For Quick Alerts
ALLOW NOTIFICATIONS  
For Daily Alerts

ಇಂಗ್ಲಿಷ್ ಗಿಂತ ಹೆಚ್ಚು ಬೇಡಿಕೆ ಇರುವ ವಿದೇಶಿ ಭಾಷೆಗಳ ಬಗ್ಗೆ ಗೊತ್ತಾ?

By ಅನಿಲ್ ಆಚಾರ್
|

ನಮ್ಮ ಮಗು ಇಂಗ್ಲಿಷ್ ಮಾತನಾಡುವ ಹಾಗಾದರೆ ಸಾಕಪ್ಪಾ! -ಹೀಗೆ ಸಾವಿರಾರು, ಲಕ್ಷಾಂತರ ಮಂದಿ ಅಂದುಕೊಳ್ಳಬಹುದು.

 

ಯಾಕೆ ಮಗು ಇಂಗ್ಲಿಷ್ ನಲ್ಲೇ ಮಾತನಾಡಬೇಕು? ಆ ಭಾಷೆ ಬಂದರೆ ಕೆಲಸ ಸಿಗುವುದು ಸುಲಭ ಅಂತೆ ಎಂಬ ಸಿದ್ಧ ಉತ್ತರ ಸಿಗುತ್ತದೆ.

 

ಆದರೆ ಆ ಮಾತು ನಿಜವಾ? ಭಾಷೆ ಬಂದರೆ ಮಾತ್ರ ಯಾರಿಗೂ ಕೆಲಸ ಸಿಗಲ್ಲ. ಅದರ ಜತೆಗೂ ಯಾವುದಾದರೂ ಕೆಲಸ ಮಾಡುವ ಜ್ಞಾನ, ತಿಳಿವಳಿಕೆ, ಅನುಭವವೂ ಬೇಕು.

ಮಗುವನ್ನು ಯಾವ ಶಾಲೆಗೆ ಸೇರಿಸಬೇಕು? ಗಮನಿಸಬೇಕಾದ ಅಂಶಗಳು ಯಾವುವು?ಮಗುವನ್ನು ಯಾವ ಶಾಲೆಗೆ ಸೇರಿಸಬೇಕು? ಗಮನಿಸಬೇಕಾದ ಅಂಶಗಳು ಯಾವುವು?

ಆದರೂ ಭಾಷೆ ಕಲಿಯಬೇಕು ಅನ್ನೋ ವಿಷಯ ಮಾತನಾಡುತ್ತಿರುವುದರಿಂದ ಕೆಲವು ಆಸಕ್ತಿಕರ ವಿಷಯವನ್ನು ಹೇಳಿಬಿಡಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಇಂಗ್ಲಿಷ್ ಇರಬಹುದು. ಆದರೆ ಅತಿ ಹೆಚ್ಚು ಮಂದಿ ಮಾತೃ ಭಾಷೆ ಯಾವುದೆಂದರೆ ಅದು ಚೀನಿ ಭಾಷೆ. ಮಾಂಡರೀನ್ ಅಂತಾರೆ. 90 ಕೋಟಿಗೂ ಹೆಚ್ಚು ಮಂದಿ ಚೀನೀಯರಿಗೆ ಮಾತೃ ಭಾಷೆ ಮಾಂಡರೀನ್. ಹಾಗಿದ್ದರೆ ಇಂಗ್ಲಿಷ್ ಗಿಂತ ಮಾಂಡರೀನ್ ಕಲಿಯಬಹುದಲ್ಲವಾ?

ಇಂಗ್ಲಿಷ್ ಗಿಂತ ಹೆಚ್ಚು ಬೇಡಿಕೆ ಇರುವ ವಿದೇಶಿ ಭಾಷೆಗಳ ಬಗ್ಗೆ ಗೊತ್ತಾ?

ಯಾರಿಗೆ ಆಗಲಿ ಮಾತೃ ಭಾಷೆಯೇ ಪ್ರಾಶಸ್ತ್ಯ. ಆದರೆ ಜಾಗತೀಕರಣದ ಪ್ರಭಾವ ಹಾಗೂ ಶಿಕ್ಷಣ- ಉದ್ಯೋಗ ಇತ್ಯಾದಿ ಕಾರಣಗಳಿಗೆ ಬೇರೆ ಭಾಷೆಯನ್ನೂ ಕಲಿಯಬೇಕಾಗುತ್ತದೆ.

ಒಂದು ಭಾಷೆ ಬೆಳೆಯುವುದು ಅದನ್ನು ಮಾತನಾಡುವ ಮೂಲಕ, ಬಳಸುವ ಮೂಲಕ. ಇದನ್ನು ನೀವೂ ಒಪ್ತೀರಾ? ವಿಶ್ವದಾದ್ಯಂತ ಅತಿ ಹೆಚ್ಚು ಮಾತನಾಡುವ ಟಾಪ್ ಟೆನ್ ಭಾಷೆಗಳು ಇಲ್ಲಿವೆ. ಇದರಲ್ಲಿ ಭಾರತೀಯ ಭಾಷೆಗಳೂ ಇವೆ.

* ಇಂಗ್ಲಿಷ್

* ಮಾಂಡರೀನ್ ಚೈನೀಸ್

* ಹಿಂದಿ

* ಸ್ಪ್ಯಾನಿಷ್

* ಫ್ರೆಂಚ್

* ಸ್ಟ್ಯಾಂಡರ್ಡ್ ಅರೇಬಿಕ್

* ಬಂಗಾಲಿ

* ರಷ್ಯನ್

* ಪೋರ್ಚುಗೀಸ್

* ಇಂಡೋನೇಷಿಯನ್

ಸ್ಪ್ಯಾನಿಷ್, ಫ್ರೆಂಚ್, ಜರ್ಮನ್- ಈ ಮೂರೂ ಭಾಷೆ ಉದ್ಯೋಗ ಅರಸುವವರ ಪಾಲಿಗೆ ಅನ್ನದ ಬಟ್ಟಲಿನಂತೆ ಕಾಣುತ್ತಿವೆ. ಯುರೋಪ್ ಖಂಡದ ಅದೆಷ್ಟೋ ದೇಶಗಳ ಶಿಕ್ಷಣ, ಉದ್ಯೋಗ ಅಥವಾ ಬೇರೆ ಕಾರಣಕ್ಕೆ ವೀಸಾ ದೊರೆಯಬೇಕು ಅಂದರೆ ಆಯಾ ಭಾಷೆಯಲ್ಲಿ ಪ್ರವೇಶ ಇರಬೇಕು. ಆದ್ದರಿಂದ ಮಕ್ಕಳಿಗೆ ಕೆಲವು ವಿದೇಶೀ ಭಾಷೆಯನ್ನೂ ಕಲಿಸಿದ್ದರೆ ಖಂಡಿತಾ ಉಪಯೋಗಕ್ಕೆ ಬರುತ್ತದೆ.

English summary

Which Language Learning Helps For Better Future?

Which foreign language, apart from English help to better future? Here is an analysis.
Story first published: Friday, February 14, 2020, 20:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X