For Quick Alerts
ALLOW NOTIFICATIONS  
For Daily Alerts

2019ರ ಮಧ್ಯಂತರ ಬಜೆಟ್ ನಿಮ್ಮ ತೆರಿಗೆ ಹೊರೆ ಕಡಿಮೆ ಮಾಡಲಿದೆಯೆ?

|

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಲಾದ ಪ್ರಥಮ ಬಜೆಟ್ ಅಚ್ಛೆ ದಿನ್ ಆರಂಭದ ಬಜೆಟ್ ಎಂದು ಎಲ್ಲೆಡೆ ಪ್ರಶಂಸೆಗೆ ಒಳಗಾಗಿತ್ತು. ಈ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಹಾಗೂ ಸೆಕ್ಷನ್ 80ಸಿಸಿಯಡಿ ತೆರಿಗೆ ಕಡಿತ ಮಿತಿಯನ್ನು ಹೆಚ್ಚಿಸುವ ಮೂಲಕ ಜನತೆಗೆ ಒಂದೇ ಬಾರಿಗೆ ಎರಡು ರೀತಿಯ ತೆರಿಗೆ ಉಳಿತಾಯದ ಬಹುಮಾನ ನೀಡಲಾಗಿತ್ತು. ಆದರೆ ಇದರ ನಂತರದ ಬಜೆಟ್‌ಗಳಲ್ಲಿ ಮಾತ್ರ ಇಂತಹ ಯಾವುದೇ ನಿರಾಳತೆಯ ಕ್ರಮಗಳು ಕಂಡು ಬರಲಿಲ್ಲ. ಕೆಲವೊಮ್ಮೆ ಚಿಕ್ಕ ಪುಟ್ಟ ತೆರಿಗೆ ವಿನಾಯಿತಿಗಳನ್ನು ನೀಡಿದರೂ ಇನ್ನಾವುದೋ ವಸ್ತುವಿನ ಮೇಲಿನ ಹೆಚ್ಚುವರಿ ತೆರಿಗೆಯಿಂದಾಗಿ ತೆರಿಗೆ ವಿನಾಯಿತಿಯ ಲಾಭ ಸಿಗುವಂತಾಗಲಿಲ್ಲ.

2015ರ ಬಜೆಟ್ ಅನ್ನು ನೋಡುವುದಾದರೆ ಇದು ಅತಿ ಶ್ರೀಮಂತರ ಪಾಲಿಗೆ ಕಹಿಯಾದ ಬಜೆಟ್ ಆಗಿತ್ತು. 1 ಕೋಟಿ ರೂಪಾಯಿ ಮೀರಿದ ಆದಾಯದ ಮೇಲೆ ಈ ಮುಂಚೆ ಇದ್ದ ಶೇ.10 ರಷ್ಟು ಸರಚಾರ್ಜ್ ಅನ್ನು ಶೇ.12 ರಿಂದ ಶೇ.15 ರವರೆಗೆ ಹೆಚ್ಚಿಸಲಾಯಿತು. ಇದರ ಮರುವರ್ಷ 50 ಲಕ್ಷದಿಂದ 1 ಕೋಟಿ ರೂ.ವರೆಗಿನ ಆದಾಯಕ್ಕೆ ಶೇ.10 ರಷ್ಟು ಸರಚಾರ್ಜ್ ವಿಧಿಸಲಾಯಿತು. ಕಳೆದ ವರ್ಷ ಮತ್ತೊಂದು ಭಾರಿ ತೆರಿಗೆ ಹೊಡೆತ ನೀಡಿದ ಸರಕಾರ, ಇಕ್ವಿಟಿಗಳಲ್ಲಿನ ಹೂಡಿಕೆಯಿಂದ ಗಳಿಸಲಾಗುವ ವಾರ್ಷಿಕ 1 ಲಕ್ಷ ರೂ. ಮಿರಿದ ಎಲ್‌ಟಿಸಿಜಿ (Long-term capital gains -LTCG) ಆದಾಯಕ್ಕೆ ಶೇ.10 ರಷ್ಟು ತೆರಿಗೆಯನ್ನು ಘೋಷಿಸಿತು.

