For Quick Alerts
ALLOW NOTIFICATIONS  
For Daily Alerts

ಆರ್ಥಿಕ ಬಿಕ್ಕಟ್ಟು: ಬೆಲೆ ಏರಿಕೆ, ಮಾರುಕಟ್ಟೆ ಬಂದ್, ಪಾಕಿಸ್ತಾನದ ಸ್ಥಿತಿ ಹೇಗಿದೆ?

|

ಈ ಹಿಂದೆ ಭಾರತದ ನೆರೆಯ ದೇಶವಾದ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು, ಈಗ ಭಾರತದ ಮತ್ತೊಂದು ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಭಾರತದಲ್ಲಿಯೂ ಈ ಸ್ಥಿತಿ ಕಾಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ತಜ್ಞರು ಹೇಳುವುದು ಕೂಡಾ ಇದೆ. ಆದರೆ ಪಾಕಿಸ್ತಾನದಲ್ಲಿ ಪ್ರಸ್ತುತ ಏನಾಗಿದೆ, ಸ್ಥಿತಿ ಹೇಗಿದೆ ಎಂದು ತಿಳಿಯೋಣ ಮುಂದೆ ಓದಿ....

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ಹೆಚ್ಚಳವಾಗಿದೆಯೆಂದರೆ ಮಾಲ್, ಮಾರುಕಟ್ಟೆ, ವಿವಾಹ ಮಂದಿರ ಸೇರಿದಂತೆ ಹಲವಾರು ಕಚೇರಿಗಳನ್ನು ಮುಚ್ಚಲಾಗಿದೆ. ಮುಖ್ಯವಾಗಿ ಮಾಲ್‌ಗಳು ಕಾರ್ಯನಿರ್ವಹಣೆ ಮಾಡುವುದರಿಂದ ವಿದ್ಯುತ್ ಮೊದಲಾದ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. ಇದನ್ನು ಕಡಿತಗೊಳಿಸಲೆಂದು ಮಾಲ್‌ಗಳನ್ನು ಮುಚ್ಚಲಾಗಿದೆ.

Global Recession in 2023 : ಜಾಗತಿಕವಾಗಿ ಆರ್ಥಿಕ ಹಿಂಜರಿತದ ಸ್ಥಿತಿ ಬರುತ್ತಿದೆ: ತಜ್ಞರ ಅಭಿಮತGlobal Recession in 2023 : ಜಾಗತಿಕವಾಗಿ ಆರ್ಥಿಕ ಹಿಂಜರಿತದ ಸ್ಥಿತಿ ಬರುತ್ತಿದೆ: ತಜ್ಞರ ಅಭಿಮತ

ಇನ್ನು ದೈನಂದಿನವಾಗಿ ಬಳಕೆ ಮಾಡಲಾಗುವ ಹಿಟ್ಟು, ಸಕ್ಕರೆ, ತುಪ್ಪ ಮೊದಲಾದವುಗಳ ಬೆಲೆಯು ಭಾರೀ ಏರಿಕೆಯಾಗಿದೆ. ಸಾಲದ ಹೊರೆಯಲ್ಲಿ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ, ಹಣದುಬ್ಬರ, ರಾಜಕೀಯ ಅಸ್ಥಿರತೆ, ಜಿಡಿಪಿ ಬೆಳವಣಿಗೆ ಕುಂಠಿತವಾಗಿರುವುದು ಕೂಡಾ ತೀರಾ ಸಂಕಷ್ಟವನ್ನು ಸೃಷ್ಟಿ ಮಾಡಿದೆ. ಸರ್ಕಾರವು ಶಾಪಿಂಗ್ ಮಾಲ್, ಮಾರುಕಟ್ಟೆಯನ್ನು ನಿಗದಿತ ಸಮಯದವರೆಗೆ ಬಂದ್ ಮಾಡುವಂತೆ ಹೇಳಿದೆ. ಹಾಗಾದರೆ ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಎಷ್ಟಾಗಿದೆ, ಬೇರೆ ಏನೆಲ್ಲ ಸ್ಥಿತಿ ಬಿಗಾಡಾಯಿಸಿದೆ ತಿಳಿಯೋಣ ಮುಂದೆ ಓದಿ....

 ಆಹಾರದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ

ಆಹಾರದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ಮಟ್ಟಕ್ಕೆ ತಲುಪಿದೆಯೆಂದರೆ ಪಾಕಿಸ್ತಾನ ಸರ್ಕಾರವು ಯುಎಸ್‌ನಲ್ಲಿ ಪಾಕಿಸ್ತಾನ ರಾಯಭಾರಿ ಆಸ್ತಿಯನ್ನು ಹರಾಜು ಮಾಡಿದೆ. ಇನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಹಿಟ್ಟಿನ ಕೊರತೆ ಕಾಣಿಸಿಕೊಂಡಿದೆ. ಪಾಕಿಸ್ತಾನದಲ್ಲಿ ರೊಟ್ಟಿಯನ್ನು ಮಾಡಲು ಗೋಧಿ, ಮೊದಲಾದ ಹಿಟ್ಟನ್ನು ಬಳಸಲಾಗುತ್ತದೆ. ಆದರೆ ಲಾಹೋರ್‌ನಲ್ಲಿ ಯಾವುದೇ ಮಾರುಕಟ್ಟೆ, ಮಾಲ್‌ಗಳಲ್ಲಿ ಹಿಟ್ಟು ಲಭ್ಯವಾಗುತ್ತಿಲ್ಲ. ಹಿಟ್ಟಿನ ಕೊರತೆ ಇರುವುದರಿಂದ ಹಿಟ್ಟಿನ ಬೆಲೆಯು ಏರಿಕೆಯಾಗಿದೆ. 15 ಕೆಜಿ ಹಿಟ್ಟಿನ ಬ್ಯಾಗ್‌ಗೆ 2,050 ರೂಪಾಯಿಯನ್ನು ಪಾವತಿ ಮಾಡಬೇಕಾಗಿದೆ. ಎರಡು ವಾರಗಳ ಹಿಂದೆ ದಿಢೀರ್ ಆಗಿ 300 ರೂಪಾಯಿ ಏರಿಸಿದ ಬಳಿಕ ಈಗ ಹಿಟ್ಟಿಗೆ ಇಷ್ಟೊಂದು ದರವಿದೆ. ಇನ್ನು ಸರ್ಕಾರವು ಸಕ್ಕರೆ ದರವನ್ನು ಶೇಕಡ 25ರಷ್ಟು, ತುಪ್ಪದ ಬೆಲೆ ಶೇಕಡ 62ರಷ್ಟು ಹೆಚ್ಚಿಸಿದೆ. ಕೋಳಿ ಮಾಂಸಕ್ಕೆ ಕೆಜಿಗೆ 650 ರೂಪಾಯಿ ಆಗಿದೆ. ಪಾಕಿಸ್ತಾನದಲ್ಲಿ ಕೋಳಿ ಮಾಂಸವನ್ನು ಸಾಮಾನ್ಯ ಜನರ ಆಹಾರ ಎಂದು ಪರಿಗಣಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ದರವು 320 ರೂಪಾಯಿ ಆಗಿತ್ತು.

ಶ್ರೀಲಂಕಾ ಬಿಕ್ಕಟ್ಟು: ಈ ದೇಶಗಳು ಆರ್ಥಿಕ ಡೇಂಜರ್ ಝೋನ್‌ನಲ್ಲಿದೆ, ಭಾರತದ ಸ್ಥಿತಿ ಏನು?ಶ್ರೀಲಂಕಾ ಬಿಕ್ಕಟ್ಟು: ಈ ದೇಶಗಳು ಆರ್ಥಿಕ ಡೇಂಜರ್ ಝೋನ್‌ನಲ್ಲಿದೆ, ಭಾರತದ ಸ್ಥಿತಿ ಏನು?

