For Quick Alerts
ALLOW NOTIFICATIONS  
For Daily Alerts

ಗೇಮಿಂಗ್‌ ಉದ್ಯಮಕ್ಕೆ ಬೆಂಬಲ, ಗೇಮ್‌ ಡೆವಲಪರ್ಸ್‌ ಬೃಹತ್ ಸಮಾರಂಭ

|

ಬೆಂಗಳೂರು, ಅಕ್ಟೋಬರ್‌ 20: ಗೇಮ್‌ ಡೆವೆಲಪರ್‌ಗಳ ಪ್ರೀಮಿಯರ್‌ ಕಾರ್ಯಕ್ರಮವಾದ ಇಂಡಿಯಾ ಗೇಮ್‌ ಡೆವಲಪರ್‌ ಕಾನ್ಫರೆನ್ಸ್‌ (ಐಜಿಡಿಸಿ)ನ 13ನೇ ಆವೃತ್ತಿ ನವೆಂಬರ್‌ 16 ರಿಂದ 18ರವರೆಗೆ ನಡೆಯಲಿದೆ. ಕಳೆದ ವರ್ಷದಂತೆ ಈ ಬಾರಿಯೂ ಈ ಸಮ್ಮೇಳನ ವರ್ಚುವಲ್‌ ಆಗಿ ನಡೆಯಲಿದೆ.

ತೆಲಂಗಾಣ ಸರಕಾರದ ಪಾಲುದಾರಿಕೆಯಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಭಾರತದಲ್ಲಿ ಗೇಮಿಂಗ್‌ ಇಕೋಸಿಸ್ಟಮ್‌ ಬೆಳೆಸುವ ಉದ್ದೇಶ ಹೊಂದಿರುವ ಐಜಿಡಿಸಿಯಲ್ಲಿ ಪ್ರತಿವರ್ಷ ಉತ್ಸಾಹಿ ಗೇಮ್‌ ಡೆವಲಪರ್‌ಗಳು, ಪಬ್ಲಿಷರ್‌ ಮತ್ತು ಹೂಡಿಕೆದಾರರು ಭಾಗವಹಿಸುತ್ತ ಬಂದಿದ್ದಾರೆ. ಗೇಮಿಂಗ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವವರು, ಹೂಡಿಕೆದಾರರ ಸಮ್ಮುಖದಲ್ಲಿ ಗೇಮ್‌ ಡೆವಲಪರ್‌ಗಳಿಗೆ ಸೂಕ್ತ ಸಲಹೆ, ನೆಟ್‌ವರ್ಕಿಂಗ್‌ ಅವಕಾಶಗಳನ್ನು ಸೃಷ್ಟಿಸುವುದು ಇದರ ಗುರಿಯಾಗಿದೆ.

ಈ ವರ್ಷದ ಐಜಿಡಿಸಿಯಲ್ಲಿ ಹತ್ತು ಮುಖ್ಯ ಟ್ರ್ಯಾಕ್‌ಗಳನ್ನು ಸೇರಿಸಲಾಗಿದೆ. ಹೊಸ ಫೇವರಿಟ್‌ ಆಗಿರುವ ಹೈಪರ್‌ ಕ್ಯಾಷುವಲ್‌ ಟ್ರ್ಯಾಕ್‌ ಮೊದಲ ಬಾರಿಗೆ ಐಜಿಡಿಸಿಗೆ ಬಂದಿದೆ.

1. ಡಿಸೈನ್‌
2. ಆರ್ಟ್‌
3. ಎಂಜಿನಿಯರಿಂಗ್‌
4. ಪ್ರೊಡಕ್ಷನ್‌
5. ಅಪ್ಲಯ್ಡ್‌ ಗೇಮ್ಸ್‌
6. ಇಂಡಿ
7. ಇಸ್ಪೋರ್ಟ್ಸ್‌
8. ಹೈಪರ್‌ ಕ್ಯಾಷುವಲ್‌
9. ಉದ್ಯೋಗಾವಕಾಶಗಳು
10. ವಹಿವಾಟು ಮತ್ತು ಉತ್ಪನ್ನ ನಿರ್ವಹಣೆ

ವರ್ಚುವಲ್‌ ಐಜಿಡಿಸಿಯಲ್ಲಿ ಸುಮಾರು 10,000 ಉತ್ಸಾಹಿಗಳು, 100ಕ್ಕೂ ಹೆಚ್ಚು ಇ ಮಳಿಗೆಗಳು, 30 ಪಬ್ಲಿಷರ್‌ಗಳು ಮತ್ತು 30 ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆ ಇದೆ. ಅನ್‌ರಿಯಲ್‌ ಎಂಜಿನ್‌ ಪ್ರೆಸೆಂಟಿಂಗ್‌ ಪ್ರಾಯೋಜನ ವಹಿಸಿದ್ದು, ಎಂಪಿಎಲ್‌ ಮತ್ತು ಎಡಬ್ಲ್ಯುಎಸ್‌ ಕಾರ್ಯಕ್ರಮದ ಗೋಲ್ಡ್‌ ಪ್ರಾಯೋಜಕ ಸಂಸ್ಥೆಯಾಗಿದೆ.

