ವಿಶ್ವದ ಅನೇಕ ಕ್ಷೇತ್ರಗಳಲ್ಲಿ ಭಾರತೀಯರು, ಭಾರತೀಯ ಮೂಲದ ನಾಯಕರು ವಿಶ್ವವೇ ಒಮ್ಮೆ ಭಾರತದತ್ತ ತಿರುಗಿ ನೋಡುವಂತೆ ಹೆಮ್ಮೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಟಾಪ್ ಕಂಪನಿಗಳಲ್ಲಿ ಭಾರತೀಯ ಮೂಲದವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಲೇ ಇದ್ದಾರೆ. ಹಾಗಿದ್ದರೆ ವಿಶ್ವದ ಬೃಹತ್ ಕಂಪನಿಗಳಲ್ಲಿ ಭಾರತ ಮೂಲದವರು ಯಾರು ಪ್ರಮುಖ ಹುದ್ದೆಯಲ್ಲಿದ್ದಾರೆ? ಅವರಲ್ಲಿ ಟಾಪ್ 10 ನಾಯಕರು ಯಾರು? ಅವರ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.
1. ಸುಂದರ್ ಪಿಚೈ
ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್ ಇತ್ತೀಚೆಗಷ್ಟೇ ಭಾರತೀಯ ಮೂಲದ ಸುಂದರ್ ಪಿಚೈಗೆ ನಾಯಕತ್ವ ಜವಾಬ್ದಾರಿ ವಹಿಸಿದೆ. ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್ ಆಡಳಿತದಿಂದ ಕೆಳಗಿಳಿದ ಬಳಿಕ ಗೂಗಲ್ ಸಿಇಒ ಆಗಿದ್ದ ಸುಂದರ್ ಪಿಚೈ ಇದೀಗ ಜಗತ್ತಿನ ಶಕ್ತಿಶಾಲಿ ಕಾರ್ಪೋರೇಟ್ ಕಂಪನಿಯ ನಾಯಕನಾಗಲಿದ್ದಾರೆ.
47 ವರ್ಷದ ಸುಂದರ್ ಪಿಚೈ 2015ರಲ್ಲಿ ಗೂಗಲ್ ಸಿಇಓ ಆಗಿ ನೇಮಕಗೊಂಡರು. ಮೂಲತಃ ತಮಿಳುನಾಡಿನ ಮದುರೈನವರಾದ ಸುಂದರ್, ಐಐಟಿ ಖರಗ್ ಪುರ್, ಸ್ಟ್ಯಾನ್ ಫೋರ್ಡ್ ವಿವಿಯ ವಾರ್ಟನ್ ಬಿಜಿನೆಸ್ ಸ್ಕೂಲ್‌ನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಇದೀಗ ಗೂಗಲ್ ಜೊತೆಗೆ ಹೆಚ್ಚುವರಿಯಾಗಿ ಅಲ್ಫಾಬೆಟ್ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಮೂಲದ ವ್ಯಕ್ತಿ ವಿಶ್ವದ ಬಹುದೊಡ್ಡ ಕಾರ್ಪೋರೇಟ್ ಕಂಪನಿಯನ್ನು ಮುನ್ನೆಡೆಸುತ್ತಿದ್ದಾರೆ.
2. ಸತ್ಯ ನಾಡೆಲ್ಲ
ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಸತ್ಯ ನಾಡೆಲ್ಲ 2014 ಫೆಬ್ರವರಿ 4ರಲ್ಲಿ ಅಧಿಕಾರ ಸ್ವೀಕರಿಸಿದರು. ಸತ್ಯ ನಾಡೆಲ್ಲ ಕಂಪನಿಗೆ ನೀಡಿದ ಕೊಡುಗೆಯನ್ನು ಆಧರಿಸಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಉನ್ನತ ಹುದ್ದೆಗೆ ಆಯ್ಕೆ ಮಾಡಿದರು.
