For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

|

ರೈತರು ಕೃಷಿ ಅಗತ್ಯಗಳನ್ನು ಪೂರೈಸಲು ಬೇಕಾದ ಅಗತ್ಯ ಹಣವನ್ನು ಪಡೆಯುವ ನಿಟ್ಟಿನಲ್ಲಿ ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಸ್‌ಬಿಐ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

 

ರೈತರಿಗೆ ಸಹಾಯಕ ಕಾರ್ಯಾಚರಣೆಗಾಗಿ ಬೇಕಾದ ವೆಚ್ಚಗಳನ್ನು ಭರಸಲು ಎಸ್‌ಬಿಐ ಸಾಲವನ್ನು ಒದಗಿಸುತ್ತದೆ. ಎಸ್‌ಬಿಐನ ಈ ಎಸ್‌ಬಿಐ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಮೂಲಕ ತಕ್ಷಣ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

SBI YONO ಆ್ಯಪ್ ಬಳಸಿ ಎಫ್‌ಡಿ ಅಕೌಂಟ್ ಆರಂಭಿಸುವುದು ಹೇಗೆ?

ಎಸ್‌ಬಿಐ ಪ್ರಕಾರ ಈ ಕೆಳಗಿನವುಗಳು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಸಲ್ಲಿಸಲು ಬೇಕಾದ ದಾಖಲೆಗಳು. ಹಾಗೆಯೇ ಇಲ್ಲಿ ಎಸ್‌ಬಿಐ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ ಪ್ರಯೋಜನಗಳನ್ನು, ಬಡ್ಡಿದರ, ಅರ್ಹತೆ, ಅರ್ಜಿ ಪ್ರಕ್ರಿಯೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮುಂದೆ ಓದಿ..

 ಎಸ್‌ಬಿಐ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ ವೈಶಿಷ್ಟ್ಯಗಳು

* ಇದು ಕ್ಯಾಷ್‌ ಕ್ರೆಡಿಟ್‌ ಕಾರ್ಡ್ ವ್ಯವಸ್ಥೆಯಾಗಿದೆ, ಇದರಲ್ಲಿ ಕ್ರೆಡಿಟ್‌ ಬ್ಯಾಲೆನ್ಸ್‌ ಇದ್ದರೆ ಅದಕ್ಕೆ ಉಳಿತಾಯ ಬ್ಯಾಂಕ್ ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ
* ಪ್ರತಿ ವರ್ಷ ಸಾಲದ ಮೊತ್ತದಲ್ಲಿ ವಾರ್ಷಿಕ ಹತ್ತು ಶೇಕಡ ಹೆಚ್ಚಳದೊಂದಿಗೆ ಐದು ವರ್ಷಗಳ ಕಾಲದ ಅವಧಿಗೆ ಸಾಲವನ್ನು ಪಡೆಯಬಹುದು
* ಮೂರು ಲಕ್ಷಕ್ಕಿಂತ ಅಧಿಕ ಹಣದ ಸಕಾಲಿಕ ಸಾಲಗಾರರಿಗೆ ಶೇಕಡ ಮೂರರಷ್ಟು ಬಡ್ಡಿ ಮನ್ನಾ ಮಾಡಲಾಗುತ್ತದೆ
* ಬೆಳೆಗೆ ಮರುಪಾವತಿಯ ಅವಧಿಯನ್ನು ಬೆಳೆ ಬರುವ ಅವಧಿ ಅಥವಾ ಬೆಳೆಯ ಮಾರುಕಟ್ಟೆ ಅವಧಿಯಲ್ಲಿ ನಿರ್ಧಾರ ಮಾಡಲಾಗುತ್ತದೆ
* ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯುವ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಪಡೆಯಲು ಸಾಧ್ಯ
* ಅರ್ಹ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಬರುತ್ತದೆ
* ಮೂರು ಲಕ್ಷದವರಗೆ ಸಾಲಕ್ಕೆ, ಬಡ್ಡಿದರವು ಶೇಕಡ 7 ರೂಪಾಯಿ ಆಗಿದೆ. ಮೂರು ಲಕ್ಷಕ್ಕಿಂತ ಅಧಿಕ ಸಾಲಕ್ಕೆ ಬಡ್ಡಿದರ ಬದಲಾಗುತ್ತದೆ

