For Quick Alerts
ALLOW NOTIFICATIONS  
For Daily Alerts

ಜಾಕ್ ಮಾ ರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಶುಕ್ರವಾರ ಅಲಿಬಾಬಾ ಗ್ರೂಪ್ ನ ಜಾಕ್ ಮಾ ರನ್ನು ಹಿಂದಿಕ್ಕಿ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

By Siddu Thoravat
|

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಅಲಿಬಾಬಾ ಗ್ರೂಪ್ ನ ಜಾಕ್ ಮಾ ರನ್ನು ಹಿಂದಿಕ್ಕಿ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

 

ಬ್ಲೂಮ್ ಬರ್ಗ್ ವರದಿ ಅನ್ವಯ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ ಅಗ್ರ ಗಣ್ಯರಾಗಿ ಹೊರಹೊಮ್ಮಿದ್ದು,
ಭಾರತದ ಇ - ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಸಂಚಲನ ಮೂಡಿಸಿದ ಪರಿಣಾಮ ಏಷ್ಯಾದ ಶ್ರೀಮಂತರಾಗಿ ಮುಖೇಶ್ ಅಂಬಾನಿ ಹೊರಹೊಮ್ಮಿದ್ದಾರೆ.

ಅಂಬಾನಿ ಆಸ್ತಿ ಮೌಲ್ಯ

ಅಂಬಾನಿ ಆಸ್ತಿ ಮೌಲ್ಯ

ಬ್ಲೂಮ್ ಬರ್ಗ್ ನೀಡಿರುವ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮುಖೇಶ್ 44.3 ಬಿಲಿಯನ್ ಆಸ್ತಿ ಅಂದರೆ ಅಂದಾಜು ರೂ. 3 ಲಕ್ಷ ಕೋಟಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಗ್ರೂಪ್ ನ ಅಧ್ಯಕ್ಷ ಜಾಕ್ ಮಾ ಅವರನ್ನ ಹಿಂದಿಕ್ಕಿದ್ದಾರೆ.

ಜಾಕ್ ಮಾ ಸಂಪತ್ತು

ಜಾಕ್ ಮಾ ಸಂಪತ್ತು

ಜಾಕ್ ಮಾ ರ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ 1.4 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ ಹಿನ್ನಲೆಯಲ್ಲಿ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

RIL ಷೇರು ಏರಿಕೆ
 

RIL ಷೇರು ಏರಿಕೆ

ರಿಲಯನ್ಸ್ ಷೇರುಗಳಲ್ಲೂ ಧನಾತ್ಮಕ ಬೆಳವಣಿಗೆಯಾಗಿದ್ದು, ಶುಕ್ರವಾರ ರಿಲಯನ್ಸ್ ಇಂಡಸ್ಟ್ರೀಸ್ ನ ಷೇರುಗಳಲ್ಲಿ ಶೇಕಡಾ 1.6 ರಷ್ಟು ಬೆಳವಣಿಗೆ ಕಂಡುಬಂದಿದೆ. ರಿಲಯನ್ಸ್ ಪೆಟ್ರೋ ಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟಾಗಿದ್ದರಿಂದ ಆಸ್ತಿ ಮೌಲ್ಯಕ್ಕೆ ರೂ. 27 ಸಾವಿರ ಕೋಟಿ ಹರಿದು ಬಂದಿದೆ.

English summary

Mukesh Ambani topples Jack Ma to become Asia's richest person

The petrochemical-to-telecom business magnate has added $4 billion to his wealth in 2018
Story first published: Saturday, July 14, 2018, 13:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X