೋದಾಗ ಇದರ ಪ್ರಯೋಜನವನ್ನು ನಾವು ಪಡೆಯಬಹುದು. ನಮ್ಮ ರೈಲು ಟಿಕೆಟ್ ಕಳೆದುಹೋಗಿದ್ದರೆ, ನೀವು ನಕಲು ರೈಲು ಟಿಕೆಟ್ ಪಡೆಯುವ ಮೂಲಕ ಪ್ರಯಾಣ ಮಾಡಬಹುದು. ಅದಕ್ಕಾಗಿ ಕೊಂಚ ಹಣವನ್ನು ನೀವು ವ್ಯಯಿಸಬೇಕಾಗುತ್ತದೆ.
ಡುಪ್ಲಿಕೇಟ್ ರೈಲು ಟಿಕೆಟ್‌ಗೆ ಅಧಿಕ ಶುಲ್ಕ
ನೀವು ಡುಪ್ಲಿಕೇಟ್ ರೈಲು ಟಿಕೆಟ್ ಪಡೆಯುವುದಾದರೆ ಅದಕ್ಕೆ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆ ವೆಬ್‌ಸೈಟ್ ಪ್ರಕಾರ ರಿಸರ್ವೇಷನ್ ಚಾರ್ಟ್ ಲಭ್ಯವಾಗುವುದಕ್ಕೂ ಮುನ್ನ ಖಚಿತವಾದ/ಆರ್‌ಎಸಿ ಟಿಕೆಟ್ ಮಿಸ್ ಆದರೆ ನೀವು ಡುಬ್ಲಿಕೇಟ್ ಟಿಕೆಟ್ ಪಡೆಯಬಹುದು ಅದಕ್ಕಾಗಿ ಕೆಲವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸೆಕೆಂಡ್ ಮತ್ತು ಸ್ಲೀಪರ್ ಕ್ಲಾಸ್‌ಗೆ ನೀವು 50 ರೂಪಾಯಿ ಟಿಕೆಟ್ ಶುಲ್ಕವನ್ನು ಪಾವತಿಸಿ ಡುಪ್ಲಿಕೇಟ್ ರೈಲು ಟಿಕೆಟ್ ಪಡೆಯಬಹುದು. ರಿಸರ್ವೇಷನ್ ಚಾರ್ಟ್ ಬಂದ ಬಳಿಕ ನೀವು ಟಿಕೆಟ್ ಅನ್ನು ಕಳೆದುಕೊಂದರೆ, ಡುಪ್ಲಿಕೇಟ್ ಟಿಕೆಟ್‌ಗೆ ಟಿಕೆಟ್‌ನ ಶೇಕಡ 50ರಷ್ಟು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಈ ಐದು ವಿಷಯಗಳು ನೆನಪಿನಲ್ಲಿರಲಿ
1. ಖಚಿತವಾದ ಅಥವಾ ಆರ್‌ಎಸಿ ಟಿಕೆಟ್ ಆದಲ್ಲಿ ಅದು ತುಂಡಾಗಿದ್ದರೆ, ಡುಪ್ಲಿಕೇಟ್ ಟಿಕೆಟ್ ಅನ್ನು ಪಡೆಯಬಹುದು. ಅದಕ್ಕಾಗ ಪ್ರಯಾಣಿಕರು ರಿಸರ್ವೇಷನ್ ಚಾರ್ಟ್ ತಯಾರಾಗಿದ್ದರೆ ಶೇಕಡ 25ರಷ್ಟು ಪಾವತಿ ಮಾಡಬೇಕಾಗುತ್ತದೆ. ರಿಸರ್ವೇಷನ್ ಚಾರ್ಟ್ ತಯಾರಾಗಿಲ್ಲದಿದ್ದರೆ, ಅಷ್ಟೇ ಮೊತ್ತವನ್ನು ದಂಡವಾಗಿ ಪಾವತಿಸಬೇಕು.
2. ಭಾರತೀಯ ರೈಲ್ವೆ ಪ್ರಕಾರ, ವೇಟಿಂಗ್ ಲೀಸ್ಟ್‌ನಲ್ಲಿರುವ ಟಿಕೆಟ್ ಕಳೆದುಹೋದರೆ ಅಥವಾ ಹಾಳಾದರೆ ಅದಕ್ಕೆ ಡುಪ್ಲಿಕೇಟ್ ಟಿಕೆಟ್ ಅನ್ನು ನೀಡಲಾಗದು.
3. ಟಿಕೆಟ್ ಹರಿದಿದ್ದರೆ ಅಥವಾ ಬೇರೆ ಬಣ್ಣ ತಗುಲಿ ಹಾಳಾಗಿದ್ದರೆ, ಟಿಕೆಟ್‌ನ ಮುಖಬೆಲೆಯನ್ನು ನೋಡಿಕೊಂಡು ರಿಫಂಡ್ ಮಾಡಲಾಗುತ್ತದೆ.
4. ಆರ್‌ಎಸಿ ಟಿಕಟ್ ಆಗಿದ್ದಲ್ಲಿ, ರಿಸರ್ವೇಷನ್ ಚಾರ್ಟ್ ಸಿದ್ಧವಾದ ಬಳಿಕ ಯಾವುದೇ ಡುಪ್ಲಿಕೇಟ್ ಟಿಕೆಟ್ ಅನ್ನು ನೀಡಲಾಗುವುದಿಲ್ಲ.
5. ಡುಪ್ಲಿಕೇಟ್ ಟಿಕೆಟ್ ಪಡೆದ ಬಳಿಕ ಒರಿಜಿನಲ್ ಟಿಕೆಟ್ ನಿಮಗೆ ಲಭ್ಯವಾದರೆ, ಎರಡು ಟಿಕೆಟ್ ಅನ್ನು ರೈಲು ಹೊರಡುವುದಕ್ಕೂ ಮುನ್ನ ಟಿಕೆಟ್ ಕೇಂದ್ರದಲ್ಲಿ ತೋರಿಸಬೇಕು. ಆ ಸಂದರ್ಭದಲ್ಲಿ ಡುಪ್ಲಿಕೇಟ್ ಟಿಕೆಟ್‌ಗೆ ಪಾವತಿಸಿದ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಆದರೂ ಶೇಕಡ 5ರಷ್ಟು ಅಥವಾ ಕನಿಷ್ಠ 20 ರೂಪಾಯಿ ಕಡಿತಗೊಳಿಸಲಾಗುತ್ತದೆ.


Click it and Unblock the Notifications