 

ಆದಾಗ್ಯೂ ಮೋದಿ ನೇತೃತ್ವದ ಕೇಂದ್ರ ಸರಕಾರ ಕೆಲ ಹಳೆಯ ಹಾಗೂ ಪ್ರಸ್ತುತವಲ್ಲದ ತೆರಿಗೆಗಳನ್ನು ತೆಗೆದುಹಾಕಿತು. ಸಂಪತ್ತಿನ ತೆರಿಗೆಯನ್ನು ತೊಡೆದು ಹಾಕಿ, ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಪಡೆಯದ ಉದ್ಯೋಗಿಗಳ ಎಚ್‌ಆರ್‌ಎ ತೆರಿಗೆ ಕಡಿತ ಮಿತಿಯನ್ನು ತಿಂಗಳಿಗೆ 2 ಸಾವಿರ ರೂ.ಗಳಿಂದ 5 ಸಾವಿರ ರೂ. ಗಳಿಗೆ ಹೆಚ್ಚಿಸಲಾಯಿತು.

ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಇನ್ನೇನು ಮೂರು ವಾರಗಳಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಕಡೆಗೆ ಎಲ್ಲರ ಚಿತ್ತ ಮನೆ ಮಾಡಿದೆ. ಈ ಮಧ್ಯಂತರ ಬಜೆಟ್ ತೆರಿಗೆದಾರ ಸ್ನೇಹಿ ಬಜೆಟ್ ಆಗಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಚುನಾವಣೆಯ ಹೊಸ್ತಿಲಲ್ಲಿರುವ ಸರಕಾರ ಭಾರಿ ತೆರಿಗೆ ಕಡಿತ ಘೋಷಣೆಗಳ ಮೂಲಕ ಮಧ್ಯಮ ವರ್ಗದ ಜನತೆಯ ಒಲವನ್ನು ತನ್ನತ್ತ ಗಳಿಸಿಕೊಳ್ಳಲು ಪ್ರಯತ್ನ ಮಾಡಲಿದೆ ಎಂದು ಹೇಳಲಾಗಿದೆ. ಸರಕಾರದ ಉನ್ನತ ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ ಉಳಿತಾಯದ ಮೇಲಿನ ತೆರಿಗೆ ವಿನಾಯಿತಿ ಮಟ್ಟ ಹೆಚ್ಚಳ, ಪಿಂಚಣಿದಾರರಿಗೆ ಹೆಚ್ಚುವರಿ ಸೌಲಭ್ಯ ಹಾಗೂ ಗೃಹಸಾಲದ ಬಡ್ಡಿದರಗಳಲ್ಲಿ ಕಡಿತ ಮುಂತಾದ ಪ್ರಮುಖ ಅಂಶಗಳ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಆದರೆ ಸರಕಾರದ ಘೋಷಣೆಗಳ ಬಗ್ಗೆ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿಯಾದೀತು ಎಂಬುದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಶೀಲಿಸುವುದು ಸೂಕ್ತ. ಉದಾಹರಣೆಗೆ ನೋಡುವುದಾದರೆ ಸೆಕ್ಷನ್ 80ಸಿ ಪ್ರಕಾರ 1.5 ಲಕ್ಷ ರೂ. ವರೆಗಿನ ತೆರಿಗೆ ಕಡಿತ ಮಿತಿಯನ್ನು ಹೆಚ್ಚಿಸಬೇಕೆಂಬುದು ಜನರ ಬೇಡಿಕೆಯಾಗಿದೆ. ಈ ಮಿತಿಯನ್ನು ಸುಮಾರು 10 ವರ್ಷಗಳ ನಂತರ 2014 ರಲ್ಲಿ ಬದಲಾಯಿಸಲಾಗಿತ್ತು. ಸೆಕ್ಷನ್ 80 ಸಿ ಅಡಿ ತರಲಾಗಿರುವ ಹಲವಾರು ಹೂಡಿಕೆಗಳಿಂದಾಗಿ ಈ 1.5 ಲಕ್ಷ ರೂ. ಮೊತ್ತ ಯಾತಕ್ಕೂ ಸಾಲುವುದಿಲ್ಲ. ಆದಾಗ್ಯೂ ಎನ್‌ಪಿಎಸ್‌ನ ಹೆಚ್ಚುವರಿ ಹೂಡಿಕೆಯನ್ನು ಈ ಹಂತದಲ್ಲಿ ಗಣನೆಗೆ ತೆಗೆದುಕೊಂಡರೂ 2 ಲಕ್ಷ ರೂ. ಮೊತ್ತದ ವಾಸ್ತವಿಕ ಕಡಿತ ಮಿತಿ ಇದಕ್ಕೂ ಹೆಚ್ಚಾಗಿದೆ. ಹೀಗಾಗಿ ಸರಕಾರ 80ಸಿ ಅಡಿಯಲ್ಲಿನ ತೆರಿಗೆ ಕಡಿತ ಮಿತಿಯನ್ನು ಈಗಿರುವ 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಹೆಚ್ಚುವರಿಯಾಗಿ 1 ಲಕ್ಷ ರೂ. ಎನ್‌ಪಿಎಸ್ ಹೂಡಿಕೆಗೆ ವಿನಾಯಿತಿ ನೀಡಬೇಕೆಂಬುದು ಮಾರುಕಟ್ಟೆಯ ನಿರೀಕ್ಷೆಯಾಗಿದೆ.