 ಐಎಂಎಫ್ ಹಾಗೂ ಪಾಕಿಸ್ತಾನ

ಐಎಂಎಫ್ ಹಾಗೂ ಪಾಕಿಸ್ತಾನ

ದುರ್ಬಲಗೊಂಡ ವಿದ್ಯುತ್ ವಲಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನವು ಹಣಕಾಸು ಸಹಾಯವನ್ನು ಕೋರಿತ್ತು. ಆದರೆ ಸಾಲ ಲಭ್ಯವಾಗಿಲ್ಲ. ಇತ್ತೀಚೆಗೆ 1.1 ಬಿಲಿಯನ್ ಡಾಲರ್ ಅನ್ನು ಐಎಂಎಫ್ ಬಿಡುಗಡೆ ಮಾಡಿದೆ. ಆದರೆ ಈ ಪ್ರಕ್ರಿಯೆಯು ಕೊಂಚ ಅಧಿಕ ಸಮಯ ತೆಗೆದುಕೊಂಡಿದೆ. 2019ರಲ್ಲಿ ಪಾಕಿಸ್ತಾನಕ್ಕೆ ಐಎಂಎಫ್ 6 ಬಿಲಿಯನ್ ಡಾಲರ್ ಬಿಡುಗಡೆ ಮಾಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 3.9 ಬಿಲಿಯನ್ ಡಾಲರ್ ಬಿಡುಗಡೆ ಮಾಡಲಾಗಿದೆ. ಇನ್ನು ಸೆಪ್ಟೆಂಬರ್‌ನಲ್ಲಿ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ.

 ಪಾಕಿಸ್ತಾನದಲ್ಲಿ ರೂಪಾಯಿ ಮೌಲ್ಯ ಕುಸಿತ

ಪಾಕಿಸ್ತಾನದಲ್ಲಿ ರೂಪಾಯಿ ಮೌಲ್ಯ ಕುಸಿತ

ಹಣದುಬ್ಬರದ ನಡುವೆ ನೆರೆ ಕೂಡಾ ಪಾಕಿಸ್ತಾನಕ್ಕೆ ಪ್ರಭಾವ ಬೀರಿದೆ. ಜೂನ್ ಮತ್ತು ಅಕ್ಟೋಬರ್ 2022ರಂದು ಪಾಕಿಸ್ತಾನದಲ್ಲಿ ನೆರೆ ಉಂಟಾಗಿದೆ. ಇದು ಸುಮಾರು 33 ಮಿಲಿಯನ್ ಜನರಿಗೆ ಪ್ರಭಾವ ಉಂಟು ಮಾಡಿದೆ. ಹಾಗೆಯೇ ಸುಮಾರು 30 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಇನ್ನು ಈ ನೆರೆಯು ಪಾಕಿಸ್ತಾನದಲ್ಲಿ ಆಮದು, ರಫ್ತಿನ ಮೇಲೆಯೂ ಪರಿಣಾಮ ಬೀರಿದೆ. ಪಾಕಿಸ್ತಾನ ಬ್ಯೂರೋ ಸ್ಟಾಟಿಸ್ಟಿಕ್ಸ್ ಪ್ರಕಾರ ಡಿಸೆಂಬರ್‌ನಲ್ಲಿ ರಫ್ತು ಸುಮಾರು ಶೇಕಡ 16ರಷ್ಟು ಇಳಿಕೆಯಾಗಿ, 2.3 ಬಿಲಿಯನ್ ಡಾಲರ್ ಆಗಿದೆ. ಇನ್ನು 2022ರಲ್ಲಿ ಪಾಕಿಸ್ತಾನ ರೂಪಾಯಿ ಮೌಲ್ಯವು ಸುಮಾರು ಶೇಕಡ 30ರಷ್ಟು ಕುಸಿತ ಕಂಡಿದೆ.

English summary

Pakistan Economic Crisis: What Happening in India's neighbour Country Pakistan, Explained in Kannada

Pakistan Economic Crisis: What Happening in India's neighbour Country Pakistan, Why pakistan forced to shut malls, markets, wedding halls. Explained in Kannada.
Story first published: Saturday, January 7, 2023, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X