For Quick Alerts
ALLOW NOTIFICATIONS  
For Daily Alerts

ಯಾಕೆ ಡಿಸೆಂಬರ್ 31 ರ ಒಳಗೆ ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬದಲಿಸಿಕೊಳ್ಳಬೇಕು?

ಎಲ್ಲಾ ಬ್ಯಾಂಕ್ ಗಳು ಚಿಪ್ ಆಧಾರಿತ ಹೊಸ ಇಎಂವಿ (ಯುರೋಪೇ ಮಾಸ್ಟರ್ ಕಾರ್ಡ್ ವೀಸಾ) ತಂತ್ರಜ್ಞಾನಕ್ಕೆ ತಮ್ಮ ಕಾರ್ಡುಗಳನ್ನು ರೂಪಾಂತರಗೊಳಿಸುತ್ತಿವೆ.

|

ಪ್ರಸ್ತುತ ಗ್ರಾಹಕರು ಬಳಸುತ್ತಿರುವ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೊಸ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳಿ ಎಂಬ ಸೂಚನೆ ನಿಮ್ಮ ಬ್ಯಾಂಕುಗಳಿಂದ ಬಂದಿರಬಹುದು.

 

ಈ ಬಗ್ಗೆ ಕೆಲವರಿಗೆ ಗೊಂದಲ ಆಗಿರಬಹುದು. ಆದರೆ ಎಲ್ಲಾ ಬ್ಯಾಂಕ್ ಗಳು ಚಿಪ್ ಆಧಾರಿತ ಹೊಸ ಇಎಂವಿ (ಯುರೋಪೇ ಮಾಸ್ಟರ್ ಕಾರ್ಡ್ ವೀಸಾ) ತಂತ್ರಜ್ಞಾನಕ್ಕೆ ತಮ್ಮ ಕಾರ್ಡುಗಳನ್ನು ರೂಪಾಂತರಗೊಳಿಸುತ್ತಿವೆ. ಈ ಕಾರಣಕ್ಕೆ ದೇಶಾದ್ಯಂತ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೊಸ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳಿ ಎಂಬ ಸಂದೇಶ ಕಳುಹಿಸುತ್ತಿವೆ.

ಡಿಸೆಂಬರ್ 31ಕ್ಕೆ ಕೊನೆದಿನ

ಡಿಸೆಂಬರ್ 31ಕ್ಕೆ ಕೊನೆದಿನ

ಬ್ಯಾಂಕುಗಳಿಂದ ಸಂದೇಶ ಪಡೆದ ನಂತರ ಗೊಂದಲಕ್ಕೆ ಒಳಗಾಗದೆ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಉಚಿತವಾಗಿ ಕಾರ್ಡ್ ಬದಲಿಸಿಕೊಳ್ಳಬೇಕು. ಪ್ರಸ್ತುತ ಬಳಸುತ್ತಿರುವ ಮ್ಯಾಗ್ನೆಟಿಕ್ ಕಾರ್ಡ್ ಬಳಕೆ ಮಾಡುವ ಅವಕಾಶ 2018 ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ.

ಆರ್ಬಿಐ ಸೂಚನೆ

ಆರ್ಬಿಐ ಸೂಚನೆ

ಮ್ಯಾಗ್ನೆಟಿಕ್ ಕಾರ್ಡ್ ಬದಲು ಇಎಂವಿ ಚಿಪ್ ಆಧಾರಿತ ಕಾರ್ಡ್ ಬಳಸಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2016 ರಲ್ಲೇ ಬ್ಯಾಂಕುಗಳಿಗೆ ಸೂಚನೆ ನೀಡಿತ್ತು. ಪ್ರಸ್ತುತ 39.4 ದಶಲಕ್ಷ ಸಕ್ರಿಯ ಕ್ರೆಡಿಟ್ ಕಾರ್ಡ್ ಹಾಗು 944 ದಶಲಕ್ಷ ಡೆಬಿಟ್ ಕಾರ್ಡ್ ಬಳಕೆಯಲ್ಲಿವೆ.

ಸುರಕ್ಷತೆಗೆ ಆದ್ಯತೆ
 

ಸುರಕ್ಷತೆಗೆ ಆದ್ಯತೆ

ವಂಚನೆಗಳನ್ನು ತಡೆದು ಸುರಕ್ಷತೆಗೆ ಆದ್ಯತೆ ನೀಡುವ ಸಲುವಾಗಿ ಇಎಂವಿ ಕಾರ್ಡ್ ಬಳಕೆಗೆ ಸೂಚಿಸಲಾಗಿದೆ. ಮ್ಯಾಗ್ನಟಿಕ್ ಕಾರ್ಡ್ ಅನ್ನು ಪಿಓಎಸ್ ಗಳಲ್ಲಿ ಕೇವಲ ಸ್ವೈಪ್ ಮಾಡಿ ಬಳಸಲಾಗುತ್ತದೆ, ಆದರೆ ಚಿಪ್ ಆಧಾರಿತ ಕಾರ್ಡ್ ಗಳ ಬಳಕೆಗೆ ಚಿಪ್ ಮತ್ತು ಪಿನ್ ಕಡ್ಡಾಯವಾಗಿ ಬಳಸಬೇಕಾಗುತ್ತದೆ.

English summary

Why you should Change your old debit, credit card before December 31

There are probably lakhs of people in the country who have been recently notified by banks to get their old magnetic stripe cards with new EMV (Europay-MasterCard-Visa) chip-based cards.
Story first published: Friday, September 21, 2018, 13:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X