ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್) ಜನಪ್ರಿಯ 20653 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದ ಸಮಯವನ್ನು 50 ನಿಮಿಷಗಳವರೆಗೆ ಕಡಿಮೆ ಮಾಡಲು ನಿರ್ಧರಿಸಿದೆ.
ಈ ರೈಲಿನ ಪ್ರಯಾಣದ ಸಮಯ ಕಡಿತದಿಂದಾಗಿ ಬೆಂಗಳೂರಿನಿಂದ ಪ್ರಯಾಣಿಕರು 50 ನಿಮಿಷ ವೇಗವಾಗಿ ತಲುಪಲು ಸಹಾಯವಾಗಲಿದೆ. ಇನ್ನು ಇತ್ತೀಚೆಗೆ ಮೈಸೂರು ಬೆಳಗಾವಿ ರೈಲಿನ ಪ್ರಯಾಣ ಸಮಯವನ್ನು ಕೂಡಾ ತಗ್ಗಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ.....

ಕೆಎಸ್ಆರ್ ಬೆಂಗಳೂರು - ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಮಾರ್ಚ್ 21, 2024 ರಿಂದ ಪ್ರಾರಂಭವಾಗುವ 20653 ಕೆಎಸ್‌ಆರ್ ಬೆಂಗಳೂರು - ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವೇಳಾಪಟ್ಟಿಯ ಹೊಂದಾಣಿಕೆ ಆಗಲಿದೆ. ಅದರ ಸಾಮಾನ್ಯ ಆಗಮನದ ಸಮಯ 07:35 ಗಂಟೆಗಳ ಬದಲಿಗೆ, ರೈಲು ಈಗ 06:45 ಗಂಟೆಗೆ ಬೆಳಗಾವಿಯನ್ನು ತಲುಪುತ್ತದೆ. ಪ್ರಯಾಣಿಕರಿಗೆ ಪರಿಷ್ಕೃತ ಮತ್ತು ಹೆಚ್ಚು ಅನುಕೂಲಕರ ವೇಳಾಪಟ್ಟಿಯನ್ನು ಒದಗಿಸುತ್ತದೆ.
ಕಡಿಮೆಯಾದ ಪ್ರಯಾಣದ ಅವಧಿ
ಪ್ರಯಾಣದ ಸಮಯದಲ್ಲಿ ಗಮನಾರ್ಹವಾದ ಕಡಿತವು ಪ್ರಯಾಣಿಕರಿಗೆ ಸಹಾಯವಾಗಲಿದೆ. 20653 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಬೆಳಗಾವಿ ಎಸ್‌ಎಫ್ ಎಕ್ಸ್‌ಪ್ರೆಸ್, 610 ಕಿಲೋಮೀಟರ್ ಮಾರ್ಗವನ್ನು ಒಳಗೊಂಡಿದೆ. ಈಗ ತನ್ನ ಪ್ರಯಾಣವನ್ನು 10 ಗಂಟೆ 35 ನಿಮಿಷಗಳ ಬದಲಿಗೆ ಕೇವಲ 9 ಗಂಟೆ 45 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ.
ಈ ಹಿಂದಿನ ಪ್ರಯಾಣದ ಸಮಯ ಹೇಗಿತ್ತು?