ಮಣಿಪಾಲ ಎಂಐಟಿಯ ಹಳೆಯ ವಿದ್ಯಾರ್ಥಿಯಾಗಿರುವ ನಾಡೆಲ್ಲ ಎಲಕ್ಟ್ರಾನಿಕ್ ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದು ನಂತರ ಅಮೆರಿಕಾದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಬಿಎ ಪಡೆದರು. ಹೈದ್ರಾಬಾದ್ ಮೂಲದ ಸತ್ಯ ನಾಡೆಲ್ಲ ವಿಶ್ವದ ಬಹುದೊಡ್ಡ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್‌ನ್ನು ಮುನ್ನೆಡೆಸುತ್ತಿರುವುದು ಹೆಮ್ಮೆಯ ವಿಚಾರ
3. ಇಂದ್ರಾ ನೂಯಿ
ಇಂದ್ರಾ ನೂಯಿ ಜಗತ್ತಿನ 2ನೇ ಅತಿದೊಡ್ಡ ಆಹಾರ ಮತ್ತು ಪಾನೀಯ ಕಂಪನಿ ಎಂಬ ಖ್ಯಾತಿ ಹೊಂದಿರುವ ಪೆಪ್ಸಿಕೊ ಕಂಪನಿಯ ಸಿಇಒ ಆಗಿದ್ದವರು. 2006 ಅಕ್ಟೋಬರ್‌ನಿಂದ ಜನವರಿ 2019ರವರೆಗೆ ಪೆಪ್ಸಿಕೊ ಕಂಪನಿಯ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಆಡಳಿತಾವಧಿಯಲ್ಲಿ ಅನೇಕ ಕಾರ್ಯಾಚರಣೆ ಹಾಗೂ ಸವಾಲುಗಳನ್ನು ನಿಭಾಯಿಸಿದ್ದಾರೆ. ಇಂದ್ರಾ ನೂಯಿ ಸದ್ಯ ಅಮೆಜಾನ್ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.
4. ಶಂತನು ನಾರಾಯಣ್
ಅಡೋಬ್ ಕಂಪನಿಯ ಸಿಇಒ ಆಗಿರುವ ಶಂತನು ನಾರಾಯಣ್ ಅವರ ಉತ್ತಮ ಕಾರ್ಯ ನಿರ್ವಹಣೆ ಆಧರಿಸಿ ಕಂಪನಿಯು 2018ರಲ್ಲಿ ಅವರನ್ನ ಸಿಇಓ ಹುದ್ದೆಗೆ ಏರಿಸಿತು. ಹೈದ್ರಾಬಾದ್ ಮೂಲದವರಾದ 56 ವರ್ಷದ ನಾರಾಯಣ್‌ಗೆ 2019ರಲ್ಲಿ ಭಾರತೀಯ ನಾಗರೀಕ ಗೌರವವಾದ ಪದ್ಮಶ್ರೀ ನೀಡಲಾಗಿದೆ.
5. ಸಂಜಯ್ ಮೆಹ್ರೋತ್ರಾ
ಭಾರತೀಯ-ಅಮೆರಿಕಾ ಉದ್ಯಮಿ ಸಂಜಯ್ ಮೆಹ್ರೋತ್ರಾ ಪ್ರಸ್ತುತ ಅರೆವಾಹಕ(semiconductor) ಬ್ರ್ಯಾಂಡ್ ಮೈಕ್ರಾನ್‌ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. 61 ವರ್ಷ ವಯಸ್ಸಿನ ಇವರು ಸ್ಯಾನ್‌ಡಿಸ್ಕ್‌ನ ಸಹ ಸಂಸ್ಥಾಪಕರು ಹೌದು. 27 ವರ್ಷಗಳ ಕಾಲ ಸ್ಯಾನ್‌ಡಿಸ್ಕ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಇಂಟೆಲ್ ಕಾರ್ಪೋರೇಶನ್‌ನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಕಾನ್ಪುರ ಮೂಲದವರು.
