For Quick Alerts
ALLOW NOTIFICATIONS  
For Daily Alerts

ಪೇಟಿಎಂ ಗೆ 6.15 ಲಕ್ಷ ವಂಚಿಸಿದ ಗ್ರಾಹಕರ ವಿರುದ್ಧ ದೂರು

ಇ-ಕಾಮರ್ಸ್ ದೈತ್ಯ ಪೇಟಿಎಂ ಸಂಸ್ಥೆಗೆ ಗ್ರಾಹಕರಿಂದ ರೂ. 6.15 ಲಕ್ಷ ವಂಚನೆಯಾಗಿದೆ ಎಂದು ಕಂಪೆನಿ ಆರೋಪಿಸಿದೆ.

By Siddu
|

ಇ-ಕಾಮರ್ಸ್ ದೈತ್ಯ ಪೇಟಿಎಂ ಸಂಸ್ಥೆಗೆ ಗ್ರಾಹಕರಿಂದ ರೂ. 6.15 ಲಕ್ಷ ವಂಚನೆಯಾಗಿದೆ ಎಂದು ಕಂಪೆನಿ ಆರೋಪಿಸಿದೆ.

ಪೇಟಿಎಂ ನೀಡಿರುವ ದೂರು ಸ್ವೀಕರಿಸಿರುವ ಸಿಬಿಐ, ವಂಚಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದು 2015-16ರಲ್ಲಿ ನಡೆದಿರುವ ಪ್ರಕರಣ ಎಂದು ತಿಳಿದು ಬಂದಿದೆ. ಪೇಟಿಎಂ ಸಂಸ್ಥೆಯ ಕೆಲ ಅಧಿಕಾರಿಗಳು ಸೇರಿ ದೆಹಲಿಯ ಕಲ್ಕಾಜಿ, ಗೋವಿಂದಪುರಿ ಮತ್ತು ಸಾಕೇತ್‌ ಪ್ರದೇಶಗಳ 15 ಗ್ರಾಹಕರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಾಗಿದೆ.

ಗ್ರಾಹಕರು ಖರೀದಿಸಿರುವ ವಸ್ತುಗಳ ಗುಣಮಟ್ಟ ಸರಿ ಇಲ್ಲದಿದ್ದಾಗ ಅದನ್ನು ಹಿಂದಿರುಗಿಸಿದರೆ ಅವರಿಗೆ ಆ ವಸ್ತುವಿನ ಮೊತ್ತ ಮರು ಪಾವತಿಸಲಾಗುತ್ತದೆ. ಆದರೆ, ಈ 15 ಗ್ರಾಹಕರು ವಸ್ತುಗಳನ್ನು ಹಿಂತಿರುಗಿಸದೇ ಇದ್ದರೂ ಸಹ ಅವರ ಬ್ಯಾಂಕ್‌ ಖಾತೆ ಮತ್ತು ಪೇಟಿಎಂ ವಾಲೆಟ್‌ಗೆ ಅಕ್ರಮವಾಗಿ ಹಣ ಮರುಪಾವತಿ ಆಗಿದೆ ಎಂದು ಪೇಟಿಎಂ ದೂರಿನಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಗ್ರಾಹಕರಿಗೆ ನೀಡಿದ ವಸ್ತುಗಳು ಬಳಕೆಗೆ ಯೋಗ್ಯವಿಲ್ಲದಿದ್ದಾಗ ಅದನ್ನು ಮರಳಿ ಪಡೆಯುವ ಕಾರ್ಯವನ್ನು ಗ್ರಾಹಕರ ಸೇವಾ ಅಧಿಕಾರಿಗಳ ತಂಡ ಮಾಡುತ್ತದೆ. ಆದರೆ ಇಂಥ ಸಮಸ್ಯೆಗಳ ನಿರ್ವಹಣೆಗೆ ಒಂದು ನಿರ್ದಿಷ್ಟ ಗುರುತಿನ ಸಂಖ್ಯೆ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಜತೆಗೆ ಗ್ರಾಹಕರಿಂದ ಆ ವಸ್ತುಗಳನ್ನು ಪಡೆದು ಅವರಿಗೆ ಹಣ ಹಿಂತಿರುಗಿಸುವ ಕೆಲಸ ಮಾಡಲಾಗುತ್ತದೆ.

ಗ್ರಾಹಕರು ವಸ್ತುಗಳನ್ನು ಖರೀದಿಸಿದ ನಂತರ ಅದರ ಬಗ್ಗೆ ಯಾವುದೇ ದೂರುಗಳು ಬರದೆ ಇದ್ದರೆ ಹಣ ಹಿಂತಿರುಗಿಸಬೇಕಾಗಿಲ್ಲ. ಆದರೆ ವಿಚಿತ್ರವೆಂದರೆ 48 ಪ್ರಕರಣಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ವಿತರಿಸಿದ ನಂತರವೂ ಹಣ ಮರುಪಾವತಿ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪೇಟಿಎಂ ಗೆ 6.15 ಲಕ್ಷ ವಂಚಿಸಿದ ಗ್ರಾಹಕರ ವಿರುದ್ಧ ದೂರು

Read more about: paytm ಪೇಟಿಎಂ
English summary

CBI registers cheating case against 15 on Paytm’s complaint

The CBI on Friday said it has registered a case against 15 Paytm customers for allegedly cheating the digital wallet to the tune of Rs 6.15 lakh after receiving a complaint from its parent company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X