For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿ ಲೂಟಿ, ಗ್ರಾಹಕರಿಗೆ ಬರೆ! ಎಸ್ಬಿಐ ಬಡ್ಡಿದರ ಹೆಚ್ಚಳ

ದೇಶದ ಅತಿ ದೊಡ್ಡ ಸಾಲದಾತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೆಚ್ಚುವರಿ ವೆಚ್ಚ ಸಾಲದ ದರವನ್ನು (ಎಂಸಿಎಲ್‌ಆರ್‌) ಏರಿಕೆ ಮಾಡಿದೆ.

By Siddu
|

ದೇಶದ ಅತಿ ದೊಡ್ಡ ಸಾಲದಾತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೆಚ್ಚುವರಿ ವೆಚ್ಚ ಸಾಲದ ದರವನ್ನು (ಎಂಸಿಎಲ್‌ಆರ್‌) ಏರಿಕೆ ಮಾಡಿದೆ.

 

ಎಸ್ಬಿಐ ನಂತೆಯೇ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಮತ್ತು ಖಾಸಗಿ ಕ್ಷೇತ್ರದ ಐಸಿಐಸಿಐ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿ ದರವನ್ನು ಏರಿಸಿವೆ. ಎಸ್ಬಿಐ 2016ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಒಂದು ವರ್ಷದ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸಿದೆ. ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!

ಬಡ್ಡಿದರ ಏರಿಕೆ ಎಷ್ಟು?

ಬಡ್ಡಿದರ ಏರಿಕೆ ಎಷ್ಟು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್‌ಬಿಐ) ಶೇ. 0.20, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ ಶೇ. 0.15ರಷ್ಟು ಬಡ್ಡಿದರ ಏರಿಕೆ ಮಾಡಿವೆ. ಎಸ್ಬಿಐ ಠೇವಣಿಗಳ ಮೇಲಿನ ಎಂಸಿಎಲ್ಆರ್ ಬಡ್ಡಿದರ ಇದಕ್ಕೂ ಮೊದಲು ಶೇ 7.95ರಷ್ಟಿತ್ತು. ಈಗ ಶೇ 8.15ಕ್ಕೆ ಏರಲಿದೆ. ಈ ಹೊಸ ದರಗಳು ತಕ್ಷಣದಿಂದಲೇ ಜಾರಿಯಾಗಲಿವೆ ಎಂದು ಬ್ಯಾಂಕುಗಳು ತಿಳಿಸಿವೆ.

ಪಿಎನ್ ಬಿ ಹಗರಣ

ಪಿಎನ್ ಬಿ ಹಗರಣ

12 ಸಾವಿರ ಕೋಟಿ ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಒಂದು ವರ್ಷ ಅವಧಿಯ ಎಂಸಿಎಲ್ಆರ್ ಹೆಚ್ಚಿಸಿದ್ದು, ಮಾರ್ಚ್ 01, 2018ರಿಂದ ಜಾರಿಗೆ ಬಂದಿದೆ. ಎಂಸಿಎಲ್ಆರ್ ದರವನ್ನು ಶೇ. 8.15 ರಿಂದ 8.30ಕ್ಕೆ ಹೆಚ್ಚಿಸಿದೆ.

ಎಂಸಿಎಲ್ಆರ್ ಪರಿಣಾಮ
 

ಎಂಸಿಎಲ್ಆರ್ ಪರಿಣಾಮ

ಬ್ಯಾಂಕುಗಳು ಹೆಚ್ಚಿಸಿರುವ ಎಂಸಿಎಲ್ಆರ್ ಬಡ್ಡಿದರದಿಂದಾಗಿ ಹೊಸ ಸಾಲ ಪಡೆಯುವವರ ಇಎಂಐ ಏರಿಕೆಯಾಗಲಿದೆ. ಎಂಸಿಎಲ್ಆರ್ ಆಧಾರದ ಮೇಲೆ ಹೊಸ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ, ಆಸ್ತಿ ಮೇಲಿನ ಸಾಲಗಳ ಬಡ್ಡಿದರ ಹಾಗು ಇಎಂಐ ಅನ್ವಯವಾಗಲಿದೆ. ಈ ಹಿಂದಿನ ಸಾಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಎಸ್ಬಿಐ ಗ್ರಾಹಕರಿಗೆ ಗಂಡಾಂತರ

ಎಸ್ಬಿಐ ಗ್ರಾಹಕರಿಗೆ ಗಂಡಾಂತರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ. 0.75ರವರೆಗೆ ಹೆಚ್ಚಿಸಿದೆ.

ಬೇರೆ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಬಹುದು?

ಬೇರೆ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಬಹುದು?

2017ರ ನವೆಂಬರ್‌ ನಂತರದಲ್ಲಿ ಮೂರನೇ ಬಾರಿಗೆ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದಂತಾಗಿದೆ. ಇದರ ಪರಿಣಾಮದಿಂದಾಗಿ ಸಾಲಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿದೆ. ದೇಶದ ಇನ್ನಿತರ ಬ್ಯಾಂಕುಗಳು ಸಹ ಎಸ್ಬಿಐ ನೀತಿಯನ್ನು ಅನುಸರಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬ್ಯಾಂಕ್ ಲೂಟಿಕೋರ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಗ್ರಾಹಕರು ಮಾತ್ರ ಬಲಿಪಶು ಆಗಿದ್ದಾರೆ!

English summary

SBI Hikes Lending Rate For First Time Since April 2016, EMIs To Go Up

SBI raised its lending rate on Thursday. Following this, PNB and ICICI Bank raised their marginal cost of funds based lending rates (MCLR)
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X