ವಾರ್ಷಿಕ ಇಂಡಿಯಾ ಗೇಮ್‌ ಡೆವಲಪರ್‌ ಪ್ರಶಸ್ತಿ 2021

ವಾರ್ಷಿಕ ಇಂಡಿಯಾ ಗೇಮ್‌ ಡೆವಲಪರ್‌ ಪ್ರಶಸ್ತಿ 2021

ಸಮ್ಮೇಳನದಲ್ಲಿ ಪ್ರತಿ ವರ್ಷ ನೀಡುವಂತೆ ವಾರ್ಷಿಕ ಇಂಡಿಯಾ ಗೇಮ್‌ ಡೆವಲಪರ್‌ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು. ಅಂತಿಮ ಸುತ್ತಿನ ಹೆಸರುಗಳನ್ನು 2021ರ ನವೆಂಬರ್‌ 10ರಂದು ಪ್ರಕಟಿಸಲಾಗುವುದು. ವಿಜಯಿಗಳನ್ನು ಐಜಿಡಿಸಿಯ ಮೊದಲ ದಿನ ಸನ್ಮಾನಿಸಲಾಗುತ್ತದೆ.

ಪ್ರಶಸ್ತಿ ವಿಭಾಗಗಳು ಹೀಗಿವೆ;
• ವರ್ಷದ ಸ್ಟುಡಿಯೋ ಗೇಮ್‌: ಎಲ್ಲ ಪ್ಲಾಟ್‌ಫಾರಂ ಮತ್ತು ವಿಷಯಗಳಲ್ಲಿ ಅತ್ಯುತ್ತಮ ಗೇಮಿಂಗ್‌ ಅನುಭವ ನೀಡುವ ಮತ್ತು ಒಟ್ಟಾರೆ ಅತ್ಯುತ್ತಮ ಎನಿಸಿಕೊಂಡ್‌ ಗೇಮ್‌ಗೆ ನೀಡುವ ಪ್ರಶಸ್ತಿ.
• ವರ್ಷದ ಇಂಡಿ ಗೇಮ್: ಇಂಡಿ ಅಥವಾ ಇಂಡಿ ತಂಡವೊಂದು ರೂಪಿಸಿದ ಅತ್ಯುತ್ತಮ ಗೇಮ್‌ಗೆ ನೀಡುವ ಪ್ರಶಸ್ತಿ.
• ವರ್ಷದ ಸ್ಟುಡೆಂಟ್‌ ಗೇಮ್‌: ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳ ತಂಡ ರೂಪಿಸಿರುವ ಅತ್ಯುತ್ತಮ ಗೇಮ್‌ಗೆ ನೀಡುವ ಪ್ರಶಸ್ತಿ.
• ವರ್ಷದ ಅಪ್‌ಕಮಿಂಗ್‌ ಗೇಮ್‌: ಇನ್ನೂ ಬಿಡುಗಡೆಯಾಗದ ಅಥವಾ ಅಭಿವೃದ್ಧಿಯ ಹಂತದಲ್ಲಿರುವ ಅತ್ಯುತ್ತಮ ಗೇಮ್‌ಗೆ ನೀಡುವ ಪ್ರಶಸ್ತಿ.
• ಪೊಪ್ಯುಲರ್‌ ಚಾಯ್ಸ್‌ ಪ್ರಶಸ್ತಿ (ಹೊಸ ವಿಭಾಗ): ಸಮ್ಮೇಳನದಲ್ಲಿ ಪಾಲ್ಗೊಂಡವರಲ್ಲಿ ಮತ್ತು ವೀಕ್ಷಿಸಿದವರಲ್ಲಿ ಹೆಚ್ಚು ಮಂದಿ ಇಷ್ಟಪಟ್ಟ ಗೇಮ್‌ಗೆ ನೀಡುವ ಪ್ರಶಸ್ತಿ.
• ವರ್ಷದ ಹೈಪರ್‌ ಕ್ಯಾಷುವಲ್‌ ಗೇಮ್‌ (ಹೊಸ ವಿಭಾಗ): ಹೈಪರ್‌ ಕ್ಯಾಷುವಲ್‌ ಗೇಮ್‌ ವಿಭಾಗದಲ್ಲಿ ಅತಿ ವಿಶಿಷ್ಟ ಎನಿಸಿಕೊಂಡ ಗೇಮ್‌ಗೆ ನೀಡುವ ಪ್ರಶಸ್ತಿ
ವೆಬ್‌ಸೈಟ್‌

