For Quick Alerts
ALLOW NOTIFICATIONS  
For Daily Alerts

ಕುಮಾರಣ್ಣನ ಬಜೆಟ್ ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು

|

ಬೆಂಗಳೂರು, ಫೆಬ್ರವರಿ 08: ಪ್ರವಾಸೋದ್ಯಮ ಎಂದರೆ ಉತ್ತಮವಾಗಿ ತರಬೇತಿ ಹೊಂದಿದ, ವಿವಿಧ ಭಾಷೆಯಲ್ಲಿ ಪ್ರವಾಸಿ ಸ್ಥಳದ ಬಗ್ಗೆ ವಿವರವಾದ ಮಾಹಿತಿ ನೀಡುವ ಉತ್ತಮ ಮಾರ್ಗದರ್ಶಿಗಳು ಇರಬೇಕು. ಪ್ರವಾಸಿ ವಾಹನಗಳನ್ನು ನಿರ್ವಹಿಸುವ ವ್ಯವಸ್ಥೆ ಇರಬೇಕು.

2018 ರಲ್ಲಿ ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?

ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲವನ್ನು ನಿರಂತರವಾಗಿ ತರಬೇತಿಯ ಮುಖಾಂತರ ಉತ್ತೇಜಿಸಲು ಮುಂದಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಒಂದು ಪ್ರವಾಸೋದ್ಯಮ ವಿಶ್ವವಿದ್ಯಾನಿಲಯವನ್ನು ಐತಿಹಾಸಿಕ ಸ್ಥಳವಾದ ಹಂಪಿಯಲ್ಲಿ ಕಳೆದ ಬಜೆಟ್ ನಲ್ಲಿ ಘೋಷಿಸಿದ 3 ಕೋಟಿ ರು ಅನುದಾನ ಮುಂದುವರಿಕೆ.

ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು

ಪ್ರವಾಸಿಗರನ್ನು ಆಕರ್ಷಿಸಲು 'ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ' ಆಯೋಜನೆಗೆ 2 ಕೋಟಿ ರು ಅನುದಾನ ನೀಡಲಾಗಿದೆ. ರಾಮನಗರದ ಬಳಿ ಆರ್ಟ್ಸ್ ಅಂಡ್ ಕ್ರಾಫ್ಟ್ ವಿಲೇಜ್ ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡಲು ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ. ಅನುದಾನ.

ಬಾದಾಮಿ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಬಾದಾಮಿ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು 25 ಕೋಟಿ ರು ಅನುದಾನ. ಹಂಪಿಯಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜಯಪುರದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಗಳನ್ನು ಸ್ಥಾಪಿಸಲು ತಲಾ 1 ಕೋಟಿ ರು ಅನುದಾನ

ಮೈಸೂರಿನಲ್ಲಿ ಲಂಡನ್ನಿನ ಬಿಗ್ ಬಸ್ ಮಾದರಿ ಬಸ್

ಮೈಸೂರಿನಲ್ಲಿ ಲಂಡನ್ನಿನ ಬಿಗ್ ಬಸ್ ಮಾದರಿ ಬಸ್

ವಿಶ್ವವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್ ಟಿಡಿಸಿ ವತಿಯಿಂದ ಲಂಡನ್ನಿನ ಬಿಗ್ ಬಸ್ ಮಾದರಿಯಲ್ಲಿ 6 ಡಬ್ಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭ, ಇದನ್ನು ಅನುಷ್ಠಾನಗೊಳಿಸಲು 5 ಕೋಟಿ ರು ಅನುದಾನ.

ಕಡಲ ತೀರದ ಪ್ರವಾಸೋದ್ಯಮ
 

ಕಡಲ ತೀರದ ಪ್ರವಾಸೋದ್ಯಮ

ಪಣಂಬೂರು ಹಾಗೂ ಸಸಿಹಿತ್ಲುವಿನಲ್ಲಿ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರು ಅನುದಾನ. ಇಲಾಖೆಯ ಒಟ್ಟು 834 ಸಂರಕ್ಷಿತ ಸ್ಮಾರಕಗಳಲ್ಲಿ, 600 ಸ್ಮಾರಕಗಳ ಸಮೀಕ್ಷೆ ಹಾಗೂ ಸಂರಕ್ಷಣೆಗೆ ಕ್ರಮ.

ಪ್ರವಾಸೋದ್ಯಮಕ್ಕಾಗಿ 3 ಸ್ಟಾರ್ ಹೋಟೆಲ್

ಪ್ರವಾಸೋದ್ಯಮಕ್ಕಾಗಿ 3 ಸ್ಟಾರ್ ಹೋಟೆಲ್

500 ಕೊಠಡಿಗಳ ಸೌಲಭ್ಯವಿರುವ 3 ಸ್ಟಾರ್ ಹೋಟೆಲ್‌ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂ.ಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅರ್ಪಾಟ್‌ಮೆಂಟ್‌ಗಳನ್ನು ಕಟ್ಟಲು ಮುಂದೆ ಬಂದಲ್ಲಿ, ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು Term Sheet ಆಧಾರದ ಮೇಲೆ ನೀಡಲಾಗುವುದು. ಇದಲ್ಲದೆ, ಅಮ್ಯೂಸ್‌ಮೆಂಟ್ ಪಾರ್ಕ್, ಜಲಕ್ರೀಡೆ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಗಳಲ್ಲಿ ಶೇ.30ರಷ್ಟು ಷೇರು ಬಂಡವಾಳ ಹೂಡಲಾಗುವುದು.

English summary

Karnataka Budget 2019-20 :What is the share of Tourism Department

Karnataka Budget 2019-20 : Finance minister, Chief Minister HD Kumaraswamy in his second Budget today(Feb 08) has announced many reforms and development in Tourism Department.
Story first published: Friday, February 8, 2019, 15:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X