ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆಗಳು ಕೂಡಾ ನಡೆಯುತ್ತಿದೆ. ಡಿಸೆಂಬರ್ 8 ರಂದು, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶವು 4,500 ವಂದೇ ಭಾರತ್ ರೈಲುಗಳನ್ನು ಹೊಂದಲಿದೆ ಎಂದು ಭರವಸೆ ನೀಡಿದ್ದಾರೆ.
ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಂದರೆ ಡಿಸೆಂಬರ್ 18 ರಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇಂದು, ಉದ್ಘಾಟನೆಯಾದರೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಕಾರ್ಯಾಚರಣೆಯು ಡಿಸೆಂಬರ್ 20, 2023 ರಂದು ಪ್ರಾರಂಭವಾಗಲಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಎಲ್ಲಿ ಆರಂಭ, ಈ ರೈಲಿನ ವಿಶೇಷತೆ ಮೊದಲಾದ ನೀವು ತಿಳಿದಿರಬೇಕಾದ ಹತ್ತು ಮಾಹಿತಿಗಳು ಇಲ್ಲಿದೆ, ಮುಂದೆ ಓದಿ...

ಈ ವಂದೇ ಭಾರತ್ ರೈಲಿನ ಬಗ್ಗೆ ಮಾಹಿತಿ
1. ಉತ್ತರ ರೈಲ್ವೆ ಹೊರಡಿಸಿದ ಹೇಳಿಕೆಯ ಪ್ರಕಾರ, ವಾರಣಾಸಿ-ದೆಹಲಿ ಮಾರ್ಗದಲ್ಲಿ ಈ 2 ನೇ ವಂದೇ ಭಾರತ್ ರೈಲು ಸಂಚಾರ ಮಾಡಲಿದ್ದು, ಇದು ಕೇಸರಿ ಬಣ್ಣದ್ದಾಗಿದೆ. ಇದು ಹಲವಾರು ಹೊಸ ಫೀಚರ್‌ಗಳನ್ನು ಹೊಂದಿದೆ.
2. ಉತ್ತರ ರೈಲ್ವೆಯ ಪ್ರಕಾರ, ರೈಲು ಆನ್‌ಬೋರ್ಡ್ ವೈ-ಫೈ ಇನ್ಫೋಟೈನ್‌ಮೆಂಟ್, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಪ್ಲಶ್ ಇಂಟೀರಿಯರ್‌ಗಳು, ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಡಿಫ್ಯೂಸ್ಡ್ ಎಲ್ಇಡಿ ಲೈಟಿಂಗ್, ಚಾರ್ಜಿಂಗ್ ಪಾಯಿಂಟ್‌ಗಳಂತಹ ಉನ್ನತ ಸೌಲಭ್ಯಗಳನ್ನು ಹೊಂದಿದೆ.
3. ಹೆಚ್ಚುವರಿಯಾಗಿ, ಇದು ಸೂಕ್ಷ್ಮಾಣು-ಮುಕ್ತ ಯುವಿ ಲ್ಯಾಂಪ್ ಅನ್ನು ಹೊಂದಿದೆ. ಇದು ಉತ್ತಮ ಗಾಳಿ, ಶಾಖಕ್ಕೆ ಸಹಕಾರಿ. ಎರ್ ಕಂಡಿಷನರ್ ಇದೆ.
4. ರೈಲು ವಾರಣಾಸಿಯಿಂದ ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2:05 ಕ್ಕೆ ನವದೆಹಲಿ ತಲುಪಲಿದೆ. ರೈಲು ವಾರಣಾಸಿಗೆ 55 ನಿಮಿಷಗಳ ನಂತರ ಮಧ್ಯಾಹ್ನ 3:00 ಕ್ಕೆ ಹೊರಟು ರಾತ್ರಿ 11:05 ಕ್ಕೆ ವಾರಣಾಸಿಗೆ ತಲುಪುತ್ತದೆ.
5. ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಚಲಿಸುತ್ತದೆ.