ಈ ಕಾರ್ಡ್ ಅನ್ನು ಪಡೆಯಬೇಕಾದರೆ ರೈತರು ಆಗಿರಬೇಕು, ಗೇಣಿದಾರ ರೈತರು, ಗುತ್ತಿಗೆದಾರರು ಅಥವಾ ಷೇರು ಮುಖಾಂತರ ಬೆಳೆ ಬೆಳೆಯುವವರು ಸಹ ಈ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಹಿಡುವಳಿದಾರ ರೈತರು, ಷೇರು ಬೆಳೆಗಾರರು ಇತ್ಯಾದಿ ಸೇರಿದಂತೆ ರೈತರ ಸ್ವಸಹಾಯ ಗುಂಪುಗಳು ಅಥವಾ ಜಂಟಿ ಹೊಣೆಗಾರಿಕೆ ಗುಂಪುಗಳು ಕೂಡಾ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.

 

ಎಸ್‌ಬಿಐ ದಸರಾ ವಿಶೇಷ: ಕಾರು, ಚಿನ್ನದ ಸಾಲದ ಮೇಲೆ ವಿಶೇಷ ಕೊಡುಗೆ

ಅರ್ಜಿಗಾಗಿ ಅಪ್ಲೈ ಮಾಡುವುದು ಹೇಗೆ?

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ರೈತರಿಗೆ ಬ್ಯಾಂಕುಗಳ ಮೂಲಕ ಹೆಚ್ಚಿನ ಬಡ್ಡಿ ನೀಡಿ ಸಾಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕೆಸಿಸಿಗೆ ಬಡ್ಡಿದರವು 2%ರಿಂದ ಆರಂಭವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಸುಲಭ. ಹೇಗೆ ಎಂದು ಈ ಕೆಳಗೆ ತಿಳಿಯಿರಿ.

* ಮೊದಲು ವೆಬ್ ಸೈಟ್‌ನ https://sbi.co.in/web/agri-rural/home ಲಿಂಕ್ ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಬಹುದು
* ಎಸ್‌ಬಿಐ ಕಚೇರಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬಹುದು
* ಬ್ಯಾಂಕ್‌ನಲ್ಲಿ ಈ ಅರ್ಜಿಯನ್ನು ಅಲ್ಲಿನ ಸಿಬ್ಬಂದಿಗಳು ಪರಿಶೀಲನೆ ಮಾಡುತ್ತಾರೆ
* ಆನ್‌ಲೈನ್ ಅಪ್ಲಿಕೇಶನ್‌ಗಾಗಿ, ಎಸ್‌ಬಿಐ ಯೋನೋ ಆಪ್‌ ಮೂಲಕ ಲಾಗ್‌ಇನ್‌ ಮಾಡಿ, ಡ್ಯಾಶ್‌ಬೋರ್ಡ್‌ನ ಕೆಳಭಾಗದಲ್ಲಿರುವ ಯೋನೋ ಕೃಷಿ ಅನ್ನು ಟ್ಯಾಪ್‌ ಮಾಡಬೇಕು
* ನಂತರ ಭಾಷೆಯನ್ನು ಆಯ್ಕೆ ಮಾಡಬಹುದು ಮತ್ತು ಖಾತಾ ಮೇಲೆ ಟ್ಯಾಪ್‌ ಮಾಡಬಹುದು, ಬಳಿಕ ಕಿಸಾನ್‌ ಕ್ರೆಡಿಟ್‌ ಕಾರ್ಡ್ ಮತ್ತು ಪರಿಶೀಲನೆಗಾಗಿ ಅರ್ಜಿ ಟ್ಯಾಪ್‌ ಮಾಡಬೇಕು

English summary

SBI Kisan Credit Card: Here’s How To Apply Online & Offline

SBI Kisan Credit Card: Here’s How To Apply Online & Offline.
Story first published: Sunday, October 31, 2021, 17:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X