For Quick Alerts
ALLOW NOTIFICATIONS  
For Daily Alerts

ಡೊನಾಲ್ಡ್ ಟ್ರಂಪ್ ಎಚ್ 1 ಬಿ ವೀಸಾ ನೀತಿ ಇನ್ನೂ ಕಠಿಣ, ಭಾರತೀಯ ಉದ್ಯೋಗಿಗಳಿಗೆ ಆತಂಕ!

ಡೊನಾಲ್ಡ್ ಟ್ರಂಪ್ ಭಾರತೀಯ ಐಟಿ ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ! ಟ್ರಂಪ್ ಸರ್ಕಾರ ಕಠಿಣಕರವಾಗಿರುವ ಹೊಸ ಹೆಚ್ 1 ಬಿ ವೀಸಾ ನೀತಿಯನ್ನು ಪ್ರಕಟಿಸಿದ್ದು, ಭಾರತೀಯರ ಆತಂಕಕ್ಕೆ ಕಾರಣವಾಗಿದೆ.

By Siddu
|

ಡೊನಾಲ್ಡ್ ಟ್ರಂಪ್ ಭಾರತೀಯ ಐಟಿ ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ! ಟ್ರಂಪ್ ಸರ್ಕಾರ ಕಠಿಣಕರವಾಗಿರುವ ಹೊಸ ಎಚ್ 1 ಬಿ ವೀಸಾ ನೀತಿಯನ್ನು ಪ್ರಕಟಿಸಿದ್ದು, ಭಾರತೀಯರ ಆತಂಕಕ್ಕೆ ಕಾರಣವಾಗಿದೆ.

 

2018ರ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ ಜಾರಿಗೆ ಟ್ರಂಪ್ ಸರ್ಕಾರ ಮುಂದಾಗಿರುವ ಕ್ರಮವು ಭಾರತೀಯ ಐಟಿ ಕಂಪನಿಗಳು ಮತ್ತು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಎಚ್ 1 ಬಿ ವೀಸಾ ಪಡೆಯುವುದು ಕಠಿಣ

ಎಚ್ 1 ಬಿ ವೀಸಾ ಪಡೆಯುವುದು ಕಠಿಣ

ಅಮೆರಿಕಾದ ಕಂಪನಿಗಳು ತಮ್ಮ ಕಾರ್ಯಕ್ಕಾಗಿ ಹೊರ ದೇಶದ ಐಟಿ ಕಂಪನಿಗಳಾ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ 2018ರ ಅಮೆರಿಕಾ ನಾಗರಿಕತ್ವ ಹಾಗು ವಲಸೆ ಸೇವೆಗಳ ನೀತಿಯನ್ವಯ ವಿದೇಶಿ ಉದ್ಯೋಗಿಗಳಿಗೆ ಎಚ್ 1 ಬಿ ವೀಸಾ ನೀಡಬೇಕಾಗುತ್ತದೆ. ಅಮೆರಿಕಾದ ಈ ನೀತಿಯಿಂದಾಗಿ ಉದ್ಯೋಗ ಪಡೆಯಬಯಸುವವರಿಗೆ ಎಚ್ 1 ಬಿ ವೀಸಾ ಪಡೆದುಕೊಳ್ಳುವುದು ಕಠಿಣವಾಗಲಿದೆ. ಎಚ್-1ಬಿ ವೀಸಾ ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

ಭಾರತೀಯರ ಮೇಲೆ ಹೆಚ್ಚು ಪರಿಣಾಮ

ಭಾರತೀಯರ ಮೇಲೆ ಹೆಚ್ಚು ಪರಿಣಾಮ

ಭಾರತದ ಪ್ರಮುಖ ಐಟಿ ಸಂಸ್ಥೆ ಹಾಗು ಲಕ್ಷಾಂತರ ಉದ್ಯೋಗಿಗಳ ಮೇಲೆ ಎಚ್ 1 ಬಿ ವೀಸಾ ಹೊಸ ನೀತಿ ನೇರ ಪರಿಣಾಮ ಬೀರಲಿದೆ. ಎಚ್ 1 ಬಿ ವೀಸಾ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ.

ಅಮೆರಿಕಾ ನಾಗರಿಕತ್ವ ಮತ್ತು ವಲಸೆ ನೀತಿಯಲ್ಲಿ ಏನಿದೆ?
 

ಅಮೆರಿಕಾ ನಾಗರಿಕತ್ವ ಮತ್ತು ವಲಸೆ ನೀತಿಯಲ್ಲಿ ಏನಿದೆ?

