For Quick Alerts
ALLOW NOTIFICATIONS  
For Daily Alerts

ಯುಬಿ ಗ್ರೂಪ್ ಕೂಡಾ ಸುಸ್ತಿದಾರ, ಷೇರುಗಳು ದಿಢೀರ್ ಕುಸಿತ

By Mahesh
|

ಬೆಂಗಳೂರು, ಫೆ. 16: ಉದ್ಯಮಿ ವಿಜಯ್ ಮಲ್ಯ ಸಹ ಮಾಲೀಕತ್ವದ ಮದ್ಯ ಉತ್ಪಾದನಾ ಹಾಗೂ ಮಾರಾಟ ಸಂಸ್ಥೆ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಅನ್ನು ಉದ್ದೇಶಪೂರ್ವಕ ಸುಸ್ತಿದಾರ ಸಾಲಗಾರ ಎಂದು ಸಾಲ ಕೊಟ್ಟಿರುವ ಬ್ಯಾಂಕ್ ಘೋಷಿಸಿದೆ. ಇದರ ಬೆನ್ನಲ್ಲೇ ಕಂಪನಿಯ ಷೇರುಗಳು ನೆಲಕಚ್ಚಿವೆ.

 

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ್ದ 800 ಕೋಟಿ ರು ಸಾಲವನ್ನು ವಿಜಯ್ ಮಲ್ಯ ಪಾವತಿಸಿಲ್ಲ. ಒಟ್ಟಾರೆ 2010ರಿಂದ ಇಲ್ಲಿ ತನಕ 17ಕ್ಕೂ ಅಧಿಕ ಬ್ಯಾಂಕ್ ಗಳಿಂದ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ 6,900 ಕೋಟಿರು ಸಾಲ ಪಡೆಯಲಾಗಿತ್ತು. ಇದಕ್ಕೆ ಯುನೈಟೆಡ್ ಬ್ರೂವರೀಸ್ ಗ್ಯಾರಂಟಿ ನೀಡಿತ್ತು.

 
ಯುಬಿ ಕೂಡಾ ಸುಸ್ತಿದಾರಸುಸ್ತಿದಾರ , ಷೇರುಗಳು ದಿಢೀರ್ ಕುಸಿತ

ಯುಬಿ ಸಮೂಹವನ್ನು ಸುಸ್ಥಿದಾರ ಎಂದು ಘೋಷಿಸುತ್ತಿದ್ದಂತೆ ಕಂಪನಿಯ ಷೇರುಗಳು ಮಂಗಳವಾರ ಶೇ10ರಷ್ಟು ಕುಸಿದಿದೆ. ಯುಬಿ ಸಮೂಹದ ಅಂಗ ಸಂಸ್ಥೆಯ ಷೇರುಗಳು ಶೇ 5.9ರಷ್ಟು ಇಳಿಮುಖವಾಗಿದೆ.

ವಿವಿಧ ಬ್ಯಾಂಕುಗಳಲ್ಲಿ ವಿಜಯ್ ಮಲ್ಯ ಅವರು ಮಾಡಿರುವ ಸಾಲದ ಮೊತ್ತ:
ಪಂಜಾಬ್ ನ್ಯಾಷನಲ್ ಬ್ಯಾಂಕ್ : 800 ಕೋಟಿ ರು
ಬ್ಯಾಂಕ್ ಆಫ್ ಇಂಡಿಯಾ: 650 ಕೋಟಿ ರು
ಬ್ಯಾಂಕ್ ಆಫ್ ಬರೋಡಾ : 550 ಕೋಟಿ ರು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 410 ಕೋಟಿ ರು
ಯುಕೋ ಬ್ಯಾಂಕ್ : 320 ಕೋಟಿ ರು
ಕಾರ್ಪೊ ರೇಷನ್ ಬ್ಯಾಂಕ್ : 310 ಕೋಟಿ ರು
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: 150 ಕೋಟಿ ರು
ಇಂಡಿಯನ್ ಓವರ್ ಸೀಸ್ ಬ್ಯಾಂಕ್ : 140 ಕೋಟಿ ರು
ಫೆಡರಲ್ ಬ್ಯಾಂಕ್ : 90 ಕೋಟಿ ರು
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ : 60 ಕೋಟಿ ರು
ಆಕ್ಸಿಸ್ ಬ್ಯಾಂಕ್ : 50 ಕೋಟಿ ರು

ಇಂಟ್ರಾಡೇ ವ್ಯವಹಾರದಲ್ಲಿ ಶೇ 7.93ರಷ್ಟು ಇಳಿಕೆ ಕಂಡು 20.9 ರು ಕಳೆದುಕೊಂಡಿತ್ತು. ಮಧ್ಯಾಹ್ನ 15.07ರ ವೇಳೆಗೆ ಬಿಎಸ್ ಇನಲ್ಲಿ 788 ರು ನಂತೆ ಶೇ 1.90 ಇಳಿಕೆ ಹಾಗೂ ಎನ್ ಎಸ್ ಇನಲ್ಲಿ 785.95 ನಂತೆ ಶೇ 2.05 ರಷ್ಟು ಇಳಿಕೆಯಾಗಿದೆ.

English summary

PNB declares United Breweries Holdings wilful defaulter shares tank

Vjay Mallya-led United Breweries Holdings Ltd today said it has been declared a "Willful Defaulter" by Punjab National Bank (PNB) and the company is consulting lawyers to challenge the decision.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X