6. ವಿಕ್ರಂ ಪಂಡಿತ್
ಭಾರತೀಯ-ಅಮೆರಿಕನ್ ಬ್ಯಾಂಕರ್ ಮತ್ತು ಹೂಡಿಕೆದಾರರು ಆದ ವಿಕ್ರಂ ಪಂಡಿತ್ 2007 ಡಿಸೆಂಬರ್‌ನಿಂದ 2012 ಅಕ್ಟೋಬರ್‌ವರೆಗೆ ಸಿಟಿಗ್ರೂಪ್‌ನ ಸಿಇಒ ಆಗಿದ್ದರು. ನಾಗ್ಪುರ ಮೂಲದ ಇವರು ಪ್ರಸ್ತುತ ಒರೊಜೆನ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸಿಇಓ ಆಗಿದ್ದಾರೆ.
7. ದಿನೇಶ್ ಪಾಲಿವಾಲ್
ದಿನೇಶ್ ಸಿ. ಪಾಲಿಮಾಲ್ ಭಾರತೀಯ-ಅಮೆರಿಕನ್ ಉದ್ಯಮಿ. ಹರ್ಮನ್ ಇಂಟರ್ನ್ಯಾಷನಲ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಹೆಸರುವಾಸಿಯಾಗಿರುವ ಇವರು 2017ರಲ್ಲಿ ಅಧಿಕಾರ ಸ್ವೀಕರಿಸಿದರು. ಉತ್ತರ ಪ್ರದೇಶದ ಆಗ್ರಾ ಮೂಲದವರಾದ ದಿನೇಶ್ ಐಐಟಿ ರೂರ್ಕಿಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು.
8. ನಿಕೇಶ್ ಅರೋರಾ
ಗೂಗಲ್ ಕಂಪನಿಯ ಮಾಜಿ ನಿರ್ವಾಹಕ ನಿಕೇಶ್ ಅರೋರಾ, 2018 ಜೂನ್ 1ರಂದು ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನಲ್ಲಿ ಸಿಇಒ ಹಾಗೂ ಅಧ್ಯಕ್ಷ ಹುದ್ದೆ ನಿರ್ವಹಿಸುತ್ತಿದ್ದಾರೆ. ಘಾಜೀಯಾಬಾದ್ ಮೂಲದ 51 ವರ್ಷ ವಯಸ್ಸಿನ ಇವರು ಐಐಟಿ ವಾರಣಾಸಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
9. ಅಜಯ್ ಬಂಗಾ
ಮಾಸ್ಟರ್ ಕಾರ್ಡ್ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಭಾರತೀಯ ಮೂಲದ ಅಜಯ್‌ಪಾಲ್ ಸಿಂಗ್ ಬಂಗಾ ಕಾರ್ಪೋರೇಟ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪುಣೆ ಮೂಲದವರಾದ ಅಜಯ್ ಬಂಗಾ, ಭಾರತದ ನೆಸ್ಲೆ ಕಂಪನಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ ಅವರು 13 ವರ್ಷಗಳ ಕಾಲ ಸೇಲ್ಸ್, ಮಾರ್ಕೆಟಿಂಗ್, ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ಪೆಪ್ಸಿಕೊದಲ್ಲಿ 2 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಇವರು ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
10. ಅಶೋಕ್ ವೇಮುರಿ
ಭಾರತೀಯ-ಅಮೆರಿಕನ್ ವ್ಯವಹಾರ ಕಾರ್ಯನಿರ್ವಾಹಕನಾಗಿರುವ ಅಶೋಕ್ ವೇಮುರಿ, ಇಗೇಟ್ ಮತ್ತು ಕಾಂಡುಯೆಂಟ್‌ನ ಮಾಜಿ ಸಿಇಒ ಆಗಿದ್ದಾರೆ. ದೆಹಲಿ ಮೂಲದವರಾದ ಇವರು ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ನಲ್ಲಿ ಎಂಬಿಎ ಪದವಿ ಪಡೆದರು. ಇಂಡಿಯನ್ ಅಮೆರಿಕನ್ ಪೌರತ್ವ ಪಡೆದಿರುವ ಇವರು ಕಾರ್ಪೋರೇಟ್ ವಲಯದಲ್ಲಿ ಹೆಸರುವಾಸಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications