For Quick Alerts
ALLOW NOTIFICATIONS  
For Daily Alerts

ಈಗ ಖರೀದಿ, ನಂತರ ಪಾವತಿ: ಪೇಟಿಎಂ ಪೋಸ್ಟ್ ಪೇಯ್ಡ್ ಬಗ್ಗೆ ಗೊತ್ತಾ?

|

ದಿನಸಿ ಅಂಗಡಿಗಳಲ್ಲಿ ಹಣ ಪಾವತಿಸಲು ಪೇಟಿಎಂನಿಂದ ಪೋಸ್ಟ್ ಪೇಯ್ಡ್ ಸವಲತ್ತು ಒದಗಿಸಲಿದೆ. ದಿನಸಿ, ಹಾಲು ಮತ್ತಿತರ ಪದಾರ್ಥಗಳನ್ನು ಖರೀದಿಸಿ, ಗ್ರಾಹಕರು ಪೇಟಿಎಂ ಪೋಸ್ಟ್ ಪೇಯ್ಡ್ ಮೂಲಕ ಪಾವತಿ ಮಾಡಬಹುದು. ರಿಲಯನ್ಸ್ ಫ್ರೆಷ್, ಹಲ್ದಿರಾಮ್, ಅಪೊಲೋ ಫಾರ್ಮಸಿ, ಕ್ರೋಮಾ, ಶಾಪರ್ಸ್ ಸ್ಟಾಪ್ ಇವೆಲ್ಲ ಕಡೆಯೂ ಪೇಟಿಎಂ ಪೋಸ್ಟ್ ಪೇಯ್ಡ್ ಬಳಸಬಹುದು.

ಇದರ ಜತೆಗೆ ಡಾಮಿನೋಸ್, ಟಾಟಾ ಸ್ಕೈ, ಪೆಪ್ಪರ್ ಫ್ರೈ, ಹಂಗರ್ ಬಾಕ್ಸ್, ಪತಂಜಲಿ, ಸ್ಪೆನ್ಸರ್ ನಲ್ಲೂ ಪೇಟಿಎಂ ಗ್ರಾಹಕರು ಬಿಲ್ ಪಾವತಿಸಬಹುದು. ಪೇಟಿಎಂ ಪೋಸ್ಟ್ ಪೇಯ್ಡ್ ನಲ್ಲಿ ಡಿಜಿಟಲ್ ಸಾಲ ವ್ಯವಸ್ಥೆ ದೊರೆಯುತ್ತದೆ. ಈಗ ಖರ್ಚು ಮಾಡಿ, ಮುಂದಿನ ತಿಂಗಳು ಹಣ ಪಾವತಿಸಬಹುದು.

ಜಿಯೋ ಭವಿಷ್ಯದ ಸವಾಲನ್ನು ಎದುರಿಸಲು ಪೇಟಿಎಂ ರಣತಂತ್ರ

 

ಕೊರೊನಾ ಸಂದರ್ಭದಲ್ಲಿ ಸಾಲಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೇಟಿಎಂನಿಂದ ತಿಂಗಳ ಸಾಲದ ಮಿತಿ 1 ಲಕ್ಷದ ತನಕ ದೊರೆಯುತ್ತದೆ.

ಪೇಟಿಎಂ ಪೋಸ್ಟ್ ಪೇಯ್ಡ್ ಹೇಗೆ ಕೆಲಸ ಮಾಡುತ್ತದೆ?

ಪೇಟಿಎಂ ಪೋಸ್ಟ್ ಪೇಯ್ಡ್ ಹೇಗೆ ಕೆಲಸ ಮಾಡುತ್ತದೆ?

ಆರಂಭದಲ್ಲಿ ಆಯ್ದ ಗ್ರಾಹಕರಿಗೆ ಹಣಕಾಸು ಸೇವೆಯಲ್ಲಿ ಪೋಸ್ಟ್ ಪೇಯ್ಡ್ ಐಕಾನ್ ಕಾಣಿಸುತ್ತದೆ. ಪೇಟಿಎಂ ಜತೆ ಸಹಭಾಗಿತ್ವ ಹೊಂದಿರುವ ಎನ್ ಬಿಎಫ್ ಸಿಗಳ ಆನ್ ಲೈನ್ ಕೆವೈಸಿಯನ್ನು ಗ್ರಾಹಕರು ಭರ್ತಿ ಮಾಡಬೇಕು. ಬಳಕೆದಾರರು ಪ್ರತಿ ತಿಂಗಳ 7ನೇ ತಾರೀಕು ಅಥವಾ ಅದಕ್ಕಿಂತ ಮುಂಚೆ ಬಿಲ್ ಪಾವತಿಸಬೇಕು. ಪೇಟಿಎಂ ಅಪ್ಲಿಕೇಷನ್ ಮೂಲಕ ಬಳಕೆದಾರರು ತಾವೆಷ್ಟು ಖರ್ಚು ಮಾಡಿದ್ದೀವಿ ಎಂದು ಪಾಸ್ ಬುಕ್ ಪರಿಶೀಲಿಸಬಹುದು.

ಲೈಟ್, ಡಿಲೈಟ್ ಹಾಗೂ ಎಲೈಟ್ ಮೂರು ಬಗೆ

ಲೈಟ್, ಡಿಲೈಟ್ ಹಾಗೂ ಎಲೈಟ್ ಮೂರು ಬಗೆ

ಪೇಟಿಎಂ ಮೂರು ಬಗೆಯಲ್ಲಿ ಬಳಕೆದಾರರಿಗೆ ಲಭ್ಯ ಇದೆ. ಲೈಟ್, ಡಿಲೈಟ್ ಹಾಗೂ ಎಲೈಟ್ ಈ ಮೂರು ವಿಭಾಗ ಇದೆ. ಬಳಕೆದಾರರ ಸಾಲದ ಪ್ರೊಫೈಲ್ ಗಮನಿಸುವ ಎನ್ ಬಿಎಫ್ ಸಿಗಳು, ಆ ನಂತರ ಪೇಟಿಎಂ ಪೋಸ್ಟ್ ಪೇಯ್ಡ್ ಆಯ್ಕೆಗಳನ್ನು ನೀಡುತ್ತದೆ. ಪೋಸ್ಟ್ ಪೇಯ್ಡ್ ಲೈಟ್ ನಲ್ಲಿ 20 ಸಾವಿರದ ತನಕ ಮಿತಿ ಇರುತ್ತದೆ. ತಿಂಗಳ ಬಿಲ್ ಜತೆಗೆ ಕನ್ವೀನಿಯನ್ಸ್ ಶುಲ್ಕ ಸೇರಿಸಲಾಗುತ್ತದೆ. ಇನ್ನು ಡಿಲೈಟ್ ಮತ್ತು ಎಲೈಟ್ ಬಳಕೆದಾರರು 20 ಸಾವಿರದಿಂದ 1 ಲಕ್ಷದ ತನಕ ಮಿತಿ ಇರುತ್ತದೆ. ಯಾವುದೇ ಕನ್ವೀನಿಯನ್ಸ್ ಶುಲ್ಕ ಇರುವುದಿಲ್ಲ.

ಆಕ್ಟಿವೇಟ್ ಮಾಡಲು ಹೆಚ್ಚುವರಿ ಶುಲ್ಕ ಇಲ್ಲ
 

ಆಕ್ಟಿವೇಟ್ ಮಾಡಲು ಹೆಚ್ಚುವರಿ ಶುಲ್ಕ ಇಲ್ಲ

ಪೇಟಿಎಂ ಪೋಸ್ಟ್ ಪೇಯ್ಡ್ ಲೈಟ್ ಬೇಕೆಂದರೆ ಬಳಕೆದಾರರ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಎಂದರೂ ದೊರೆಯುತ್ತದೆ. ಈ ಪೈಕಿ ಯಾವುದೇ ಪೋಸ್ಟ್ ಪೇಯ್ಡ್ ವೇರಿಯಂಟ್ ಆಕ್ಟಿವೇಟ್ ಮಾಡಿಕೊಳ್ಳುವುದಕ್ಕೆ ಪೇಟಿಎಂನಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ ಎಂದು ತಿಳಿಸಲಾಗಿದೆ.

English summary

Spend Now, Pay Later: Must Know Fact About Paytm Post Paid

Paytm has launched spend now, pay later facility for it's users. Here is the complete details about feature.
Story first published: Tuesday, June 9, 2020, 19:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X