ಮೂಲ ಆದಾಯ ತೆರಿಗೆ ವಿನಾಯಿತಿ ಮಟ್ಟವನ್ನು ಹೆಚ್ಚಿಸುವುದು ಮಾತ್ರ ಸರಕಾರದ ಪಾಲಿಗೆ ಸವಾಲಿನ ವಿಷಯವೇ ಆಗಿದೆ. ಇಂಥ ಒಂದು ಕ್ರಮ ತೆರಿಗೆಪಾವತಿದಾರರಿಗೆ ಅನುಕೂಲವಾದರೆ ಇನ್ನೊಂದೆಡೆ ಸರಕಾರದ ಖಜಾನೆಗೆ ಭಾರಿ ನಷ್ಟವನ್ನು ಉಂಟು ಮಾಡುತ್ತದೆ. ಪ್ರತಿ 10 ಸಾವಿರ ರೂ. ಮೂಲ ತೆರಿಗೆ ವಿನಾಯಿತಿ ಮಟ್ಟದ ಹೆಚ್ಚಳದಿಂದ ಸರಕಾರದ ಬೊಕ್ಕಸಕ್ಕೆ 2 ಸಾವಿರ ಕೋಟಿ ರೂ. ಹಾನಿಯಾಗುತ್ತದೆ.

ಬಜೆಟ್ 2014

ಬಜೆಟ್ 2014

ಕಳೆದ 5 ಬಜೆಟ್‌ಗಳಲ್ಲಿನ ವೈಯಕ್ತಿಕ ಆದಾಯ ತೆರಿಗೆ ಬದಲಾವಣೆಗಳು ಹೀಗಿವೆ:

ಬಜೆಟ್ 2014

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂ. ಗಳಿಂದ 2.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು.

ಸೆಕ್ಷನ್ 80 ಸಿ ಪ್ರಕಾರ ತೆರಿಗೆ ಕಡಿತ ಮಿತಿಯನ್ನು 1 ಲಕ್ಷ ರೂ. ಗಳಿಂದ 1.5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಯಿತು.

ಗೃಹ ಸಾಲದ ಮೇಲಿನ ತೆರಿಗೆ ಕಡಿತದ ಮಿತಿಯನ್ನು ವಾರ್ಷಿಕ 1.5 ಲಕ್ಷ ರೂ. ಗಳಿಂದ 2 ಲಕ್ಷ ರೂ. ಗಳಿಗೆ ಹೆಚ್ಚಿಸಲಾಯಿತು.

ಬಜೆಟ್ 2015

ಬಜೆಟ್ 2015

ಎನ್‌ಪಿಎಸ್‌ನಲ್ಲಿನ 50 ಸಾವಿರ ರೂ. ಹೂಡಿಕೆಗೆ ಹೆಚ್ಚುವರಿ ವಿನಾಯಿತಿ ನೀಡಲಾಯಿತು.

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಸಂಪೂರ್ಣ ತೆರಿಗೆ ಮುಕ್ತಗೊಳಿಸಲಾಯಿತು.

ಆರೋಗ್ಯ ವಿಮೆಯ ಪ್ರೀಮಿಯಂ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 15 ಸಾವಿರ ರೂ. ಗಳಿಂದ 25 ಸಾವಿರ ರೂ. ಗಳಿಗೆ ಹೆಚ್ಚಿಸಲಾಯಿತು.

ತೆರಿಗೆ ರಹಿತ ಸಾರಿಗೆ ಭತ್ಯೆಯನ್ನು ತಿಂಗಳಿಗೆ 800 ರೂ.ಗಳಿಂದ 1600 ರೂ.ಗಳಿಗೆ ಹೆಚ್ಚಿಸಲಾಯಿತು.

