For Quick Alerts
ALLOW NOTIFICATIONS  
For Daily Alerts

'ಆಸ್ಟ್ರೇಲಿಯಾ 457 ವೀಸಾ' ಹೊಸ ನೀತಿ ಭಾರತೀಯರಿಗೆ ಎದುರಾಗಿದೆ ಭೀತಿ!

ಅಮೆರಿಕಾ H1-B ವೀಸಾ ನೀತಿ ರದ್ದತಿ ನಂತರ ಇದೀಗ ಆಸ್ಟ್ರೇಲಿಯಾ ವೀಸಾ ನೀತಿಯನ್ನು ಮುಂದುವರೆಸಿದೆ!ಆಸ್ಟ್ರೇಲಿಯಾದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತಿದ್ದ ವಿದೇಶಿ ಉದ್ಯೋಗಿಗಳ ‘457 ವೀಸಾ’ ನೀತಿಯನ್ನು ಆಸ್ಟ್ರೇಲಿಯಾ ರದ್ದುಪಡಿಸಿದೆ.

By Siddu
|

ಅಮೆರಿಕಾ H1-B ವೀಸಾ ನೀತಿ ರದ್ದತಿ ನಂತರ ಇದೀಗ ಆಸ್ಟ್ರೇಲಿಯಾ ವೀಸಾ ನೀತಿಯನ್ನು ಮುಂದುವರೆಸಿದೆ! ಆಸ್ಟ್ರೇಲಿಯಾದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತಿದ್ದ ವಿದೇಶಿ ಉದ್ಯೋಗಿಗಳ '457 ವೀಸಾ' ನೀತಿಯನ್ನು ಆಸ್ಟ್ರೇಲಿಯಾ ಸರ್ಕಾರ ರದ್ದುಪಡಿಸಿದೆ.

 

'457 ವೀಸಾ' ವೀಸಾ ಪಡೆಯುತ್ತಿರುವವರಲ್ಲಿ ಭಾರತೀಯ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಿದ್ದು, ಇದೀಗ ಇವರ ಉದ್ಯೋಗಕ್ಕೂ ಕಂಟಕ ಎದುರಾಗಿದೆ. ಹಾಗಾಗಿ ಇನ್ನು ಮುಂದೆ ಅಮೆರಿಕಾದಂತೆಯೇ ಆಸ್ಟ್ರೇಲಿಯಾದ '457 ವೀಸಾ' ಪಡೆಯುವುದು ಕಠಿಣವಾಗಲಿದೆ. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

‘457 ವೀಸಾ' ರದ್ದು ಏಕೆ?

‘457 ವೀಸಾ' ರದ್ದು ಏಕೆ?

ಆಸ್ಟ್ರೇಲಿಯಾ ತನ್ನ ದೇಶದ ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಿದೆ. ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ವಿದೇಶಗಳಿಂದ ಕರೆ ತರುತ್ತಿರುವುದರಿಂದ ಆಸ್ಟ್ರೇಲಿಯಾದ ಉದ್ಯೋಗಿಗಳಿಗೆ ಕೆಲಸ ಸಿಗುತ್ತಿಲ್ಲ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಅದರ ನಿವಾರಣ ಕ್ರಮವಾಗಿ 457 ವೀಸಾ ನೀತಿಯನ್ನು ರದ್ದು ಮಾಡಲಾಗಿದೆ.

ಸ್ವದೇಶಿಯರೇ ಮೊದಲು

ಸ್ವದೇಶಿಯರೇ ಮೊದಲು

ವಿದೇಶದ ಉದ್ಯೋಗಿಗಳಿಗೆ ಕೆಲಸ ನೀಡುವ ಬದಲು ದೇಶದ ಉದ್ಯೋಗಿಗಳಿಗೆ ಮೊದಲ ಪ್ರಾಧಾನ್ಯತೆ ಕೊಡಲು ಆಸ್ಟ್ರೇಲಿಯನ್ನರೇ ಮೊದಲು ಎಂಬ ನೀತಿಯನ್ನು ಜಾರಿ ತರಲಾಗಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಹೇಳಿದ್ದಾರೆ.

ಭಾರತದ ಉದ್ಯೋಗಿಗಳು ಎಷ್ಟು?
 

ಭಾರತದ ಉದ್ಯೋಗಿಗಳು ಎಷ್ಟು?

ಆಸ್ಟ್ರೇಲಿಯಾದಲ್ಲಿ ಒಟ್ಟು 95,758 ಉದ್ಯೋಗಿಗಳು ‘457 ವೀಸಾ' ಪಡೆದು ನೆಲೆಸಿದ್ದಾರೆ. ಇದರಲ್ಲಿ ಭಾರತೀಯರ ಪಾಲು ಹೆಚ್ಚಾಗಿದ್ದು, ಶೇ. 24.6ರಷ್ಟು ಜನ ನೆಲೆಸಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌ ಶೇ. 19.5 ಮತ್ತು ಚೀನಾದ ಶೇ. 5.8ರಷ್ಟು ಉದ್ಯೋಗಿಗಳು ‘457 ವೀಸಾ' ಪಡೆದಿದ್ದಾರೆ.

ಈಗಾಗಲೇ ವೀಸಾ ಪಡೆದವರ ಗತಿ?

ಈಗಾಗಲೇ ವೀಸಾ ಪಡೆದವರ ಗತಿ?

ಈಗಾಗಲೇ 457 ವೀಸಾ ಪಡೆದವರು ಆಸ್ಟ್ರೇಲಿಯಾದಲ್ಲಿ ಗರಿಷ್ಠ ನಾಲ್ಕು ವರ್ಷ ಇರಬಹುದು. ಅಂದರೆ ವೀಸಾ ಅವಧಿ ಮುಗಿಯುವವರೆಗೆ ಇರಲು ಯಾವುದೇ ಸಮಸ್ಯೆ ಇಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ.

ವೀಸಾ ಪಡೆಯುವುದು ಕಠಿಣ!

ವೀಸಾ ಪಡೆಯುವುದು ಕಠಿಣ!

ಹೌದು. ಆಸ್ಟ್ರೇಲಿಯನ್ನರೇ ಮೊದಲು ನೀತಿ ಜಾರಿಗೆ ಬಂದರೆ ಹೊಸ ವೀಸಾ ಸಿಗುವುದು ತುಂಬಾ ಕಷ್ಟಕರ. ಆದರೆ ಈ ನೀತಿ ಜಾರಿ ತರಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಅಲ್ಲಿಯವರೆಗೆ ತಾತ್ಕಾಲಿಕ ವೀಸಾ ನೀತಿ ಜಾರಿಯಲ್ಲಿರಲಿದೆ ಎನ್ನಲಾಗಿದೆ.

ಕಠಿಣ ವೀಸಾ ಮಾನದಂಡ

ಕಠಿಣ ವೀಸಾ ಮಾನದಂಡ

ಮುಂಬರಲಿರುವ ಹೊಸ ವೀಸಾ ನೀತಿ ಅಡಿಯಲ್ಲಿ ವೀಸಾ ಪಡೆದು ಉದ್ಯೋಗ ಗಿಟ್ಟಿಸುವುದು ಅಷ್ಟು ಸುಲಭವಾಗಿರಲಾರದು. ವೀಸಾ ನೀಡಲು ಕೆಲ ಕಠಿಣ ಪರೀಕ್ಷೆಗಳನ್ನು ನಡೆಸಲು ಆಸ್ಟ್ರೇಲಿಯಾ ನಿರ್ಧರಿಸಿದ್ದು, ವೀಸಾಕ್ಕಾಗಿ ಕನಿಷ್ಠ ಅರ್ಹತೆಗಳನ್ನು ಸರ್ಕಾರ ನಿಗದಿಪಡಿಸಿದೆ.
- ಇಂಗ್ಲಿಷ್ ಭಾಷೆ ಮಾತನಾಡಲು ಬರಬೇಕು
- ಕೆಲಸಕ್ಕನುಗುಣವಾಗಿ ಉದ್ಯೋಗ ಕೌಶಲ ಹೊಂದಿರಬೇಕು
- ಆಯಾ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ
- ಯಾವುದೇ ಅಪರಾಧ/ಕೇಸು ಇರಬಾರದು

ಆಸ್ಟ್ರೇಲಿಯಾ ಸ್ಟಾರ್ಟ್ಅಪ್ ಗಳಿಗೆ ಕೌಶಲ್ಯ ಭೀತಿ

ಆಸ್ಟ್ರೇಲಿಯಾ ಸ್ಟಾರ್ಟ್ಅಪ್ ಗಳಿಗೆ ಕೌಶಲ್ಯ ಭೀತಿ

ಆಸ್ಟ್ರೇಲಿಯಾ ಸರ್ಕಾರ ಹೊಸ 457 ವೀಸಾ ರದ್ದು ಪ್ರಕಟಣೆ ಹೊರಬಿದ್ದ ನಂತರ ಆಸ್ಟ್ರೇಲಿಯಾ ಸ್ಟಾರ್ಟ್ಅಪ್ ಗಳಿಗೆ ಭಯ ಶುರುವಾಗಿದೆ. ಹೊಸ ವೀಸಾ ನೀತಿಯಿಂದಾಗಿ ಭಾರೀ ಕೌಶಲ್ಯ ಕೊರತೆ ಎದುರಾಗಲಿದೆ. ಆಸ್ಟ್ರೇಲಿಯಾದಲ್ಲಿ ಸೀಮಿತ ಪ್ರತಿಗಳಿರುವುದರಿಂದ ಬೇಡಿಕೆ ಮತ್ತು ಪೂರೈಕೆ ನಡುವ ಅಂತರ ಏರ್ಪಡಲಿದೆ ಎಂದು ಹೇಳಲಾಗಿದೆ.

ಪ್ರಧಾನಿ ಟರ್ನ್ಬುಲ್ ಏನಂತಾರೆ?

ಪ್ರಧಾನಿ ಟರ್ನ್ಬುಲ್ ಏನಂತಾರೆ?

ಆಸ್ಟ್ರೇಲಿಯಾ ವಲಸಿಗರ ದೇಶವೇ ಆಗಿರಬಹುದು. ಆದರೆ ಆಸ್ಟ್ರೇಲಿಯಾದ ಉದ್ಯೋಗಗಳಲ್ಲಿ ದೇಶಿಯರಿಗೆ ಮೊದಲ ಪ್ರಾಧಾನ್ಯತರ ಸಿಗಬೇಕು. ಹೀಗಾಗಿ 'ಆಸ್ಟ್ರೇಲಿಯನ್ನರೇ ಮೊದಲು' ಎಂದು ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಹೇಳಿದ್ದಾರೆ.

English summary

Indian IT Workers In Trouble As Australia Abolishes 457 Work Visa

After the US, it is the turn of Australia to adopt protectionism for their citizens. In a move to encourage local hiring, and to stop foreign workers from coming into their country, Australia has abolished 457 work visa.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X