For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಮುನ್ನ 140 ಕೋಟಿ ವಿಡಿಯೋ ಮತ್ತು ವಾಯ್ಸ್ ಕಾಲ್ ವಿನಿಮಯ

|

ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಿಂದ 2021ರ ಹೊಸ ವರ್ಷದ ಮುನ್ನಾ ದಿನ ಹೊಸ ದಾಖಲೆಯೊಂದು ಆಗಿದೆ. 2019ರ ಹೊಸ ವರ್ಷದ ಮುನ್ನಾ ದಿನಕ್ಕೆ ಹೋಲಿಸಿದಲ್ಲಿ 2020ರಲ್ಲಿ ಶೇಕಡಾ 50ರಷ್ಟು ಹೆಚ್ಚು ವಾಟ್ಸಾಪ್ ಕಾಲ್ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಹೆಚ್ಚಿನ ಜನರು ಮನೆಯಲ್ಲೇ ಇದ್ದುದರಿಂದ ಹೊಸ ವರ್ಷದ ಮುನ್ನಾ 2020ರಲ್ಲಿ 140 ಕೋಟಿ ವಿಡಿಯೋ ಮತ್ತು ವಾಯ್ಸ್ ಕಾಲ್ ಮಾಡಿದ್ದಾರೆ.

ವಾಟ್ಸಾಪ್ ಮಾಲೀಕತ್ವ ಹೊಂದಿರುವ ಫೇಸ್ ಬುಕ್ ಮಾತನಾಡಿ, 140 ಕೋಟಿಗೂ ಹೆಚ್ಚು ವಾಯ್ಸ್ ಮತ್ತು ವಿಡಿಯೋ ಕಾಲ್ ಗಳನ್ನು ಹೊಸ ವರ್ಷಕ್ಕೆ ಮುನ್ನ 2020ರಲ್ಲಿ ಒಂದೇ ದಿನ ವಾಟ್ಸಾಪ್ ಮೂಲಕ ಮಾಡಲಾಗಿದೆ.

ಈ ಮಧ್ಯೆ 5.5 ಕೋಟಿ ಲೈವ್ ಬ್ರಾಡ್ ಕಾಸ್ಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಫೇಸ್ ಬುಕ್ ಮೂಲಕವಾಗಿ ವಿಶ್ವದಾದ್ಯಂತ ಹೊಸ ವರ್ಷಕ್ಕೆ ಮುಂಚಿತವಾಗಿ ಮಾಡಲಾಗಿದೆ.

ಹೊಸ ವರ್ಷಕ್ಕೆ ಮುನ್ನ 140 ಕೋಟಿ ವಿಡಿಯೋ ಮತ್ತು ವಾಯ್ಸ್ ಕಾಲ್ ವಿನಿಮಯ

ಫೇಸ್ ಬುಕ್ ನ ಟೆಕ್ನಿಕಲ್ ಪ್ರೋಗ್ರಾಂ ಮ್ಯಾನೇಜರ್ ಕೇಟ್ಲಿನ್ ಬ್ಯಾನ್ ಫೋರ್ಡ್ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಈ ವರ್ಷ ಮೆಸೆಂಜರ್, ಇನ್ ಸ್ಟಾಗ್ರಾಮ್, ವಾಟ್ಸಾಪ್ ಗಳಲ್ಲಿ ವಿಡಿಯೋ ಚಾಟಿಂಗ್ ಹೆಚ್ಚಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಹಿಂದಿನ ರಾತ್ರಿ ಕೂಡ ಇದರಿಂದ ಹೊರತಾಗಿರಲಿಲ್ಲ. ಹೊಸ ವರ್ಷದ ಹಿಂದಿನ ರಾತ್ರಿ ನಮ್ಮ ಸೇವೆಗಳ ಪಾಲಿಗೆ ಐತಿಹಾಸಿಕವಾಗಿ ಬಿಡುವಿಲ್ಲದ ರಾತ್ರಿಗಳು. ಆದರೆ ಈ ಬಾರಿ ಹೊಸ ದಾಖಲೆಯಾಗಿದೆ ಎಂದಿದ್ದಾರೆ.

English summary

1.4 Billion WhatsApp Voice And Video Call Exchanged On 2020 New Years EVe

On 2020 new year eve 1.4 billion whatsapp video and voice call exchanged. Here is the details.
Story first published: Saturday, January 2, 2021, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X