ಬೆಂಗಳೂರು, ಜುಲೈ 5: ಜಗತ್ತಿನ ಐಟಿ ದಿಗ್ಗಜ ಕಂಪೆನಿಯೊಂದರ ಸಿಇಒ ಒಬ್ಬರು ಮದುವೆಯಾಗಿದ್ದು ಐಎಎಸ್ ಅಧಿಕಾರಿ ಮಗಳನ್ನು. ಆ ಮಾಲೀಕರ ತಂದೆಯೂ ಐಎಎಸ್ ಅಧಿಕಾರಿಯಾಗಿದ್ದವರು, ಅವರು ಓದಿದ್ದು ಕರ್ನಾಟಕದ ಮಣಿಪಾಲದಲ್ಲಿ ಅವರು ಪ್ರೇರಣದಾಯಕ ಕಥೆ ಇಲ್ಲಿದೆ.
ತಂತ್ರಜ್ಞಾನ ಲೋಕದ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿರುವ ಸತ್ಯ ನಾಡೆಲ್ಲಾ ಅವರ ಪೂರ್ಣ ಹೆಸರು ಸತ್ಯ ನಾರಾಯಣ್ ನಾಡೆಲ್ಲಾ. ಇವರು 1967 ಹೈದರಾಬಾದ್‌ನಲ್ಲಿ ಜನಿಸಿದ್ದು ಜಾಗತಿಕವಾಗಿ ಖ್ಯಾತಿ ಗಳಿಸಿದ ಭಾರತೀಯ ಮೂಲದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ನಂತರ ಮೂರನೇಯ ಸಿಇಒ ಆಗಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ನ ಚುಕ್ಕಾಣಿ ಹಿಡಿದಿದ್ದಾರೆ. 2014ರಲ್ಲಿ ಸಿಇಒ ಸ್ಥಾನಕ್ಕೇರುವ ಮೊದಲು ಅವರು ಕಂಪನಿಯ ಕ್ಲೌಡ್ ಮತ್ತು ಎಂಟರ್‌ಪ್ರೈಸ್ ಗ್ರೋಪ್ ನ ಎಕ್ಸಿಕ್ಯೂಟಿವ್ ವೈಸ್-ಪ್ರೆಸಿಡೆಂಟ್ ಆಗಿದ್ದರು.
ಸತ್ಯ ನಾಡೆಲ್ಲಾ ಅವರ ತಾಯಿ ಸಂಸ್ಕೃತ ಉಪನ್ಯಾಸಕಿಯಾಗಿದ್ದು ಅವರ ತಂದೆ ಬುಕ್ಕಪುರಂ ನಾಡೆಲ್ಲಾ ಯುಗಂಧರ್, 1962 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದರು. ಸತ್ಯ ಅವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ನಾಟಕದ ಬೆಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿಇಂಜಿನಿಯರಿಂಗ್ ಪದವಿ ಪಡೆದರು. ಆ ಬಳಿಕ ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಬಳಿಕ ಚಿಕಾಗೋ ವಿಶ್ವವಿದ್ಯಾಲಯದಿಂದ ಎಂಬಿಎ ಪೂರ್ಣಗೊಳಿಸಿದರು.

ಸತ್ಯ 1992 ರಲ್ಲಿ ಮೈಕ್ರೋಸಾಫ್ಟ್‌ಗೆ ಸೇರುವ ಮೊದಲು ಸ್ವಲ್ಪ ಸಮಯದ ಕಾಲ ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಿದರು.
2013 ರಲ್ಲಿ, ಅವರ ಒಟ್ಟು ಕಂಪೆನ್ಸಷನ್ 7.6 ಮಿಲಿಯನ್ ಆಗಿದ್ದು, 2016 ರಲ್ಲಿ, ಅವರ ನೆಟ್ ಕಂಪೆನ್ಸಷನ್ 84.5 ಮಿಲಿಯನ್ ಡಾಲರ್ ಆಗಿತ್ತು. 1992ರಲ್ಲಿ ಸತ್ಯ ಅವರು ಐಎಎಸ್ ಅಧಿಕಾರಿ ಕೆ.ಆರ್ ವೇಣುಗೋಪಾಲ್ ಪುತ್ರಿ ಅನುಪಮಾ ಅವರನ್ನು ವಿವಾಹವಾದರು.
ಸತ್ಯ ಮಣಿಪಾಲದಲ್ಲಿ ಓದುತ್ತಿರುವಾಗ ಅನುಪಮ ಅವರ ಜೂನಿಯರ್ ಆಗಿದ್ದು ಬಿ ಆರ್ಕಿಟೆಕ್ಚರ್ ಅಭ್ಯಾಸಿಸುತ್ತಿದ್ದರು. ದಂಪತಿಗಳಿಗೆ ಸದ್ಯ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇವರ ಹಿರಿಯ ಪುತ್ರ ಝೈನ್ ನಾಡೆಲ್ಲಾ 2022ರ ಫೆಬ್ರವರಿ 28ರಂದು 26 ನೇ ವಯಸ್ಸಿನಲ್ಲಿ ನಿಧನರಾದರು.ಮಗ ಝೈನ್ ನಾಡೆಲ್ಲಾ ಅವರು ಹುಟ್ಟಿನಿಂದಲೂ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ (ಮೆದುಳಿನ ನರಕ್ಕೆ ಸಂಬಂಧಿಸಿದ ಕಾಯಿಲೆ) ಬಳಲುತ್ತಿದ್ದರು
ಕವಿತೆಗಳನ್ನು ಓದಲು ಇಷ್ಟಪಡುವ ಸತ್ಯ ನಾಡೆಲ್ಲಾ ಕ್ರಿಕೆಟ್ ಪ್ರೇಮಿಯೂ ಆಗಿದ್ದಾರೆ. ಸತ್ಯ ಅವರ ನಿವ್ವಳ ಆಸ್ತಿ ಮೌಲ್ಯವು 6200 ಕೋಟಿ ರೂ. ಆಗಿದ್ದು, ಅವರ ಕಂಪನಿಯ ಮಾರುಕಟ್ಟೆ ಮೌಲ್ಯವು 2.5 ಟ್ರಿಲಿಯನ್ ಡಾಲರ್ ಆಗಿದೆ.
2021-2022ರ ಹಣಕಾಸು ವರ್ಷದಲ್ಲಿ ಸತ್ಯ ನಾಡೆಲ್ಲಾ ಅವರ ವಾರ್ಷಿಕ ಕಂಪೆನ್ಸಷನ್ 54.9 ಮಿಲಿಯನ್ ಡಾಲರ್ ಆಗಿತ್ತುಕಳೆದ ವರ್ಷ ಅವರು ಸುಮಾರು 49 ಮಿಲಿಯನ್ ಡಾಲರ್ ಗಳಷ್ಟು ಸಂಪಾದಿಸಿದ್ದಾರೆ. ಪ್ರಸ್ತುತ ಡಾಲರ್ ದರದಲ್ಲಿ, ಇದು 450 ಕೋಟಿ ರೂ. ಆಗಿದೆ. ಸತ್ಯ ನಾಡೆಲ್ಲಾ ಅವರ ಮೂಲ ವೇತನ 2.5 ಮಿಲಿಯನ್ ಡಾಲರ್ ಆಗಿದ್ದು ಸ್ಟಾಕ್ ಆಪ್ಷನ್ ನಲ್ಲಿ 42.3 ಮಿಲಿಯನ್ ಡಾಲರ್ ಗಳಿಸಿದ್ದಾರೆ.
More From GoodReturns

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications