For Quick Alerts
ALLOW NOTIFICATIONS  
For Daily Alerts

ಮನೆ ಖರೀದಿಸುವವರಿಗೆ ಗುಡ್ ನ್ಯೂಸ್! ಕಾರ್ ಪಾರ್ಕಿಂಗ್, ಈಜುಕೋಳ, ಜಿಮ್, ಕ್ಲಬ್ ಸೇವೆಗಳ ಮೇಲಿನ ಜಿಎಸ್ಟಿ ದರ ಕಡಿತ

ನಿವೇಶನ ಖರೀದಿದಾರರಿಗೆ ಇದು ಸಿಹಿಸುದ್ದಿ. ವಸತಿ ಅಪಾರ್ಟಮೆಂಟ್ ಗಳೊಂದಿಗಿನ ಕಾರು ಪಾರ್ಕಿಂಗ್, ಈಜುಕೋಳ, ಜಿಮ್ ಮತ್ತು ಕ್ಲಬ್ ಗಳಂತಹ ಸೌಕರ್ಯಗಳನ್ನು ಸಂಯೋಜಿತ ಸೇವೆಯಾಗಿ ಪರಿಗಣಿಸಲಾಗುವುದು.

|

ನಿವೇಶನ ಖರೀದಿದಾರರಿಗೆ ಇದು ಸಿಹಿಸುದ್ದಿ. ವಸತಿ ಅಪಾರ್ಟಮೆಂಟ್ ಗಳೊಂದಿಗಿನ ಕಾರು ಪಾರ್ಕಿಂಗ್, ಈಜುಕೋಳ, ಜಿಮ್ ಮತ್ತು ಕ್ಲಬ್ ಗಳಂತಹ ಸೌಕರ್ಯಗಳನ್ನು ಸಂಯೋಜಿತ ಸೇವೆಯಾಗಿ ಪರಿಗಣಿಸಲಾಗುವುದು. ಇವುಗಳನ್ನು ಪ್ರತ್ಯೇಕ ಸೇವೆಗಳೆಂದು ಪರಿಗಣಿಸುವಂತಿಲ್ಲ. ಇದಕ್ಕೆ ಕಡಿಮೆ ಜಿಎಸ್ಟಿ ದರ ವಿಧಿಸಬೇಕೆಂದು ಜಿಎಸ್ಟಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್)ನ ಪಶ್ಚಿಮ ಬಂಗಾಳ ಪೀಠವೊಂದು ಹೇಳಿದೆ.

ಕಾರ್ ಪಾರ್ಕಿಂಗ್, ಈಜುಕೋಳ, ಜಿಮ್ ಸೇವೆಗಳ ಮೇಲಿನ ಜಿಎಸ್ಟಿ ದರ ಕಡಿತ

ಈ ಸೇವೆಗಳಿಗೆ ಶೇ. 18 ರಷ್ಟು ಜಿಎಸ್ಟಿ ಬದಲಾಗಿ ಶೇ. 12 ಅಥವಾ 5 ರಷ್ಟು ಜಿಎಸ್ಟಿ ವಿಧಿಸಬೇಕೆಂದು ಎಎಆರ್ ಹೇಳಿದೆ. ಸಂಯೋಜಿತ ನಿರ್ಮಾಣ ಸೇವೆಗಳೆಂದು ಇವುಗಳನ್ನು ಪರಿಗಣಿಸಬೇಕೆಂದು ಪೀಠ ಹೇಳಿದೆ.

ಬೆಂಗಾಳ್ ಪಿಯರ್ಲೆಸ್ ಹೌಸಿಂಗ್ ಡೆವೆಲಪ್ಮೆಂಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠ ಈ ಹೇಳಿಕೆ ನೀಡಿದೆ. ಫ್ಲಾಟ್ ಮಾರಾಟದ ವೇಳೆ ಇತರ ಸೇವೆಗಳನ್ನು ಸಂಯೋಜಿತ ನಿರ್ಮಾಣ ಸೇವೆಗಳೆಂದು ಪರಿಗಣಿಸಬೇಕೆ ಅಥವಾ ಬೇಡವೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ರೂ. 50 ಲಕ್ಷ ಮೌಲ್ಯದ ಫ್ಲಾಟ್ ಗೆ ಪಾರ್ಕಿಂಗ್, ಈಜುಕೊಳ, ಜಿಮ್ ಸೇವೆಗಳಿಗಾಗಿ 6 - 7 ಲಕ್ಷ ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಅಲ್ಲದೇ ಜಿಎಸ್ಟಿ ಶೇ.18 ರಷ್ಟು ಅಂದರೆ ಸುಮಾರು ರೂ. 1,08,000-1,26,000 ಪಾವತಿಸಬೇಕಾಗಿತ್ತು. ಜಿಎಸ್ಟಿ ದರ ಶೇ. 12ಕ್ಕೆ ಇಳಿದರೆ ರೂ. 72000- 84000 ಜಿಎಸ್ಟಿ ಪಾವತಿಸಬೇಕಾಗುತ್ತದೆ.

Read more about: gst real estate money rera act
English summary

Bundling of car parking, pool, gym facilities while selling flats to attract lower GST

Bundling of facilities such as car parking, swimming pool, club and gym with residential apartments will be treated as composite construction service and attract a lower gst rate.
Story first published: Saturday, May 4, 2019, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X