ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಲು ದಕ್ಷಿಣ ರೈಲ್ವೆ ಸಜ್ಜಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಇತರ ಐದು ಇತರೆ ವಂದೇ ಭಾರತ್ ರೈಲು ಸೇವೆಗಳ ಜೊತೆಗೆ ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕೂಡಾ ಆರಂಭ ಮಾಡುವ ನಿರೀಕ್ಷೆಯಿದೆ.
ಪಾಲಕ್ಕಾಡ್ ವಿಭಾಗವು ಈ ರೈಲು ಆರಂಭವನ್ನು ಖಚಿತಪಡಿಸಿದೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ಪ್ರಕಾರ, ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರ್ಮ್ ನಂ. 1 ರಲ್ಲಿ ಪ್ರಾರಂಭಿಸಲು ವಿಭಾಗವು ವಿಸ್ತಾರವಾದ ಸಿದ್ಧತೆಗಳನ್ನು ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಲುಗಡೆ
* ಮಂಗಳೂರು ಸೆಂಟ್ರಲ್
* ಉಡುಪಿ
* ಕಾರವಾರ
* ಮಡಗಾಂವ್
ವಿಭಾಗದಿಂದ ದೃಢೀಕರಿಸದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಸೇವೆಯು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 8.30 ಕ್ಕೆ ಹೊರಡುವ ಮೂಲಕ ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪುತ್ತದೆ. ಸುಮಾರು 320 ಕಿ.ಮೀ ದೂರವಿದೆ. ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇರಲಿದೆ. ಹಿಂದಿರುಗುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್ ಮಡಗಾಂವ್‌ನಿಂದ ಸಂಜೆ 6.10 ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ರಾತ್ರಿ 10.45 ಕ್ಕೆ ತಲುಪುತ್ತದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸೆಪ್ಟೆಂಬರ್ 22 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಂಗಳೂರು-ಮಡ್ಗಾಂವ್, ಮಂಗಳೂರು-ತಿರುವನಂತಪುರಂ ಮತ್ತು ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಸೇವೆಗಳ ಆರಂಭಕ್ಕಾಗಿ ಮನವಿ ಮಾಡಿದ್ದರು.
ಸಚಿವಾಲಯವು ಮಡಗಾಂವ್ ಸೇವೆಗೆ ಅನುಮತಿ ನೀಡಿದ್ದು, ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ಮತ್ತು ಸಕಲೇಶಪುರ ನಿಲ್ದಾಣದ ನಡುವಿನ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಬೆಂಗಳೂರು ಸೇವೆಯನ್ನು ಆರಂಭ ಮಾಡುವ ಸಾಧ್ಯತೆಯಿದೆ.
ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು
ವಿಬಿ ಸೇವೆಯನ್ನು ಆರಂಭ ಮಾಡುವಾಗ, ಪ್ರಧಾನಿ ಮೋದಿ ಅವರು ಮಂಗಳೂರು ಸೆಂಟ್ರಲ್‌ನಲ್ಲಿ ಎರಡು ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು 4 ಮತ್ತು 5 ಅನ್ನು ಉದ್ಘಾಟನೆ ಮಾಡುವ ಸಾಧ್ಯತೆಯಿದೆ. ಇನ್ನು ಗುರುವಾರದಿಂದ ಯಶವಂತಪುರ-ಕಾಚೇಗೌಡ ವಂದೇ ಭಾರತ್ ಎಕ್ಸ್‌ಪ್ರೆಸ್ 15 ನಿಮಿಷಗಳ ಕಡಿಮೆ ಅವಧಿಯಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ಇದು ಹಿಂದಿನ 8 ಗಂಟೆ 30 ನಿಮಿಷಗಳಿಗಿಂತ 15 ನಿಮಿಷ ಕಡಿಮೆಯಾಗಿ 8 ಗಂಟೆ 15 ನಿಮಿಷಗಳಲ್ಲಿ ದೂರವನ್ನು ಕ್ರಮಿಸುತ್ತದೆ.


Click it and Unblock the Notifications