ಟ್ರಂಪ್ ಸರ್ಕಾರದ ಹೊಸ ನಾಗರಿಕತ್ವ ಮತ್ತು ವಲಸೆ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ನಿರ್ದಿಷ್ಟ ಕಾರಣ ಮತ್ತು ನಿರ್ದಿಷ್ಟ ಅವಧಿಗೆ ಮಾತ್ರ ವಿದೇಶಿಗರನ್ನು ಉದ್ಯೋಗಿಗಳಾಗಿ ಕರೆಸಿಕೊಳ್ಳಬೇಕು. ಅಲ್ಲದೇ ಮುಖ್ಯವಾಗಿ ಭವಿಷ್ಯದಲ್ಲಿ ದೊರೆಯಬಹುದಾದ ಯೋಜನೆಗಳಿಗಾಗಿ ಮುಂಚಿತವಾಗಿಯೇ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಅವಕಾಶ ನೀಡದಿರುವಂತೆ ಈ ನೀತಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

ವೀಸಾ ಅವಧಿ

ವೀಸಾ ಅವಧಿ

ಉದ್ಯೋಗಿಗಳು ಈ ನೀತಿಯಲ್ಲಿ ಉಲ್ಲೇಖಿಸಿರುವ ಹೊಸ ಮಾನದಂಡಗಳ ಅಡಿಯಲ್ಲಿ ಬರಬೇಕು ಮತ್ತು ಸೂಚಿಸಲಾಗಿರುವ ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು ಎಂದು ತಿಳಿಸಿದೆ. ಎಚ್ 1 ಬಿ ವೀಸಾ ಅವಧಿ ಮೂರು ವರ್ಷಗಳಾಗಿದ್ದರೂ, 3 ವರ್ಷದೊಳಗೆ ಕೆಲಸ ಪೂರ್ಣಗೊಂಡರೆ ಅಂತಹ ಉದ್ಯೋಗಸ್ಥರ ವೀಸಾ ಅವಧಿ ಕೂಡ ಪೂರ್ಣಗೊಳ್ಳುತ್ತದೆ. ಅದರಂತೆಯೇ ಎಚ್ 1 ಬಿ ವೀಸಾ ಅವಧಿ ಪೂರ್ಣಗೊಂಡು, ಅದಾಗ್ಯೂ ಉದ್ದೇಶಿತ ಕೆಲಸ ಪೂರ್ಣಗೊಳ್ಳದಿದ್ದರೆ ಅಂತಹ ಉದ್ಯೋಗಿಗಳು ಸಂಬಂಧಿತ ಸಂಸ್ಥೆಗಳ ಮೂಲಕ ವೀಸಾ ಅವಧಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ.

ಸಂಪೂರ್ಣ ದಾಖಲಾತಿ ಒದಗಿಸಬೇಕು

ಸಂಪೂರ್ಣ ದಾಖಲಾತಿ ಒದಗಿಸಬೇಕು

ಅಮೆರಿಕಾದಲ್ಲಿ ಉದ್ಯೋಗಕ್ಕಾಗಿ ಕರೆಸಿಕೊಳ್ಳುವ ಕಂಪನಿಗಳು ತಾವು ಯಾವ ಉದ್ದೇಶ-ಕಾರಣಕ್ಕಾಗಿ ವಿದೇಶಿ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ವಿವರಿಸಬೇಕು. ಸ್ವದೇಶಿಯ ಉದ್ಯೋಗಸ್ಥರನ್ನು ಹೊರತುಪಡಿಸಿ ವಿದೇಶಿ ಉದ್ಯೋಗಸ್ಥರನ್ನು ಯಾಕೆ ನೇಮಿಸಬೇಕು? ವಿದೇಶಿ ಉದ್ಯೋಗಿಗಳು ಟ್ರಂಪ್ ಸರ್ಕಾರ ಸೂಚಿಸಿರುವ ವಿಶೇಷ ಕೌಶಲ್ಯ ಹಾಗು ಮಾನದಂಡಗಳಿಗೆ ಅರ್ಹರಾಗಿದ್ದಾರೆಯೇ ಇತ್ಯಾದಿ ಅಂಶಗಳ ದಾಖಲೆಗಳನ್ನು ಸಂಪೂರ್ಣವಾಗಿ ಒದಗಿಸಬೇಕು.

English summary

Donald Trump H1B Visa Policy tough; Indian firms to be impacted

Under the new policy, the company would have to go an extra length to prove that its H-1B employee at a third-party worksite has specific and non-qualifying speculative assignments in speciality occupation.
Story first published: Friday, February 23, 2018, 17:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X