Englishहिन्दी മലയാളം தமிழ் తెలుగు

ಇನ್ಫೋಸಿಸ್: ನಿರೀಕ್ಷೆ ಮೀರಿದ ತ್ರೈಮಾಸಿಕ ಫಲಿತಾಂಶ: ಇಲ್ಲಿವೆ ಪ್ರಮುಖ ಅಂಶಗಳು

Written By: Siddu
Subscribe to GoodReturns Kannada

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಮೊದಲ ತ್ರೈಮಾಸಿಕದ ಫಲಿತಾಂಶ ಮಾರುಕಟ್ಟೆಯ ನಿರೀಕ್ಷೆ ಮಟ್ಟವನ್ನು ಮೀರಿದೆ.

ಜೂನ್ 30, 2017ರ ತ್ರೈಮಾಸಿಕದ ಅಂತ್ಯದ ವೇಳೆಗೆ, ಲಾಭ, ಆದಾಯ, ಹಣಕಾಸು ಸೇವೆ ಎಲ್ಲಾ ವಿಭಾಗದಲ್ಲೂ ನಿರೀಕ್ಷೆಗಿಂತಲೂ ಧನಾತ್ಮಕ ಬೆಳವಣಿಗೆ ಸಾಧಿಸಿದೆ. ಅದರ ಪ್ರಮುಖ ಅಂಶಗಳು ಇಲ್ಲಿ ನೀಡಲಾಗಿದೆ. ಇವತ್ತೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಆದಾಯ, ನಿವ್ವಳ ಲಾಭ

ಜೂನ್ 30, 2017ರ ಅಂತ್ಯಕ್ಕೆ ಇನ್ಫೋಸಿಸ್ ಆದಾಯ ರೂ. 17,078 ಕೋಟಿ ಆಗಿದ್ದು, ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ. ಕಂಪನಿಯ ನಿವ್ವಳ ಆದಾಯ ರೂ. 3,483 ಕೋಟಿಯಾಗಿದ್ದು, ಇದು ಕೂಡ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ. ಇಬಿಐಟಿ (Earnings Before Interest and Tax Read)
ಕೂಡ ಸರಾಸರಿ ಉತ್ತಮವಾಗಿದೆ.

ಸಕಾರಾತ್ಮಕ ಅಂಶ

ಕಂಪನಿಯ ಮಾರ್ಗದರ್ಶನ ಬಹಳ ಸಕಾರಾತ್ಮಕವಾಗಿದೆ. ವಿಶೇಷವಾಗಿ ಡಾಲರ್ ರೆವೆನ್ಯೂ ಗೈಡೆನ್ಸ್. ಕಂಪನಿ ಆದಾಯವನ್ನು ಶೇ. 6.1-8.1 ದಿಂದ ಶೇ. 7.1-9.1 ಕ್ಕೆ ಹೆಚ್ಚಿಸಿದೆ. ಸ್ಥಿರ ಕರೆನ್ಸಿ ಗೈಡೆನ್ಸ್ 6.5% ರಿಂದ 8.5%ಕ್ಕೆ ಉಳಿಸಲಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಹೆಚ್ಚಿನ ಆದಾಯದ ಗೋಚರತೆಯನ್ನು ಇದು ಸೂಚಿಸುತ್ತದೆ.

ವಿಶಾಲ್ ಸಿಕ್ಕಾ ಏನಂತಾರೆ?

ಮೊದಲ ತ್ರೈಮಾಸಿಕದ ಉತ್ತಮ ಫಲಿತಾಂಶ ಬಹುರಂಗಗಳಲ್ಲಿನ ವಿಶಾಲ ಆಧಾರಿತ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಆದಾಯ ಬೆಳವಣಿಗೆ, ಆರೋಗ್ಯಕರ ನಗದು ಉತ್ಪಾದನೆ ಮತ್ತು ಒಟ್ಟಾರೆ ವ್ಯವಹಾರ ಫಲಿತಾಂಶಗಳು ಉತ್ತಮವಾಗಿವೆ. ಸತತವಾಗಿ ಆರು ತಿಂಗಳಿಗೆ ಪ್ರತಿ ಉದ್ಯೋಗಿಯ ಆದಾಯವನ್ನು ಹೆಚ್ಚಿಸುವ ಮತ್ತು ಹೊಸ ಉನ್ನತ ಬೆಳವಣಿಗೆ ಸೇವೆಗಳ ಮೂಲಕ ಹಾಗೂ ನಾವಿನ್ಯತೆ ನೇತೃತ್ವದ ಬೆಳವಣಿಗೆ ಹೆಚ್ಚಿಸುವಂತೆ ಪ್ರೋತ್ಸಾಹಿಸಿದ್ದೇನೆ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.

English summary

Infosys Q1 Numbers Beat Estimates; Here Are main points

Infosys posted strong first-quarter numbers that beat market expectations, driven mainly by strong spending from top financial services and European customers.
Story first published: Friday, July 14, 2017, 12:10 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC