For Quick Alerts
ALLOW NOTIFICATIONS  
For Daily Alerts

ಜಾಗತಿಕ ಆವಿಷ್ಕಾರ ಸೂಚ್ಯಂಕ: ಭಾರತಕ್ಕೆ 54ನೇ ಸ್ಥಾನ

|

ನವದೆಹಲಿ, ಜನವರಿ 23: ಜಗತ್ತಿನ ಅತ್ಯಂತ ಆವಿಷ್ಕಾರಿ ದೇಶಗಳ ಪಟ್ಟಿಯಲ್ಲಿ ಭಾರತ 54ನೇ ಸ್ಥಾನ ಪಡೆದುಕೊಂಡಿದೆ.

ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ 2019ರ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ.

ಈ ಸೂಚ್ಯಂಕ ಶ್ರೇಣಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಹೆಸರು ಮಾಡಿದೆ. ಬ್ಲೂಮ್‌ಬರ್ಗ್ ವಾರ್ಷಿಕ ಆವಿಷ್ಕಾರ ಸೂಚ್ಯಂಕ ವಿಶ್ಲೇಷಣೆಯನ್ನು ಸುಮಾರು 12 ಮಾನದಂಡಗಳನ್ನು ಅನುಸರಿಸಿ ಮಾಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ವಿನಿಯೋಗ, ಉತ್ಪಾದನಾ ಸಾಮರ್ಥ್ಯ ಮತ್ತು ಅತ್ಯುನ್ನತ ತಂತ್ರಜ್ಞಾನದ ಸಾರ್ವಜನಿಕ ಕಂಪೆನಿಗಳು ಸೇರಿದಂತೆ ಏಳು ವಲಯಗಳನ್ನು ಈ ಸೂಚ್ಯಂಕ ಒಳಗೊಂಡಿದೆ.

  ಜಾಗತಿಕ ಆವಿಷ್ಕಾರ ಸೂಚ್ಯಂಕ: ಭಾರತಕ್ಕೆ 54ನೇ ಸ್ಥಾನ

87.38 ಅಂಕಗಳನ್ನು ಪಡೆದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸುಧಾರಣೆ ಕಂಡಿರುವ ಜರ್ಮನಿ 87.30 ಅಂಕ ಗಳಿಸಿದೆ.

85.70 ಅಂಕಗಳೊಂದಿಗೆ ಫಿನ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಸ್ವಿಟ್ಜರ್ಲೆಂಡ್ 85.49, ಇಸ್ರೇಲ್ 84.78 ಅಂಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಭಾರತ, ಮೆಕ್ಸಿಕೋ, ವಿಯೆಟ್ನಾಂ ಮತ್ತು ಸೌದಿ ಅರೇಬಿಯಾ ದೇಶಗಳು ಈ ಬಾರಿ ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಹೊಸ ಸೇರ್ಪಡೆಗಳಾಗಿವೆ.

English summary

bloomberg 2019 innovative countries index india 54th place

India for the first time has registered its name in the Bloomberg 2019 world's most innovative countries with 54th position.
Story first published: Wednesday, January 23, 2019, 17:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X