ನಿಮ್ಮದೇ ಗೇಮ್‌ ಅಭಿವೃದ್ಧಿಪಡಿಸಿ
 

ನಿಮ್ಮದೇ ಗೇಮ್‌ ಅಭಿವೃದ್ಧಿಪಡಿಸಿ

ಈ ವರ್ಷದ ಐಜಿಡಿಸಿಯಲ್ಲಿ ಭಾರತದ ಓಲ್ಡೆಸ್ಟ್‌ ಗೇಮ್‌ ಜಾಮ್‌, ಬಿವೈಒಜಿ (ಬಿಲ್ಡ್‌ ಯುವರ್‌ ಓವ್ನ್‌ ಗೇಮ್‌- ನಿಮ್ಮದೇ ಗೇಮ್‌ ಅಭಿವೃದ್ಧಿಪಡಿಸಿ) ವಾಪಸ್‌ ಬಂದಿದೆ. ಬಿವೈಒಜಿಯ 16 ನೇ ಆವೃತ್ತಿ ಅಕ್ಟೋಬರ್‌ 22 (ಸಂಜೆ 6)ರಿಂದ ಅಕ್ಟೋಬರ್‌ 24 (ಸಂಜೆ 6 ಗಂಟೆ)ರವರೆಗೆ itch.io ನಲ್ಲಿ ನಡೆಯಲಿದೆ. ಸೀಮಿತ ಕಾಲಾವಕಾಶದಲ್ಲಿ ವಿವಿಧ ಥೀಮ್‌ಗಳ ಮೇಲೆ ಗೇಮ್‌ ಅಭಿವೃದ್ಧಿಪಡಿಸುವ ಈ ಸವಾಲಿನಲ್ಲಿ ದೇಶದ ಅನೇಕ ಗೇಮರ್‌ಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರ ಫಲಿತಾಂಶವನ್ನು ಐಜಿಡಿಸಿಯ ವೇಳೆ ಪ್ರಕಟಿಸಲಾಗುತ್ತದೆ.

ಬಿವೈಒಜಿ, ದೇಶದ ಪ್ರತಿಭಾವಂತ ಗೇಮಿಂಗ್‌ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿತ್ತ ಬಂದಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಅನೇಕ ಮಂದಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿ ಯಶಸ್ವಿ ಗೇಮ್‌ ಮತ್ತು ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ.

ಸಹ ಸ್ಥಾಪಕರಾದ ಶ್ರೀಧರ್‌ ಮುಪ್ಪಿಡಿ

ಸಹ ಸ್ಥಾಪಕರಾದ ಶ್ರೀಧರ್‌ ಮುಪ್ಪಿಡಿ

ಮುಂಬರುವ ಕಾರ್ಯಕ್ರಮದ ಕುರಿತು ಮಾತನಾಡಿದ ಯೆಸ್‌ಜಿನೋಮ್‌ನ ಸಹ ಸ್ಥಾಪಕರಾದ ಶ್ರೀಧರ್‌ ಮುಪ್ಪಿಡಿ ಅವರು "ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ ಗೇಮಿಂಗ್‌ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಕೋವಿಡ್‌ ಸಾಂಕ್ರಾಮಿಕದ ಜೊತೆಗೆ ಹೂಡಿಕೆಯಲ್ಲಾದ ಹೆಚ್ಚಳ ಮತ್ತು ಇಂಟರ್‌ನೆಟ್‌ ಬಳಕೆ ಹೆಚ್ಚಿರುವುದರಿಂದ ಭಾರತದಲ್ಲಿ ಗೇಮ್‌ ಅಭಿವೃದ್ಧಿ ಇಕೋಸಿಸ್ಟಮ್‌ ಇನ್ನಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ. ನಮ್ಮ ದೇಶದಲ್ಲಿ ಪ್ರತಿಭೆಗೆ ಬರವಿಲ್ಲ. ಐಜಿಡಿಸಿಯಂಥ ವೇದಿಕೆಗಳು ಇಂಥ ಪ್ರತಿಭೆಗಳನ್ನು ಗುರುತಿಸಿ, ಅವಕಾಶಗಳನ್ನು ಸೃಷ್ಟಿಸಿ, ಸೂಕ್ತ ಹೂಡಿಕೆದಾರರು ಮತ್ತು ಪಬ್ಲಿಷರ್‌ಗಳ ಜೊತೆಗೆ ಅವರಿಗೆ ಸಂಪರ್ಕ ಸೃಷ್ಟಿಸುತ್ತದೆ. ಕಳೆದ ವರ್ಷದ ಯಶಸ್ಸಿನ ನಂತರ ಈ ವರ್ಷವೂ ನಾವು ವರ್ಚುವಲ್‌ ಆಗಿ ಕಾರ್ಯಕ್ರಮ ಸಂಘಟಿಸುತ್ತಿದ್ದು, ಮತ್ತೆ ಆಸಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಆಶಿಸಿದ್ದೇವೆ. ಗೇಮಿಂಗ್‌ ಉದ್ಯಮದ ಅಭಿವೃದ್ಧಿಗೆ ಬದ್ಧವಾಗಿರುವ ತೆಲಂಗಾಣ ಸರಕಾರ ನೀಡಿದ ಸಹಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ" ಎಂದರು.