ಸಂಪತ್ತಿನ ತೆರಿಗೆಯನ್ನು ತೆಗೆದು ಹಾಕಲಾಯಿತು.

1 ಕೋಟಿ ರೂ.ಗೂ ಹೆಚ್ಚಿನ ಆದಾಯದ ಮೇಲೆ ಶೇ.10 ರಷ್ಟಿದ್ದ ಸರಚಾರ್ಜ್ ಅನ್ನು ಶೇ.12 ಕ್ಕೆ ಏರಿಸಲಾಯಿತು.

ಬಜೆಟ್ 2016
 

ಬಜೆಟ್ 2016

ಬಾಡಿಗೆ ಪಾವತಿಸುವವರಿಗಾಗಿ ತೆರಿಗೆ ವಿನಾಯಿತಿ ಮೊತ್ತವನ್ನು 24 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು.

5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ 2 ಸಾವಿರ ರೂ. ಇದ್ದ ತೆರಿಗೆ ವಿನಾಯಿತಿ ಮೊತ್ತವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು.

35 ಲಕ್ಷ ರೂ. ವರೆಗಿನ ಹೊಸ ಮನೆ ಖರೀದಿಸುವವರಿಗೆ ಹೆಚ್ಚುವರಿಯಾಗಿ 50 ಸಾವಿರ ರೂ. ತೆರಿಗೆ ವಿನಾಯಿತಿಯನ್ನು ಘೋಷಿಸಲಾಯಿತು.

1 ಕೋಟಿ ರೂ.ಗೂ ಹೆಚ್ಚಿನ ಆದಾಯದ ಮೇಲೆ ಶೇ.12 ರಷ್ಟಿದ್ದ ಸರಚಾರ್ಜ್ ಅನ್ನು ಶೇ.15 ಕ್ಕೆ ಏರಿಸಲಾಯಿತು.

ಬಜೆಟ್ 2017

ಬಜೆಟ್ 2017

2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗಿನ ಆದಾಯದ ಮೇಲಿನ ತೆರಿಗೆ ಪ್ರಮಾಣವನ್ನು ಶೇ.10 ರಿಂದ ಶೇ.5 ಕ್ಕೆ ಇಳಿಸಲಾಯಿತು.

ಎಲ್ಲ ರೀತಿಯ ತೆರಿಗೆ ಪಾವತಿದಾರರಿಗೆ 12,500 ರೂ. ತೆರಿಗೆ ವಿನಾಯಿತಿ ನೀಡಲಾಯಿತು.

50 ಲಕ್ಷ ರೂ. ಗಳಿಂದ 1 ಕೋಟಿ ರೂ. ವರೆಗಿನ ಆದಾಯಕ್ಕೆ ಶೇ.10 ರಷ್ಟು ಸರಚಾರ್ಜ್ ವಿಧಿಸಲಾಯಿತು.

ಬಜೆಟ್ 2018

ಬಜೆಟ್ 2018

ಸಂಬಳ ಪಡೆಯುವ ಉದ್ಯೋಗಿಗಳಿಗೆ 40 ಸಾವಿರ ರೂಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಮತ್ತೆ ಜಾರಿಗೆ ತರಲಾಯಿತು.

ಆರೋಗ್ಯ ಹಾಗೂ ಸಾರಿಗೆ ಭತ್ಯೆಗಳಿಗೆ ತೆರಿಗೆ ವಿಧಿಸಲಾಯಿತು.

ತೆರಿಗೆ ಪಾವತಿಸುವವರ ಮೇಲಿನ ಸೆಸ್ ಅನ್ನು ಶೇ.3 ರಿಂದ ಶೇ.4 ಕ್ಕೆ ಹೆಚ್ಚಿಸಲಾಯಿತು.

ಇಕ್ವಿಟಿಗಳ 1 ಲಕ್ಷ ರೂ. ಮೀರಿದ ಎಲ್‌ಟಿಸಿಜಿ ಆದಾಯಕ್ಕೆ ಶೇ.10 ರಷ್ಟು ತೆರಿಗೆ ವಿಧಿಸಲಾಯಿತು.

English summary

Will interim Budget 2019 reduce your tax?

It gave a bonanza to taxpayers by simultaneously increasing the basic exemption limit and the tax deduction under Sec 80C.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more