For Quick Alerts
ALLOW NOTIFICATIONS  
For Daily Alerts

ಭೀಮ್ ಆಪ್ ನಕಲಿ ಕಸ್ಟಮರ್ ಕೇರ್! ರೂ. 40 ಸಾವಿರ ವಂಚನೆ

|

ಡಿಜಿಟಲ್ ಕ್ರಾಂತಿಯ ಜೊತೆಗೆ ವಂಚನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು. ಇತ್ತೀಚೆಗೆ ದೇಶದಲ್ಲಿ ಹೆಚ್ಚು ಪ್ರಭಾವಶಾಲಿ ಹಣ ವರ್ಗಾವಣೆ ಮಾಧ್ಯಮಗಳಾಗಿ, ಪೇಟಿಎಂ, ಭೀಮ್ ಆಪ್ ಗಳು ಮುಂಚೂಣಿಯಲ್ಲಿವೆ.

ಆದರೆ ಇಂತಹ ಆ್ಯಪ್ ಗಳ ಕಸ್ಟಮರ್ ಕೇರ್ ಬಗ್ಗೆ ಗ್ರಾಹಕರು ಹೆಚ್ಚು ಜಾಗೃತರಾಗಿರುವುದು ಅವಶ್ಯಕ. ಏಕೆಂದರೆ ನಕಲಿ ಕಸ್ಟಮರ್ ಕೇರ್ ಸಂಖ್ಯೆ ನೀಡಿ ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ವಂಚನಾ ಪ್ರಕರಣ
 

ಏನಿದು ವಂಚನಾ ಪ್ರಕರಣ

21 ವರ್ಷ ವಯಸ್ಸಿನ ಅಂಧೇರಿ ಮೂಲದ ವಿದ್ಯಾರ್ಥಿ ವಂಚನೆಗೆ ಒಳಗಾಗಿದ್ದು, ತಮ್ಮ ಸಂಬಂಧಿಗೆ ರೂ. 10 ಸಾವಿರ ಭೀಮ್ ಆಪ್ ಮೂಲಕ ರವಾನಿಸಿದ್ದರು. ಆದರೆ, ಹಣ ಜಮೆ ಆಗದ ಕಾರಣಕ್ಕೆ ಕಸ್ಟಮರ್ ಕೇರ್ ನಂಬರ್‌ ಒಂದಕ್ಕೆ ಮಾಡಿದ್ದಾರೆ.

40 ಸಾವಿರ ವಂಚನೆ

ಕಸ್ಟಮರ್ ಕೇರ್ ಕರೆ ಸ್ವೀಕರಿಸಿದ ವ್ಯಕ್ತಿ ಸೂಕ್ತ ಮಾಹಿತಿ ತಾಂತ್ರಿಕ ಸಮಸ್ಯೆ ಇದೆ ಎಂದಿದ್ದಾರೆ. ಅಲ್ಲದೆ ನಾಲ್ಕು ನೋಟಿಫಿಕೇಶನ್ ಅಕ್ಸೆಪ್ಟ್ ಮಾಡುವಂತೆ ಸೂಚಿಸಿದ್ದಾರೆ. ಅದರಂತೆಯೇ 21 ವರ್ಷ ವಯಸ್ಸಿನ ಅಂಧೇರಿ ಮೂಲದ ವಿದ್ಯಾರ್ಥಿ ಪಾಲಿಸಿದ್ದಾರೆ. ತದನಂತರ ಅವರ ಖಾತೆಯಲ್ಲಿದ್ದ ರೂ. 40 ಸಾವಿರ ಕಡಿತವಾಗಿದೆ.

ಪೊಲೀಸ್ ಕಾರ್ಯಾಚರಣೆ

ವಂಚನೆಗೊಳಗಾಗಿರುವುದನ್ನು ಅರಿತ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿ ಎಫ್ಐಆರ್ ದಾಖಲಿಸಿದ್ದು, ವರ್ಸೋವಾ ಪೊಲೀಸರು ಶೀಘ್ರವೇ ವಂಚಕನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಒಂದು ನಿರ್ದಿಷ್ಟ ಮೊಬೈಲ್ ಫೋನ್ ಸಂಖ್ಯೆಯನ್ನು ಬಳಸಿಕೊಂಡು ದೇಶಾದ್ಯಂತ ಜನರನ್ನು ಮೋಸ ಮಾಡುತ್ತಿರುವ ಮೋಸಗಾರನನ್ನು ಪತ್ತೆ ಹಚ್ಚಲು ಮುಂಬೈ ಪೊಲೀಸರು ಕಾರ್ಯನಿರತರಾಗಿದ್ದಾರೆ.

Read more about: bhim app finance news money paytm
English summary

21-year-old calls up ‘customer care’ for BHIM app, loses money

THE MUMBAI Police is trying to trace a fraudster who has been allegedly cheating people across the country using a particular mobile phone number.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more