6. ವಾರಣಾಸಿಯಿಂದ ಬೆಳಿಗ್ಗೆ 6:00 ಗಂಟೆಗೆ ಹೊರಡುವ ರೈಲು 07:34 ಕ್ಕೆ ಪ್ರಯಾಗರಾಜ್, 09:30 ಕ್ಕೆ ಕಾನ್ಪುರ ಸೆಂಟ್ರಲ್ ಮತ್ತು ಅಂತಿಮವಾಗಿ 2:05 ಕ್ಕೆ ನವದೆಹಲಿ ತಲುಪುತ್ತದೆ. ಹಿಂದಿರುಗುವಾಗ ಮಧ್ಯಾಹ್ನ 3:00 ಗಂಟೆಗೆ ಹೊರಟು, ಕಾನ್ಪುರ ಸೆಂಟ್ರಲ್ ಅನ್ನು 7:12 ಕ್ಕೆ ತಲುಪುತ್ತದೆ, ರಾತ್ರಿ 9:15 ಕ್ಕೆ ಪ್ರಯಾಗರಾಜ್ ತಲುಪುತ್ತದೆ ಮತ್ತು 11:05 ಕ್ಕೆ ವಾರಣಾಸಿಯಲ್ಲಿ ತನ್ನ ಪ್ರಯಾಣವನ್ನು ಕೊನೆ ಮಾಡುತ್ತದೆ.
7. ಪ್ರಸ್ತುತ ನವದೆಹಲಿ ಮತ್ತು ವಾರಣಾಸಿ ನಡುವೆ ಮಾರ್ಗದಲ್ಲಿ ಮೊದಲ ವಂದೇ ಭಾರತ್ ರೈಲು 22436 ಚಲಿಸುತ್ತದೆ. ಇದು ದೆಹಲಿಯಿಂದ ಬೆಳಿಗ್ಗೆ 6:00 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 2:00 ಕ್ಕೆ ತನ್ನ ವಾರಣಾಸಿಗೆ ತಲುಪುತ್ತದೆ. ಆದರೆ ನವದೆಹಲಿಗೆ ಮಧ್ಯಾಹ್ನ 3:00 ಕ್ಕೆ ಹೊರಟು ರಾತ್ರಿ 11:00 ಗಂಟೆಗೆ ತಲುಪುತ್ತದೆ. ಈ ರೈಲು ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತದೆ.
8. ದಿ ಹಿಂದೂ ವರದಿಯ ಪ್ರಕಾರ, ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆಯ ಮೇರೆಗೆ ಈ ಎರಡನೇ ರೈಲನ್ನು ಪ್ರಾರಂಭಿಸಲಾಗುತ್ತಿದೆ.
9. ಮೊದಲ ಕೇಸರಿ-ಬೂದು ವಂದೇ ಭಾರತ್ ರೈಲು ಕಾಸರಗೋಡು ಮತ್ತು ಕೇರಳದ ತಿರುವನಂತಪುರಂ ನಡುವೆ ಸೆಪ್ಟೆಂಬರ್ 24 ರಂದು ಪ್ರಾರಂಭಿಸಲಾಯಿತು. ಸೆಪ್ಟೆಂಬರ್ 24 ರಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನ ಮಂತ್ರಿಗಳು ಇದಕ್ಕೆ ಚಾಲನೆ ನೀಡಿದ ಒಂಬತ್ತು ವಂದೇ ಭಾರತ್ ರೈಲುಗಳಲ್ಲಿ ಇದೂ ಒಂದಾಗಿದೆ.
10. ಇತ್ತೀಚೆಗೆ ಮಾಧ್ಯಮದವರೊಂದಿಗಿನ ಮಾತುಕತೆಯಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕಿತ್ತಳೆ ಅಥವಾ ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು. ಬಣ್ಣಗಳ ಆಯ್ಕೆಯು ವೈಜ್ಞಾನಿಕ ಚಿಂತನೆಯಷ್ಟೇ ಎಂದರು.
"ಮನುಷ್ಯನ ಕಣ್ಣುಗಳಿಗೆ, ಹಳದಿ ಮತ್ತು ಕಿತ್ತಳೆ ಎರಡು ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಯುರೋಪ್‌ನಲ್ಲಿ ಸುಮಾರು ಶೇಕಡ 80 ರಷ್ಟು ರೈಲುಗಳು ಕಿತ್ತಳೆ ಅಥವಾ ಹಳದಿ ಸಂಯೋಜನೆಯನ್ನು ಹೊಂದಿದೆ," ಎಂದು ವೈಷ್ಣವ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


Click it and Unblock the Notifications