ಕೆಎಸ್ಆರ್ ಬೆಂಗಳೂರು: ರಾತ್ರಿ 09:00
ಯಶವಂತಪುರ: ರಾತ್ರಿ 09:12
ತುಮಕೂರು: ರಾತ್ರಿ 10:02
ಅರಸೀಕೆರೆ: ರಾತ್ರಿ 11:20
ದಾವಣಗೆರೆ: ಮಧ್ಯರಾತ್ರಿ 1:20
ಎಸ್‌ಎಸ್‌ಎಸ್ ಹುಬ್ಬಳ್ಳಿ: ಮುಂಜಾನೆ 04:30
ಧಾರವಾಡ: ಮುಂಜಾನೆ 04:50
ಬೆಳಗಾವಿ: ಬೆಳಿಗ್ಗೆ 07:35
ಪರಿಷ್ಕೃತ ಸಮಯ ವಿವರ
ಕೆಎಸ್ಆರ್ ಬೆಂಗಳೂರು: ರಾತ್ರಿ 09:00
ಯಶವಂತಪುರ: ರಾತ್ರಿ 09:12
ತುಮಕೂರು: ರಾತ್ರಿ 09:53
ಅರಸೀಕೆರೆ: ರಾತ್ರಿ 11:10
ದಾವಣಗೆರೆ: ಮಧ್ಯರಾತ್ರಿ 1:10
ಎಸ್‌ಎಸ್‌ಎಸ್ ಹುಬ್ಬಳ್ಳಿ: ಮುಂಜಾನೆ 03:45
ಧಾರವಾಡ: ಮುಂಜಾನೆ 04:07
ಬೆಳಗಾವಿ: ಬೆಳಿಗ್ಗೆ 06:45
ರೈಲು ಸಂಖ್ಯೆ 20653 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಅವಲಂಬಿಸಿರುವವರಿಗೆ, ಈ ಬದಲಾವಣೆಗಳು ನಗರಗಳ ನಡುವೆ ಹೆಚ್ಚು ಸುವ್ಯವಸ್ಥಿತ ಮತ್ತು ಸಮಯ ಉಳಿಸುವ ಸಾರಿಗೆ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ.
ವಿವರವಾದ ಸಮಯ, ದರದ ಮಾಹಿತಿ ಮತ್ತು ನಿಲುಗಡೆಗಳನ್ನು ತಿಳಿಯಲು ಪ್ರಯಾಣಿಕರು http://www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಎನ್‌ಟಿಇಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ವೇಗ ಹೆಚ್ಚಳ
ಮೈಸೂರು ಮತ್ತು ಬೆಳಗಾವಿ ನಡುವಿನ ಪ್ರಯಾಣಿಕರಿಗೆ ಮಹತ್ವದ ಬೆಳವಣಿಗೆಯಲ್ಲಿ, ನೈರುತ್ಯ ರೈಲ್ವೆಯು ವ್ಯಾಪಕವಾಗಿ ಬಳಸಲಾಗುವ 17301 ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್‌ಗೆ ಪರಿಷ್ಕೃತ ವೇಳಾಪಟ್ಟಿಯನ್ನು ನವೀಕರಿಸಿದೆ. ಐಆರ್‌ಸಿಟಿಸಿ ಬುಕಿಂಗ್ ಸೈಟ್ ಪ್ರಕಾರ, ಹೊಸ ವರ್ಷದ ಆರಂಭದಿಂದ ಜಾರಿಗೆ ಬಂದಿದೆ.
ಪ್ರಯಾಣದ ಸಮಯದಲ್ಲಿ ಗಮನಾರ್ಹವಾದ ಕಡಿತ ಮಾಡಲಾಗಿದೆ. ಮೈಸೂರು ಮತ್ತು ಬೆಳಗಾವಿ ನಡುವಿನ 613-ಕಿಲೋಮೀಟರ್ ಮಾರ್ಗವನ್ನು ಈ ಹಿಂದೆ ದೀರ್ಘಾವಧಿಯಲ್ಲಿ ಸಂಚಾರ ಮಾಡಬೇಕಾಗಿತ್ತು. ಆದರೆ ಈಗ 17301 ಎಕ್ಸ್‌ಪ್ರೆಸ್ ಕೇವಲ 11 ಗಂಟೆ 15 ನಿಮಿಷಗಳಲ್ಲಿ ಸಂಚರಿಸಲಿದೆ.
17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ನಿರ್ಗಮನದ ಸಮಯದಲ್ಲಿ ಬದಲಾವಣೆ ಆಗಿದೆ. ಜನವರಿ 1, 2024 ರಿಂದ, ರೈಲು ಈಗ ಮೈಸೂರು ಜಂಕ್ಷನ್‌ನಿಂದ 21:30 ಗಂಟೆಗೆ ಹೊರಡಲಿದೆ, ಆದರೆ ಈ ಹಿಂದಿನಂತೆ 08:45ಕ್ಕೆ ಬೆಳಗಾವಿ ತಲುಪಲಿದೆ. ಇದಕ್ಕೂ ಮೊದಲು 20:45 ಗಂಟೆಗೆ ಪ್ರಯಾಣ ಆರಂಭ ಮಾಡುತ್ತಿತ್ತು.


Click it and Unblock the Notifications