ಇಂಡಿಯಾ ಗೇಮ್‌ ಡೆವಲಪರ್‌ ಕಾನ್ಫರೆನ್ಸ್‌ (ಐಜಿಡಿಸಿ) ಮತ್ತು ಇಂಡಿಯಾಜಾಯ್‌ ಕುರಿತು

ಇಂಡಿಯಾ ಗೇಮ್‌ ಡೆವಲಪರ್‌ ಕಾನ್ಫರೆನ್ಸ್‌ (ಐಜಿಡಿಸಿ) ಮತ್ತು ಇಂಡಿಯಾಜಾಯ್‌ ಕುರಿತು

ಇಂಡಿಯಾ ಗೇಮ್‌ ಡೆವಲಪರ್‌ ಕಾನ್ಫರೆನ್ಸ್‌ (ಐಜಿಡಿಸಿ) ಗೇಮ್‌ ಡೆವಲಪರ್‌ಗಳು ಭಾಗವಹಿಸುವ ಭಾರತದ ಪ್ರತಿಷ್ಠಿತ ಸಮಾವೇಶವಾಗಿದೆ. ಉದ್ಯಮದಲ್ಲಿರುವ ಸ್ವಯಂಸೇವಕರು, ಕಾರ್ಪೊರೆಟ್‌ ಕಂಪೆನಿಗಳು ಮತ್ತು ತೆಲಂಗಾಣ ಸರಕಾರದ ನೆರವಿನೊಂದಿಗೆ ಈ ಸಮ್ಮೇಳನ ಸಂಘಟಿಸುತ್ತಿದ್ದಾರೆ. ಭಾರತದಲ್ಲಿ ಗೇಮಿಂಗ್‌ ಇಕೋಸಿಸ್ಟಮ್‌ ಬೆಳಸಲು ಇದು ಪ್ರಮುಖ ಪಾತ್ರ ವಹಿಸುತ್ತಿದೆ. ಡೆವಲಪರ್‌ಗಳು ಸೂಕ್ತ ಅಂತಃದೃಷ್ಟಿ ಪಡೆಯಲು, ಹೊಸ ಕೌಶಲ್ಯ ಬೆಳೆಸಿಕೊಳ್ಳಲು ಮತ್ತು ಪಬ್ಲಿಷರ್‌ ಹಾಗ ಹೂಡಿಕೆದಾರರೊಂದಿಗೆ ಸಂಪರ್ಕ ಪಡೆಯಲು ಇದು ನೆರವಾಗುತ್ತಿದೆ.

ಇಂಡಿಯಾಜಾಯ್‌ ನಡೆಸುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಐಜಿಡಿಸಿಯೂ ಒಂದಾಗಿದೆ. ಇಂಡಿಯಾಜಾಯ್‌ ಹಲವು ಅಂತರ್‌ರಾಷ್ಟ್ರೀಯ ಕಾರ್ಯಕ್ರಮಗಳನ್ನು ಒಂದೇ ವೇದಿಕೆಗೆ ತಂದು, ನೆಟ್‌ವರ್ಕಿಂಗ್‌, ವ್ಯಾಪಾರ ಪ್ರದರ್ಶನ, ಉತ್ಪನ್ನ ಬಿಡುಗಡೆ, ಬಿ2ಬಿ, ಮತ್ತು ಬಿ2ಸಿ ಮೂಲಕ ಹೂಡಿಕೆದಾರರು, ಕಾರ್ಪೊರೆಟ್‌ ಕಂಪೆನಿಗಳು, ಸ್ಟುಡಿಯೋ, ಕಂಟೆಂಟ್‌ ಡೆವಲಪರ್‌ಗಳು, ಪ್ರತಿನಿಧಿಗಳು, ಗ್ರಾಹಕರು, ಹಾರ್ಡ್‌ವೇರ್‌ ಉತ್ಪಾದಕರು ಮತ್ತು ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ.

English summary

13th edition of India Game Developer’s Conference from Nov 16 to18

13th edition of India Game Developer’s Conference set to take place virtually from Nov 16 to 18 in collaboration with Telangana Government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X