For Quick Alerts
ALLOW NOTIFICATIONS  
For Daily Alerts

ಜಿಯೋ ಅಲೆಲೆಲೆ...! ಕೇವಲ 500 ರೂ.ಗೆ 4G ವೋಲ್ಟ್ ಸ್ಮಾರ್ಟ್ ಫೋನ್ !!

ಮುಖೇಶ್ ಅಂಬಾನಿ ಜಿಯೋ 4G ವೋಲ್ಟ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದು, ಅದರ ಮೂಲಕ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಕೂಡ ಕೇವಲ 500 ರೂ. ಬೆಲೆಯಲ್ಲಿ!

By Siddu Thoravat
|

ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಮೂಲಕ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನವನ್ನುಂಟು ಮಾಡಿದವರು. ಇದೀಗ ಜಿಯೋ 4G ವೋಲ್ಟ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದ್ದು, ಅದರ ಮೂಲಕ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಕೂಡ ಕೇವಲ 500 ರೂ. ಬೆಲೆಯಲ್ಲಿ!

ಸದಾ ಹೊಸ ಸಾಹಸಗಳಿಗೆ ತುಡಿಯುವ ಅಂಬಾನಿ ಎಲ್‍ಟಿಇ ತಂತ್ರಜ್ಞಾನ ವೈಶಿಷ್ಟತೆಯನ್ನು ಹೊಂದಿರುವ ಫೋನ್ ತಯಾರಿಸುತ್ತಿದ್ದು, ಈ ಫೋನ್ ಶೀಘ್ರದಲ್ಲೇ ಗ್ರಾಹಕರ ಕೈಗೆ ಸೇರಲಿದೆ.

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಜಿಯೋ ಸಮ್ಮರ್ ಸರ್ಫ್ರೈಸ್ ಆಫರ್ ಶೀಘ್ರ ಮುಕ್ತಾಯ..! ಮುಂದೇನು..?ಜಿಯೋ ಸಮ್ಮರ್ ಸರ್ಫ್ರೈಸ್ ಆಫರ್ ಶೀಘ್ರ ಮುಕ್ತಾಯ..! ಮುಂದೇನು..?

ಟೆಲಿಕಾಂ ರಂಗದಲ್ಲಿ ಕುತೂಹಲ

ಟೆಲಿಕಾಂ ರಂಗದಲ್ಲಿ ಕುತೂಹಲ

ಜಿಯೋ 4G ವೋಲ್ಟ್ ಸ್ಮಾರ್ಟ್ ಫೋನ್ ಬಿಡುಗಡೆ ಪ್ರಕಟಣೆಯಿಂದ ಸಹಜವಾಗಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಜಿಯೋ ಘೋಷಿಸಲಿರುವ ಆಕ್ರಮಣಕಾರಿ ಬೆಲೆ, ಹೊಸ ಟ್ಯಾರಿಪ್ ಯೋಜನೆಗಳು, ಆಕರ್ಷಕ ಯೋಜನೆಗಳು ಬೇರೆ ಬೇರೆ ಕಂಪನಿಗಳಿಗೆ ಬಿಸಿ ತಟ್ಟಲಿದೆ ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ.

ಅಂದಾಜು ಬೆಲೆ 500
 

ಅಂದಾಜು ಬೆಲೆ 500

ಜಿಯೋ 4G ವೋಲ್ಟ್ ಸ್ಮಾರ್ಟ್ ಫೋನ್ ಫೀಚರ್ ಫೋನಿನ ಅಂದಾಜು ಬೆಲೆ ರೂ. 500 ಇರಲಿದೆ. ಹಾಗಾಗಿ ಇದು ಸ್ಮಾರ್ಟ್ ಫೋನ್ ರಂಗದಲ್ಲಿ ಹೊಸ ಬಿರುಗಾಳಿ ಎಬ್ಬಿಸಲಿದೆ ಎಂಬ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಈ ಹಿಂದೆ ಜಿಯೋ ರೂ. 999-1500 ವ್ಯಾಪ್ತಿಯ ಒಳಗಡೆ ಎಲ್‍ಟಿಇ ತಂತ್ರಜ್ಞಾನ ವೈಶಿಷ್ಟತೆ ಹೊಂದಿರುವ ಫೋನ್ ಗಳನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ನೀಡಿತ್ತು.

