Englishहिन्दी മലയാളം தமிழ் తెలుగు

ಪಿಎಫ್ ಹೊಸ ನಿಯಮ, 15 ದಿನದೊಳಗೆ ಹಣ ವಿತ್ ಡ್ರಾ

Written By: Siddu
Subscribe to GoodReturns Kannada

ಐವತ್ತು ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಜನರಲ್ ಪ್ರಾವಿಡಂಟ್ ಫಂಡ್ (ಜಿಪಿಎಫ್) ಪಡೆಯಲು ಇದ್ದ ನಿಯಮಗಳನ್ನು ಸಡಿಲಿಸಲಾಗಿದ್ದು, ನೌಕರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ.

ಹೊಸ ನಿಯಮದ ಪ್ರಕಾರ ಉದ್ಯೋಗಿಗಳು ಮನವಿ ಮಾಡಿದ 15 ದಿನಗಳಲ್ಲಿ ಫಂಡ್ ನೀಡಬೇಕು ಎಂದು ನಿರ್ಧರಿಸಲಾಗಿದೆ. ಈ ಹಿಂದೆ ಹಣ ನೀಡಲು ಯಾವುದೇ ಕಾಲ ಮಿತಿ ಇರಲಿಲ್ಲ. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

ಪಿಎಫ್ ಪಡೆಯಲು ಅರ್ಹರು?

ಇಲ್ಲಿಯವರೆಗೆ 15 ವರ್ಷ ಸೇವೆ ಸಲ್ಲಿಸಿದವರು ಮಾತ್ರ ಪಿಎಫ್ ಪಡೆಯಲು ಅರ್ಹರಾಗಿದ್ದರು. ಆದರೆ ಇದೀಗ 10 ವರ್ಷ ಸೇವೆ ಸಲ್ಲಿಸಿದವರು ಕೂಡಾ ಪಿಎಫ್ ಪಡೆಯಲು ಅರ್ಹರಾಗಿರುತ್ತಾರೆ.

ವಿದ್ಯಾಭ್ಯಾಸಕ್ಕಾಗಿ ಪಿಎಫ್ ಹಣ

ಇದಕ್ಕೂ ಮುನ್ನ ಹೈಸ್ಕೂಲ್ ದಾಟಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪಿಎಫ್ ಹಣವನ್ನು ಪಡೆಯಬಹುದಾಗಿತ್ತು. ಇನ್ನು ಮುಂದೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಕೊಡಿಸುವವರೆಗೆ ಪಿಎಫ್ ಹಣ ಡ್ರಾ ಮಾಡಬಹುದಾಗಿದೆ.

ಈ ಕಾರ್ಯಗಳಿಗೂ ಪಿಎಫ್ ಬಳಕೆ

ಉದ್ಯೋಗಿಗಳು ತಮಗೆ, ತಮ್ಮ ಕುಟುಂಬದ ಸದಸ್ಯರಿಗೆ, ತಮ್ಮನ್ನು ಅವಲಂಬಿಸಿದವರ ವಿವಾಹ, ನಿಶ್ಚಿತಾರ್ಥ ಇನ್ನಿತರ ಕುಟುಂಬದ ಕಾರ್ಯಕ್ರಮಗಳಿಗೆ ಪಿಎಫ್ ಹಣ ಡ್ರಾ ಮಾಡಬಹುದು. ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆಗೂ ಮೊತ್ತ ಬಿಡಿಸಬಹುದು.

ವೈದ್ಯಕೀಯ ಚಿಕಿತ್ಸೆಗೆ ಶೇ. 90

ತಮ್ಮ ಅಥವಾ ತಮ್ಮ ವೈದ್ಯಕೀಯ ಚಿಕಿತ್ಸೆಗೆ ಪಿಎಫ್ ಹಣ ಬಿಡಿಸುವುದಾದರೆ ಒಂದು ವಾರದಲ್ಲೇ ಶೇ. 90ರಷ್ಟು ಹಣ ಬಿಡುಗಡೆ ಮಾಡಬಹುದು.

ದಾಖಲೆ ಬೇಕಾಗಿಲ್ಲ

ಉದ್ಯೋಗಿಗಳ ಯಾವುದೇ ಅಗತ್ಯಗಳಿಗೆ ಹಣ ಬೇಕು ಎಂದಾಗ ದಾಖಲೆ ನೀಡಬೇಕಾಗಿಲ್ಲ. ಇಲ್ಲಿಯವರೆಗೆ ದಾಖಲೆ ನೀಡಬೇಕಾಗಿತ್ತು. ಅಲ್ಲದೆ ಗೃಹ ಸಾಲ ತೀರಿಸಲು ಪಿಎಫ್ ಹಣ ಪಡೆಯಬಹುದು.

Read more about: epf, money, finance news, ಪಿಎಫ್
English summary

GPF Withdrawal Rules Relaxed, Get Money In 15 Days

In good news for about 50 lakh central government employees, the norms for withdrawal of General Provident Fund (GPF) have been relaxed which will enable them to receive payments within 15 days.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC