For Quick Alerts
ALLOW NOTIFICATIONS  
For Daily Alerts

ಪಿಎಫ್ ಯೋಜನೆಯಲ್ಲಿ ಬದಲಾವಣೆ: ಮನೆ ಖರೀದಿ ಇನ್ನೂ ಸುಲಭ!

ಕೇಂದ್ರ ಸರ್ಕಾರ ಭವಿಷ್ಯ ನಿಧಿಯ(ಪಿಎಫ್) ನಾಲ್ಕು ಕೋಟಿ ಚಂದಾದಾರರಿಗೆ ಮನೆ ಖರೀದಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಇಪಿಎಫ್ ಯೋಜನೆಯಲ್ಲಿ ಬದಲಾವಣೆಗೆ ಮುಂದಾಗಿದೆ.

By Siddu
|

ಕೇಂದ್ರ ಸರ್ಕಾರ ಭವಿಷ್ಯ ನಿಧಿಯ(ಪಿಎಫ್) ನಾಲ್ಕು ಕೋಟಿ ಚಂದಾದಾರರಿಗೆ ಮನೆ ಖರೀದಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಇಪಿಎಫ್ ಯೋಜನೆಯಲ್ಲಿ ಬದಲಾವಣೆಗೆ ಮುಂದಾಗಿದೆ.

ಗೃಹ ಸಾಲದ ಮುಂಗಡ ಹಾಗೂ ತಿಂಗಳ ಕಂತನ್ನು ಪಾವತಿಸಲು ಇಪಿಎಫ್ ಖಾತೆಯಿಂದ ಶೇ. 90ರಷ್ಟು ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿ ಸ್ವಂತ ಮನೆ ಪಡೆಯಿರಿ

ಸಹಕಾರಿ ಸಂಘ ರಚನೆ ಕಡ್ಡಾಯ

ಸಹಕಾರಿ ಸಂಘ ರಚನೆ ಕಡ್ಡಾಯ

ಇಪಿಎಫ್ ಯೋಜನೆ ಅಡಿಯಲ್ಲಿ ಈ ಸೌಲಭ್ಯಗಳನ್ನು ಪಡೆಯಲು ಚಂದಾದಾರರು ಕನಿಷ್ಠ 10 ಸದಸ್ಯರಿರುವ ಸಹಕಾರಿ ಸಂಘ ರಚನೆ ಮಾಡುವುದು ಕಡ್ಡಾಯ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ.

ಇಪಿಎಫ್ ಯೋಜನೆಯಲ್ಲಿ ಬದಲಾವಣೆ

ಇಪಿಎಫ್ ಯೋಜನೆಯಲ್ಲಿ ಬದಲಾವಣೆ

1952ರ ನೌಕರರ ಭವಿಷ್ಯ ನಿಧಿ ಯೋಜನೆಯಲ್ಲಿ 'ಹೊಸ ಪ್ಯಾರಾಗ್ರಾಪ್ 68 BD' ಸೇರಿಸಿ ಬದಲಾವಣೆ ತರುವ ಮೂಲಕ ಈ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

15 ದಿನದೊಳಗೆ ಹಣ ವಿತ್ ಡ್ರಾ

15 ದಿನದೊಳಗೆ ಹಣ ವಿತ್ ಡ್ರಾ

ಕಳೆದ ವಾರ ಜನರಲ್ ಪ್ರಾವಿಡಂಟ್ ಫಂಡ್ (ಜಿಪಿಎಫ್) ಪಡೆಯಲು ಇದ್ದ ನಿಯಮಗಳನ್ನು ಸಡಿಲಿಸಲಾಗಿದ್ದು, ನೌಕರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಈ ನಿಯಮದ ಪ್ರಕಾರ ಉದ್ಯೋಗಿಗಳು ಮನವಿ ಮಾಡಿದ 15 ದಿನಗಳಲ್ಲಿ ಫಂಡ್ ನೀಡಬೇಕು ಎಂದು ನಿರ್ಧರಿಸಲಾಗಿದೆ. ಈ ಹಿಂದೆ ಹಣ ನೀಡಲು ಯಾವುದೇ ಕಾಲ ಮಿತಿ ಇರಲಿಲ್ಲ. ಇಲ್ಲಿಯವರೆಗೆ 15 ವರ್ಷ ಸೇವೆ ಸಲ್ಲಿಸಿದವರು ಮಾತ್ರ ಪಿಎಫ್ ಪಡೆಯಲು ಅರ್ಹರಾಗಿದ್ದರು. ಆದರೆ ಇದೀಗ 10 ವರ್ಷ ಸೇವೆ ಸಲ್ಲಿಸಿದವರು ಕೂಡಾ ಪಿಎಫ್ ಪಡೆಯಲು ಅರ್ಹರಾಗಿರುತ್ತಾರೆ. ಪಿಎಫ್ ಹೊಸ ನಿಯಮ, 15 ದಿನದೊಳಗೆ ಹಣ ವಿತ್ ಡ್ರಾ

English summary

You may soon be able to withdraw 90% of your EPF money to buy your dream home

Government will amend EPF scheme to enable around 4 crore members of retirement fund body EPFO to withdraw up to 90 per cent of their fund for making down payments while buying homes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X