For Quick Alerts
ALLOW NOTIFICATIONS  
For Daily Alerts

ಕೇಂದ್ರದ ಹೊಸ ಯೋಜನೆ: ಇಪಿಎಫ್‌ನ ಎಲ್ಲ ಮಾಹಿತಿ ಅಂಗೈನಲ್ಲೇ ಲಭ್ಯ

|

ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಬುಧವಾರ ಎಂಪ್ಲಾಯ್ಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಸದಸ್ಯರಿಗಾಗಿ ಮೂರು ಮೊಬೈಲ್ ಸೇವೆಗಳನ್ನು ಬಿಡುಗಡೆ ಮಾಡಿದ್ದಾರೆ. ಮೊಬೈಲ್ ಅಪ್ಲಿಕೇಶನ್, ಎಸ್ ಎಂಎಸ್ ಆಧಾರಿತ ಯುಎಎನ್ ಆಕ್ಟಿವೇಶನ್ ಮತ್ತು ಮಿಸ್ಡ್ ಕಾಲ್ ಸೇವೆಯನ್ನು ಇದರಿಂದ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಇಪಿಎಫ್ ಖಾತೆದಾರರು ತಮ್ಮ ಯುಎಎನ್ ಖಾತೆಯ ಮುಖಾಂತರ ಮೊಬೈಲ್ ನಲ್ಲಿಯೇ ಎಲ್ಲ ಅಪ್ ಡೇಟ್ ಗಳನ್ನು ಪಡೆದುಕೊಳ್ಳಬಹುದು. ನಿಮ್ಮ ತಿಂಗಳ ಕ್ರೆಡಿಟ್ ಗಳನ್ನು ಸಹ ಸುಲಭವಾಗಿ ವೀಕ್ಷಣೆ ಮಾಡಬಹುದು. ಇದರೊಂದಿಗೆ ಪಿಂಚಣಿ ಮಾಹಿತಿ, ನಿಮ್ಮ ನೋಂದಣಿಯಾಗಿರುವ ವಿಳಾಸ, ಬ್ಯಾಂಕ್ ಖಾತೆ ಎಲ್ಲವನ್ನು ಅಂಗೈನಲ್ಲೇ ನೋಡಲು ಸಾಧ್ಯವಾಗುತ್ತದೆ.

ಕೇಂದ್ರದ ಹೊಸ ಯೋಜನೆ: ಇಪಿಎಫ್‌ನ ಎಲ್ಲ ಮಾಹಿತಿ ಅಂಗೈನಲ್ಲೇ ಲಭ್ಯ

ಎಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು?
ಅಪ್ಲಿಕೇಶನ್ ಅನ್ನು ಇಪಿಎಫ್ ಒ ದ ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು. ಶಾರ್ಟ್ ಕೋಡ್ ಎಸ್ ಎಂಎಸ್ ಗಳ ಬಗ್ಗೆಯೂ ನಿಮಗೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ. ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಅಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳುವುದು ಬಹಳ ಸುಲಭ.[ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ]

ಎಂಪ್ಲಾಯ್ಸ್ ಪ್ರಾವಿಡೆಂಟ್ ಫಂಡ್ ನ ಸದ್ಯದ ಸ್ಥಿತಿ ಗತಿ ಏನು? ಎಂಬ ಬಗ್ಗೆ ಪ್ರತಿಯೊಬ್ಬರಲ್ಲೂ ಕುತೂಹಲ ಇದ್ದೇ ಇರುತ್ತದೆ. ಆನ್ ಲೈನ್ ತಾಣದ ಮೂಲಕ ತೆರಳಿ ಹುಡುಕಾಟ ನಡೆಸಲು ಬಹಳ ಸಮಯ ಹಿಡಿಯುತ್ತದೆ. ಈಗ ಅದಕ್ಕೆಲ್ಲ ಮುಕ್ತಿ ಕಾಣಿಸಲಾಗಿದ್ದು ಅಪ್ಲಿಕೇಶನ್ ಮೂಲಕ ಎಲ್ಲವನ್ನು ವೀಕ್ಷಣೆ ಮಾಡಬಹುದು.

ಈ ವಿನೂತನ ಸೌಲಭ್ಯ ಸುಮಾರು 3.54 ಕೋಟಿ ಸದಸ್ಯರಿಗೆ ನೆರವು ನೀಡಲಿದೆ. 49 ಲಕ್ಷ ಪಿಂಚಣಿದಾರರಿಗೆ ಮತ್ತು 6 ಲಕ್ಷ ಉದ್ಯೋಗಿಗಳಿಗೂ ಸಹಾಯ ಮಾಡಲಿದೆ.

ಯುಎಎನ್ ಅಡಿಯಲ್ಲಿ 1.80 ಕೋಟಿ ಜನರ ನೋಂದಾವಣಿಯಾಗಿದೆ. ಅಲ್ಲದೇ 58.72 lakh UAN ಲಕ್ಷ ಹೆಸರುಗಳು ಆಧಾರ್ ನೋಂದಣಿಯಾಗಿವೆ. ಹಾಗಾದರೆ ಇನ್ನೇಕೆ ತಡ ಹೊಸ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ.

English summary

Mobile App For EPF Members Launched

Union Minister Bandaru Dattatreya today launched three mobile based services -- a Mobile Application, SMS-based UAN (Universal Account Number) Activation and Missed Call service -- for the Employees Provident Fund (EPF) members. The members would be able to activate their UAN accounts from the comfort of their mobile phones and can also access their accounts for viewing their monthly credits through the passbook as well as view their details available with EPFO.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X