For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ 2019: ಸರ್ಕಾರ ಎಂಎಸ್ಎಂಇ ವಲಯಕ್ಕೆ ಹೆಚ್ಚು ಸೌಲಭ್ಯ ಒದಗಿಸಬೇಕು

ಅನಾಣ್ಯೀಕರಣ ಹಾಗು ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ.

|

ಅನಾಣ್ಯೀಕರಣ ಹಾಗು ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ.

ಮಧ್ಯಂತರ ಬಜೆಟ್ 2019: ಎಂಎಸ್ಎಂಇ ವಲಯಕ್ಕೆ ಹೆಚ್ಚು ಸೌಲಭ್ಯ ಒದಗಿಸಬೇಕು

ಕಳೆದ ವರ್ಷ ಸರ್ಕಾರ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಕಂಪೆನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 25 ರಷ್ಟು ಕಡಿತಗೊಳಿಸಿ, ವಾರ್ಷಿಕ ವಹಿವಾಟು ಸುಮಾರು ರೂ. 50 ಕೋಟಿಗಳಿಂದ ರೂ. 250 ಕೋಟಿಗೆ ಕಡಿತಗೊಳಿಸಿತು.

ಆದಾಯ ಮರುಹಂಚಿಕೆ ಮತ್ತು ವಿಸ್ತರಣೆಗೆ ಮಾತ್ರವಲ್ಲ, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಹೆಚ್ಚು ಖರ್ಚು ಮಾಡಲು ಸಹ ಸಹಾಯ ಮಾಡಬೇಕೆಂಬ ಕಲ್ಪನೆ ಒದಗಿಸಿತು.

ಮಧ್ಯಂತರ ಬಜೆಟ್ ಮೂಲಕ ಸರ್ಕಾರದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ಸಾದ್ಯವಿಲ್ಲವೆನ್ನುವುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ. ಇದು ಕೇವಲ ಮಧ್ಯಂತರ ಬಜೆಟ್ ಮಾತ್ರ. ಆದರೆ, ಸರ್ಕಾರವು ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಬಹುದು ಎಂದು ಪರಿಗಣಿಸಬಹುದಾಗಿದೆ.
ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯವು ಸುಲಭ ಹಣಕಾಸು ಕೊರತೆ ಮತ್ತು ಸರಿಯಾದ ಕ್ರಮಗಳಿಂದಾಗಿ ಬಳಲುತ್ತಿದೆ. ಮುಖ್ಯವಾಗಿ ಬ್ಯಾಂಕಿಂಗ್ ವಲಯದ ಸಮಸ್ಯೆಗಳು ಹೆಚ್ಚು ಕಾಡುತ್ತಿವೆ. ಬ್ಯಾಂಕುಗಳು ಹೆಚ್ಚಾಗಿ ಮೇಲಾಧಾರದ ಸಾಲ ನೀಡುತ್ತವೆ. ಆದರೆ MSME (ಸೂಕ್ಷ್ಮ ಮತ್ತು ಸಣ್ಣ ರಫ್ತುದಾರರು) ಹಾಗೆ ಮಾಡುವ ಸ್ಥಿತಿಯಲ್ಲಿಲ್ಲ. ಔಪಚಾರಿಕ ಕ್ರೆಡಿಟ್ ಮಾರುಕಟ್ಟೆಯ ಪ್ರವೇಶ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದಲ್ಲದೆ, MSME ವಲಯ ರಫ್ತು ಕ್ರೆಡಿಟ್ ಮತ್ತು ರಫ್ತು ವಿಮೆಗೆ ಸಂಬಂಧಿಸಿದಂತೆ ಸೀಮಿತ ಸೌಲಭ್ಯ ಎದುರಿಸುತ್ತದೆ. ಹೀಗಾಗಿ ಮಧ್ಯಂತರ ಬಜೆಟ್ MSME ವಲಯಕ್ಕೆ ಈ ಸೌಲಭ್ಯಗಳ ಅವಕಾಶ ಕಲ್ಪಿಸಬಹುದು. 2019ರಲ್ಲಿ ಸರ್ಕಾರ ಈ ವಲಯಕ್ಕೆ ಹೆಚ್ಚಿನ ಸಹಕಾರ ನೀಡಬಹುದು ಎಂಬ ಭರವಸೆ ಇದೆ.

English summary

Interim Budget 2019: Govt Should Deliver For The MSME Sector

There has been a strain on the micro, small and medium enterprises (MSME) sector following demonetization and the implementation of the Goods and Services Tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X