For Quick Alerts
ALLOW NOTIFICATIONS  
For Daily Alerts

ಹಳೆ ನೋಟು ಆರ್‌ಬಿಐನಲ್ಲಿ ಜಮೆ ಮಾಡಲು ಜುಲೈ 20 ಕೊನೆ ದಿನ

ಬ್ಯಾಂಕು ಮತ್ತು ಪೋಸ್ಟ್ ಆಫೀಸ್ಗಳಲ್ಲಿ ಸಂಗ್ರಹಿಸಲಾಗಿರುವ ಹಳೆಯ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಜಮಾ ಮಾಡಲು ಸರ್ಕಾರ ಅನುಮತಿ ನೀಡಿದೆ.

By Siddu
|

ಬ್ಯಾಂಕು ಮತ್ತು ಪೋಸ್ಟ್ ಆಫೀಸ್ಗಳಲ್ಲಿ ಸಂಗ್ರಹಿಸಲಾಗಿರುವ ಹಳೆಯ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಜಮಾ ಮಾಡಲು ಸರ್ಕಾರ ಅನುಮತಿ ನೀಡಿದೆ.

ನೋಟು ರದ್ದತಿ ನಂತರದಲ್ಲಿ ಎರಡನೇ ಬಾರಿ ಬ್ಯಾಂಕು, ಸಹಕಾರಿ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಿಗೆ ಆರ್‌ಬಿಐನಲ್ಲಿ(RBI) ಹಳೆ ನೋಟುಗಳ ಠೇವಣಿಗೆ ಅವಕಾಶ ಕಲ್ಪಿಸಲಾಗಿದೆ.

ಜಮೆಗೆ ಕೊನೆ ದಿನ

ಜಮೆಗೆ ಕೊನೆ ದಿನ

ಹಳೆಯ ನೋಟುಗಳನ್ನು ಜುಲೈ 20ರ ಒಳಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಜಮಾ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿರ್ಧಿಷ್ಟ ಅವಧಿಯೊಳಗೆ ನಿರ್ದಿಷ್ಟಪಡಿಸಿದ ಬ್ಯಾಂಕುಗಳಲ್ಲಿ ನೋಟುಗಳನ್ನು ಡಿಪಾಸಿಟ್ ಮಾಡದಿದ್ದರೆ ನಿಖರವಾದ ಕಾರಣ ನೀಡಬೇಕು ಎಂದು ಸ್ಪಷ್ಟಪಡಿಸಿದೆ.

ಮೊದಲ ಅವಕಾಶ

ಮೊದಲ ಅವಕಾಶ

ನೋಟು ನಿಷೇಧದ 50 ದಿನಗಳ ನಂತರ ಡಿಸೆಂಬರ್ 31ರಂದು ಪ್ರಥಮ ಬಾರಿ ಹಳೆಯ ನೋಟುಗಳನ್ನು ಆರ್ಬಿಐನಲ್ಲಿ ಜಮಾ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದಾದ ಐದುವರೆ ತಿಂಗಳ ನಂತರ ಈಗ ಎರಡನೇ ಬಾರಿ ಅವಕಾಶ ನೀಡಿದೆ.

ಅಪಮೌಲ್ಯೀಕರಣಕ್ಕೆ ಕಾರಣ

ಅಪಮೌಲ್ಯೀಕರಣಕ್ಕೆ ಕಾರಣ

ಕೇಂದ್ರ ಸರ್ಕಾರ 2016ರ ನವೆಂಬರ್‌ 8ರಂದು ಹಳೆ ರೂ. 500, 1000 ಮುಖಬೆಲೆ ನೋಟುಗಳನ್ನು ಕಪ್ಪು ಹಣ ಮತ್ತು ಖೋಟಾ ನೋಟು ಹಾವಳಿ ನಿಯಂತ್ರಣಕ್ಕೆ ತರುವುದಕ್ಕಾಗಿ ನೋಟು ರದ್ದತಿ ಮಾಡಿತ್ತು. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

English summary

Government asks banks to deposit old notes at RBI by July 20

The government has permitted banks and post offices to deposit junked Rs 500 and Rs 1,000 notes with the Reserve Bank by July 20.
Story first published: Wednesday, June 21, 2017, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X