For Quick Alerts
ALLOW NOTIFICATIONS  
For Daily Alerts

ಟ್ರಂಪ್ ಗೆ ತಿರುಗೇಟು? ದೇಶದ ಐಟಿ ಕಂಪೆನಿಗಳು ಎಚ್-1ಬಿ ವೀಸಾ ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ

ದೇಶದ ಐಟಿ ಕಂಪೆನಿಗಳು ವ್ಯವಹಾರದ ಉದ್ದೇಶದಿಂದ ಅಮೆರಿಕಾದ ಎಚ್-1ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ ಎಂಬ ಸಾಮಾನ್ಯ ಅನಿಸಿಕೆಗಳನ್ನು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ನಿರಾಕರಿಸಿದ್ದಾರೆ.

By Siddu
|

ದೇಶದ ಐಟಿ ಕಂಪೆನಿಗಳು ವ್ಯವಹಾರದ ಉದ್ದೇಶದಿಂದ ಅಮೆರಿಕಾದ ಎಚ್-1ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ ಎಂಬ ಸಾಮಾನ್ಯ ಅನಿಸಿಕೆಗಳನ್ನು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ನಿರಾಕರಿಸಿದ್ದಾರೆ.

ದೇಶದ ಐಟಿ ಕಂಪೆನಿಗಳು ಎಚ್-1ಬಿ ವೀಸಾ ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ

ಕಡಿಮೆ ವೇತನಕ್ಕೆ ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳುವ ಉದ್ದೇಶದಿಂದ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ನೀಡುವುದಕ್ಕಾಗಿ ಹೊಸ ವೀಸಾ ನೀತಿ ಜಾರಿ ತಂದಿದೆ. ಆದರೆ ಎಚ್-1 ಬಿ ವೀಸಾ ನೀತಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು ಎಂದು ಹೇಳಿದ್ದಾರೆ.
ದೇಶದ ಐಟಿ ಸಂಸ್ಥೆಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಅವಕಾಶಗಳನ್ನು ಬಾಚಿಕೊಳ್ಳಬೇಕು. ವೇಗವಾಗಿ ಬದಲಾಗುವ ಡಿಜಿಟಲ್ ಮತ್ತು ಇನ್ಫೋಟೆಕ್ ಸಂದರ್ಭದಲ್ಲಿ ಜಾಗತಿಕ ನಾಯಕತ್ವ ಉಳಿಸಿಕೊಳ್ಳಲು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಬೇಕು ಎಂದರು. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

ಭಾರತೀಯರು ಎಚ್-1 ಬಿ ವೀಸಾಗಳಿಗೆ ಅವಲಂಬಿತರಾಗಿದ್ದಾರೆ ಎನ್ನುವುದು ತಪ್ಪು. ಉದಾಹರಣೆಗೆ ಪ್ರತಿವರ್ಷ ಸುಮಾರು 65,000 ಎಚ್-1ಬಿ ವೀಸಾಗಳಂತೆ ಕಳೆದ 10 ವರ್ಷಗಳಲ್ಲಿ ಹೆಚ್ಚುಕಡಿಮೆ 6,50,000 ವೀಸಾಗಳನ್ನು ನೀಡಲಾಗಿದೆ. ಹೀಗಾಗಿ ಒಟ್ಟಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿದ್ದು, ಇನ್ಫೋಸಿಸ್ ನಲ್ಲಿಯೇ 2,00,000 ಉದ್ಯೋಗಿಗಳಿದ್ದಾರೆ. ಟಿಸಿಎಸ್ ನಲ್ಲಿ ಇದರ ಎರಡು ಪಟ್ಟು ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ.

English summary

Indian IT not dependent on H-1B: Infosys CEO Vishal Sikka

Infosys CEO Vishal Sikka has refuted the general impression that the Indian IT industry is overly dependent on H-1B visas for its business mode, amid the Trump administration's crackdown on firms abusing the visa system to hire foreign workers on a low wage.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X