2G ಯಿಂದ 4Gಗೆ ವರ್ಗಾವಣೆ ಗ್ಯಾರಂಟಿ

2G ಯಿಂದ 4Gಗೆ ವರ್ಗಾವಣೆ ಗ್ಯಾರಂಟಿ

2g ಫೋನ್ ಗಳನ್ನು ಹೊಂದಿರುವ ಗ್ರಾಹಕರು ನೇರವಾಗಿ 4g ಫೋನ್ ಗಳನ್ನು ಖರೀದಿಸುವುದರ ಮೂಲಕ ವರ್ಗಾವಣೆ ಆಗುವುದು ಗ್ಯಾರಂಟಿ! ಅತಿ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಜಿಯೋ ಮುಂದಾಗಿರುವುದರಿಂದ ಗ್ರಾಹಕರನ್ನು ಆಕರ್ಷಿಸಲಿದ್ದು, ಕಡಿಮೆ ಬೆಲೆಯ 4G ವೋಲ್ಟ್ ಸ್ಮಾರ್ಟ್ ಫೋನ್ ಪಡೆಯಲು ಗ್ರಾಹಕರು ಮುಗಿ ಬಿಳುವುದಂತು ಗ್ಯಾರಂಟಿ..!

ಸೀಮಿತ 4G ಸ್ಮಾರ್ಟ್ ಫೋನ್ ಲಭ್ಯ

ಸೀಮಿತ 4G ಸ್ಮಾರ್ಟ್ ಫೋನ್ ಲಭ್ಯ

ದೇಶಿಯ ಮಾರುಕಟ್ಟೆಯಲ್ಲಿ ಸೀಮಿತ ಪ್ರಮಾಣದಲ್ಲಿ 4G ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಲಭ್ಯವಿರುವ 4G ಸ್ಮಾರ್ಟ್ ಫೋನ್ ಗಳು ಕೂಡ ದುಬಾರಿ ಬೆಲೆಯದ್ದಾಗಿವೆ. ಬಡವರು ಸ್ಮಾರ್ಟ್ ಫೋನ್ ಗಳನ್ನು ಹೊಂದುವುದು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಇನ್ನುಮುಂದೆ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಹೊಂದಿದರೆ ಆಶ್ಚರ್ಯಪಡಬೇಕಿಲ್ಲ.

4G ಸ್ಮಾರ್ಟ್ಫೋನ್ ಕಡಿಮೆ ಬೆಲೆಗೆ ಏಕೆ?

4G ಸ್ಮಾರ್ಟ್ಫೋನ್ ಕಡಿಮೆ ಬೆಲೆಗೆ ಏಕೆ?

ಮುಖೇಶ್ ಅಂಬಾನಿ ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದಾರೆ. ಈಗಾಗಲೇ ಜಿಯೋ ಸಿಮ್ ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸ್ಮಾರ್ಟ್ ಫೋನ್ ಸೇವೆ ಮೂಲಕ ಇನ್ನೊಂದು ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿಯೇ 2G ಮೊಬೈಲ್ ಗಳನ್ನು ಬಳಸುತ್ತಿರುವ ಗ್ರಾಕರನ್ನು ಆಕರ್ಷಿಸಲು 4g ವೋಲ್ಟ್ ಫೋನ್ ತಯಾರಿಸಿದೆ.

ಟೆಲಿಕಾಂ ಕಂಪನಿಗಳ ಮೇಲೆ ಎಫೆಕ್ಟ್!

ಟೆಲಿಕಾಂ ಕಂಪನಿಗಳ ಮೇಲೆ ಎಫೆಕ್ಟ್!

ಜಿಯೋ 4G ಸ್ಮಾರ್ಟ್ ಫೋನ್ ಪರಿಚಯಿಸುತ್ತಿರುವುದು ಅನ್ಯ ಮೊಬೈಲ್ ಫೋನ್ ಉತ್ಪಾದಕ ಕಂಪನಿಗಳ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಜಿಯೋದಂತೆಯೇ ಏರ್ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದ್ದು, ಅವುಗಳು ಕೂಡ ಕೆಲ ತಿಂಗಳುಗಳಲ್ಲಿ ವೋಲ್ಟ್ ಸೇವೆ ಗ್ರಾಹಕರಿಗೆ ಒದಗಿಸಲಿವೆ ಎನ್ನಲಾಗಿದೆ.

English summary

Jio Feature Phone to Launch With Rs. 500 Price

The long-rumoured Jio feature phone with 4G VoLTE support may be unveiled at a price of Rs. 500 on July 21, the day Reliance Industries Limited is holding its Annual General Meeting.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X