For Quick Alerts
ALLOW NOTIFICATIONS  
For Daily Alerts

ಇಪಿಎಫ್ಒ: ಸಾಮಾಜಿಕ ಭದ್ರತಾ ಯೋಜನೆಗಳ ನಿರ್ವಹಣೆಗೆ ಮಹತ್ವದ ನಿರ್ಧಾರ

ಸಾಮಾಜಿಕ ಭದ್ರತಾ ಯೋಜನೆಗಳನ್ನು ನಿರ್ವಹಿಸಲು ಪ್ರತ್ಯೇಕ ಕೇಂದ್ರೀಯ ಸೇವೆಗಳ ಕೇಡರ್ ಅನ್ನು ರಚಿಸಲು ಸರ್ಕಾರವು ಯೋಜಿಸಿದೆ.

|

ಸಾಮಾಜಿಕ ಭದ್ರತಾ ಯೋಜನೆಗಳನ್ನು ನಿರ್ವಹಿಸಲು ಪ್ರತ್ಯೇಕ ಕೇಂದ್ರೀಯ ಸೇವೆಗಳ ಕೇಡರ್ ಅನ್ನು ರಚಿಸಲು ಸರ್ಕಾರವು ಯೋಜಿಸಿದೆ.
ನಿವೃತ್ತಿ ನಿಧಿ ಸಂಸ್ಥೆಯಾಗಿರುವ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಸಂಪೂರ್ಣ ರಚನೆ ಮತ್ತು ಕಾರ್ಯಚಟುವಟಿಕೆಯನ್ನು ಒಟ್ಟುಗೂಡಿಸಲು ಮುಂದಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಇದರ ಮೂಲಕ ಅನುಕೂಲವಾಗಲಿದೆ.

 

ಸಾಮಾಜಿಕ ಭದ್ರತಾ ಸೇವೆ

ಸಾಮಾಜಿಕ ಭದ್ರತಾ ಸೇವೆ

ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಕೋಡ್ ಅಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯ ಸಾಮಾಜಿಕ ಭದ್ರತಾ ಮಂಡಳಿಗಳನ್ನು ನಡೆಸಲು ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುವುದು. ಈ ವಿಭಾಗವನ್ನು ಭಾರತೀಯ ಸಾಮಾಜಿಕ ಭದ್ರತಾ ಸೇವೆ ಎಂದು ಕರೆಯಲಾಗುವುದು.

ಇಪಿಎಫ್‌ಒ ಸಿಬ್ಬಂದಿ

ಇಪಿಎಫ್‌ಒ ಸಿಬ್ಬಂದಿ

ಭಾರತೀಯ ಸಾಮಾಜಿಕ ಭದ್ರತಾ ಸೇವೆ ಅಡಿಯಲ್ಲಿ ಇಪಿಎಫ್‌ಒ ಮತ್ತು ಇಎಸ್‌ಐಸಿಯ (ಉದ್ಯೋಗಿಗಳ ರಾಜ್ಯ ವಿಮೆ ಕಾರ್ಪೊರೇಷನ್‌) ಗ್ರೂಪ್‌ ಎ ಅಧಿಕಾರಿಗಳ ವಿಭಾಗ ವಿಲೀನಗೊಳಿಸಿ ಪುನರ್ರಚನೆಗೆ ಸರಕಾರ ಪರಿಶೀಲಿಸುತ್ತಿದೆ. ಪ್ರಸ್ತುತ ಇಪಿಎಫ್‌ಒ ಕೇಂದ್ರೀಯ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ 18,000 ಸಿಬ್ಬಂದಿಯಿದ್ದು, 2,000 ಮಂದಿ ಗ್ರೂಪ್‌ ಎ ಅಧಿಕಾರಿಗಳಿದ್ದಾರೆ.

ಸರ್ಕಾರದ ಉದ್ದೇಶ
 

ಸರ್ಕಾರದ ಉದ್ದೇಶ

ಅಧಿಕೃತ ಮಾಹಿತಿ ಪ್ರಕಾರ, ಹಲವಾರು ಲಕ್ಷಕ್ಕೂ ಅಧಿಕ ಸಾಮಾಜಿಕ ಭದ್ರತಾ ಕಾರ್ಪಸ್ ಅನ್ನು ನಿರ್ವಹಿಸಲು ಮೀಸಲಾದ ಕಾರ್ಯಕರ್ತರು ಅಗತ್ಯವಾಗಿದ್ದು, ತನ್ನ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ನಿಧಿಯನ್ನು ಚಲಾಯಿಸಲು ಅನುಕೂಲವಾಗುವಂತೆ ವಿಕೇಂದ್ರೀಕೃತ ವಿಧಾನವನ್ನು ಸಾರ್ವತ್ರಿಕಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ.

English summary

Cadre for Social Security Schemes in the pipeline

The government is planning to create a cadre of central services to manage social security schemes as it looks at overhauling the entire structure and function of retirement fund body EPFO.
Story first published: Wednesday, October 31, 2018, 14:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X