ಕೇಂದ್ರ ಬಜೆಟ್ : ಉಜ್ವಲ ಯೋಜನೆಯಡಿ 8 ಕೋಟಿ ಎಲ್‌ಪಿಜಿ ವಿತರಣೆ

ನವದೆಹಲಿ, ಫೆಬ್ರವರಿ 01 : 'ಉಜ್ವಲ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 8 ಕೋಟಿ ಎಲ್‌ಪಿಜಿ ಸಂಪರ್ಕವನ್ನು ನೀಡುವ ಗುರಿಯನ್ನು ಹೊಂದಲಾಗಿದೆ' ಎಂದು ಹಣಕಾಸು ಸಚಿವ ಪಿಯೂಷ್ ಘೋಯೆಲ್ ಘೋಷಣೆ ಮಾಡಿದರು.

ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಪಿಯೂಷ್ ಘೋಯೆಲ್ ಅವರು, 'ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಕ್ರಮವನ್ನು ಸುಧಾರಣೆ ಮಾಡಲು ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.

'ಮುಂದಿನ ಐದು ವರ್ಷ ವರ್ಷಗಳಲ್ಲಿ 8 ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸೌಲಭ್ಯ ನೀಡಲಾಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರ ಜೀವನ ಕ್ರಮ ಸುಧಾರಿಸಲು ಅಗತ್ಯ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ' ಎಂದರು.

ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

ಕೇಂದ್ರ ಬಜೆಟ್ : ಉಜ್ವಲ ಯೋಜನೆಯಡಿ 8 ಕೋಟಿ ಎಲ್‌ಪಿಜಿ ವಿತರಣೆ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ಯೋಜನಾ ವೆಚ್ಚ ಕಡಿಮೆ ಮಾಡುವುದು, ಮಹಿಳೆಯರ ಆರೋಗ್ಯ ಸುಧಾರಣೆಗೆ ಒತ್ತು ನೀಡುವುದು ಯೋಜನೆ ಉದ್ದೇಶ.

ಈ ಯೋಜನೆಯಡಿ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತದೆ. 2016ರಲ್ಲಿ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದರು. ಈ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಸಿಗದ ಕುಟುಂಬವನ್ನು ಗುರುತಿಸಿ ಸಂಪರ್ಕ ನೀಡಲು ಪಿಎಂಯುವೈ-2 ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+