For Quick Alerts
ALLOW NOTIFICATIONS  
For Daily Alerts

ಎಂಎಸ್‌ಎಂಇಗಳಿಗೆ 32,895 ಕೋಟಿ ರುಪಾಯಿ ಸಾಲ ವಿತರಣೆ

|

ನವದೆಹಲಿ, ಜೂನ್ 23: ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ದೇಶದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇಗಳು) ಸಂಕಷ್ಟಕ್ಕೆ ಸಿಲುಕಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇವುಗಳ ಏಳ್ಗೆಗೆ 3 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

 

ಸದ್ಯ ಇದರಲ್ಲಿ 75,426 ಕೋಟಿ ರೂ.ಗಳ ಕಾರ್ಯನಿರತ ಬಂಡವಾಳ ಸಾಲವನ್ನು ಎಂಎಸ್‌ಎಂಇಗಳಿಗೆ ಬ್ಯಾಂಕುಗಳು ಮಂಜೂರು ಮಾಡಿದ್ದು, ಈಗಾಗಲೇ 32,895 ಕೋಟಿ ರೂ ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

 

ಮಧ್ಯಂತರ ಬಜೆಟ್ 2019: ಸರ್ಕಾರ ಎಂಎಸ್ಎಂಇ ವಲಯಕ್ಕೆ ಹೆಚ್ಚು ಸೌಲಭ್ಯ ಒದಗಿಸಬೇಕುಮಧ್ಯಂತರ ಬಜೆಟ್ 2019: ಸರ್ಕಾರ ಎಂಎಸ್ಎಂಇ ವಲಯಕ್ಕೆ ಹೆಚ್ಚು ಸೌಲಭ್ಯ ಒದಗಿಸಬೇಕು

ಇದರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು 42,739 ಕೋಟಿ ರೂ. ಮತ್ತು ಖಾಸಗಿ ಬ್ಯಾಂಕುಗಳಿಂದ 32,687 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು 22,198 ಕೋಟಿ ರೂ ಸಾಲವನ್ನು ವಿತರಿಸಿದ್ದರೆ, ಖಾಸಗಿ ಬ್ಯಾಂಕುಗಳು 10,697 ಕೋಟಿ ರೂ ಸಾಲ ವಿತರಿಸಿವೆ.

ಎಂಎಸ್‌ಎಂಇಗಳಿಗೆ 32,895 ಕೋಟಿ ರುಪಾಯಿ ಸಾಲ ವಿತರಣೆ

20% ಹೆಚ್ಚುವರಿ ಮತ್ತು ಆಧಾರ ರಹಿತ ಕಾರ್ಯನಿರತ ಬಂಡವಾಳ ಸಾಲಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಖಾತರಿ ನೀಡುತ್ತದೆ. ಈ ಯೋಜನೆಯನ್ನು ಅಕ್ಟೋಬರ್ 31 ರವರೆಗೆ ಅಥವಾ 3 ಲಕ್ಷ ಕೋಟಿ ರೂ.ಗಳ ಮಿತಿ ಮುಗಿಯುವವರೆಗೆ ಮುಂದುವರೆಸುತ್ತದೆ. 45 ಲಕ್ಷ ಕೈಗಾರಿಕಾ ಘಟಕಗಳು ವ್ಯಾಪಾರ ಚಟುವಟಿಕೆಯನ್ನು ಪುನರಾರಂಭಿಸಬಹುದು ಮತ್ತು ಉದ್ಯೋಗಗಳನ್ನು ಕಾಪಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

English summary

Banks disburse Rs 32,895 cr loans to MSMEs

32895 Crore Rupees Loan Distubuted To MSMEs. This is part of 3 lakh crore rupees Special Package.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X