For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲಿ ಪಿಎಫ್(PF) ಚಂದಾದಾರರಿಗೆ ವಸತಿ ಯೋಜನೆ

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ತನ್ನ ನಾಲ್ಕು ಕೋಟಿ ಚಂದಾದಾರರಿಗಾಗಿ ವಸತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಿದೆ.

By Siddu
|

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ತನ್ನ ನಾಲ್ಕು ಕೋಟಿ ಚಂದಾದಾರರಿಗಾಗಿ ವಸತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಿದೆ.

 

ಪಿಎಫ್ ಖಾತೆಯಿಂದ ಮನೆ ಖರೀದಿಗೆ ಮುಂಗಡ ಹಣ ಪಾವತಿಸಲು ಮತ್ತು ಪ್ರತಿ ತಿಂಗಳ ಕಂತು ಕಟ್ಟಲು ಈ ಯೋಜನೆ ನೆರವಾಗಲಿದೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಇಪಿಎಫ್ಒ ನೆರವು

ಇಪಿಎಫ್ಒ ನೆರವು

ಪಿಎಫ್ ಚಂದಾದಾರರು ತಮ್ಮ ಸೇವಾವಧಿಯಲ್ಲಿ ಖರೀದಿಸುವ ಮನೆಗೆ ಇಪಿಎಫ್ಒ ಸಂಸ್ಥೆ ನೆರವು ನೀಡಲಿದೆ. ಮಾಲೀಕರು ಮತ್ತು ಉದ್ಯೋಗಿಗಳು ಈ ಯೋಜನೆಗೆ ಸಮೂಹ ವಸತಿ ಸೊಸೈಟಿ ರಚನೆ ಮಾಡಬೇಕಾಗುತ್ತದೆ.

ಸಮೂಹ ವಸತಿ ಸೊಸೈಟಿ

ಸಮೂಹ ವಸತಿ ಸೊಸೈಟಿ

ಸಮೂಹ ವಸತಿ ಸೊಸೈಟಿಯು ಬ್ಯಾಂಕು, ಕಟ್ಟಡ ನಿರ್ಮಾಣಗಾರರು ಅಥವಾ ಮನೆ ಮಾರಾಟಗಾರರ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ವಸತಿ ಸೊಸೈಟಿಯಲ್ಲಿ ಕನಿಷ್ಠ 20 ಮಂದಿ ಸದಸ್ಯರು ಇರುವುದು ಕಡ್ಡಾಯವಾಗಿರಲಿದೆ.

ಪ್ರಮಾಣ ಪತ್ರ

ಪ್ರಮಾಣ ಪತ್ರ

ಪಿಎಫ್ ಚಂದಾದಾರರ ಹಣ ಪಾವತಿ ಮತ್ತು ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಅಧಿಕೃತ ಪ್ರಮಾಣ ಪತ್ರ ಒದಗಿಸಲಿದೆ.

ಪಾಲುದಾರ ಅಲ್ಲ
 

ಪಾಲುದಾರ ಅಲ್ಲ

ಈ ಯೋಜನೆಯಲ್ಲಿ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಯಾವುದೇ ಬಗೆಯ ಕಾನೂನು ಸಮರದಲ್ಲಿ ಪಾಲುದಾರ ಆಗಿರುವುದಿಲ್ಲ. ಸಮೂಹ ವಸತಿ ಸೊಸೈಟಿ ಬ್ಯಾಂಕು, ಕಟ್ಟಡ ನಿರ್ಮಾಣಗಾರ ಅಥವಾ ಮನೆ ಮಾರಾಟಗಾರರ ಜತೆ ವಿವಾದಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕಾಗುತ್ತದೆ.

ಇಪಿಎಫ್ಒ ಅಧಿಕಾರ

ಇಪಿಎಫ್ಒ ಅಧಿಕಾರ

ಒಂದು ವೇಳೆ ವಿವಾದ ಉದ್ಭವಿಸಿದಲ್ಲಿ ವಸತಿ ಸೊಸೈಟಿಯ ಮುಖ್ಯಸ್ಥರ ಕೋರಿಕೆ ಮೇರೆಗೆ ಮುಂಗಡ ಪಾವತಿ ಅಥವಾ ತಿಂಗಳ ಕಂತು ಬಿಡುಗಡೆ ಮಾಡದೆ ಇರುವ ಅಧಿಕಾರವನ್ನು ಇಪಿಎಫ್ಒ ಸಂಸ್ಥೆ ಹೊಂದಿರುತ್ತದೆ.

English summary

EPFO members to benefit as govt plans low-cost housing scheme for over 5 cr subscribers

Government is working on a scheme to provide low-cost housing for retirement fund body EPFO’s over five crore subscribers, Parliament was informed today.“Government is exploring the possibility for providing a suitable low-cost housing scheme for subscribers of Employees’
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X