For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 372 ಅಂಕ ಕುಸಿತ

ಅಮೆರಿಕ – ಚೀನಾ ಟ್ರೇಡ್ ವಾರ್ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ಷೇರುಪೇಟೆ ಕುಸಿತಕ್ಕೆ ಒಳಗಾಗಿದೆ. ಇದರ ಪ್ರಭಾವ ಮುಂಬೈ ಷೇರು ಪೇಟೆ ಮೇಲೆ ಕೂಡ ಬೀರಿದೆ.

|

ಅಮೆರಿಕ - ಚೀನಾ ಟ್ರೇಡ್ ವಾರ್ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ಷೇರುಪೇಟೆ ಕುಸಿತಕ್ಕೆ ಒಳಗಾಗಿದೆ. ಇದರ ಪ್ರಭಾವಕ್ಕೆ ಒಳಗಾಗಿರುವ ಮುಂಬೈ ಷೇರು ಪೇಟೆ ನಷ್ಟ ಅನುಭವಿಸಿದೆ.

ಸೆನ್ಸೆಕ್ಸ್ ಸೂಚ್ಯಂಕ 372 ಅಂಕ ಕುಸಿತ

ಸೋಮವಾರದ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 372 ಅಂಕಗಳ ಕುಸಿತ ಕಂಡು 37,090.82 ಅಂಶಗಳೊಂದಿಗೆ ಹಾಗು ನಿಪ್ಟಿ ಸೂಚ್ಯಂಕ 130.10 ಪಾಯಿಂಟ್ ಇಳಿಕೆಯೊಂದಿಗೆ 11,148 ಅಂಕಗಳಲ್ಲಿ ವ್ಯವಹಾರ ನಡೆಸಿತ್ತು.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ 70 ಅಂಕಗಳ ಕುಸಿತಕ್ಕೆ ಗುರಿಯಾದರೆ, ನಿಫ್ಟಿ ಸೂಚ್ಯಂಕ 27 ಪಾಯಿಂಟ್ ಕುಸಿತ ಕಂಡಿತ್ತು. ಆದರೆ ಬೆಳಿಗ್ಗೆ 10.45ರ ಆಸುಪಾಸು ಮುಂಬೈ ಷೇರು ಪೇಟೆಯ ಸೂಚ್ಯಂಕ 68.71 ಅಂಕಗಳ ಕೊಂಚ ಚೇತರಿಕೆ ಕಂಡಿತು. ರಾಷ್ಟ್ರೀಯ ಷೇರು ಪೇಟೆಯ ನಿಫ್ಟಿ ಸೂಚ್ಯಂಕ 5.50 ಪಾಯಿಂಟ್ ಏರಿಕೆಯೊಂದಿಗೆ 11,284.40 ಅಂಕಗಳಲ್ಲಿ ವಹಿವಾಟು ನಡೆಸಿತ್ತು.
ಐಶರ್ ಮೋಟಾರ್ಸ್, ಝೀ ಎಂಟರ್ಟೇನ್ಮೆಂಟ್, ಸನ್ ಫಾರ್ಮಾ, ಇಂಡಿಯಾಬುಲ್ಸ್ ಹೌಸಿಂಗ್ ಮತ್ತು ಯೆಸ್ ಬ್ಯಾಂಕ್ ನಷ್ಟ ಅನುಭವಿಸಿದವು. ಟೈಟಾನ್ ಕಂಪನಿ, ಭಾರ್ತಿ ಇನ್ಫ್ರಾಟೆಲ್, ಟೆಕ್ ಮಹೀಂದ್ರಾ, ಎಚ್ಡಿಎಫ್ಸಿ ಮತ್ತು ಎಚ್.ಎಲ್.ಎಲ್ ಲಾಭಾಂಶ ಕಂಡವು.
ಸೋಮವಾರದ ಆರಂಭಿಕ ವಹಿವಟಿನಲ್ಲಿ ಬಿಎಸ್ಇಯಲ್ಲಿ ವ್ಯವಹಾರಕ್ಕೆ ಒಳಪಟ್ಟ ಷೇರುಗಳ ಪೈಕಿ 295 ಷೇರುಗಳು ಮುನ್ನಡೆ ಸಾಧಿಸಿದ್ದರೆ, 398 ಷೇರುಗಳು ಹಿನ್ನಡೆ ಕಂಡವು.

Read more about: sensex money stock bse
English summary

Closing Bell: Sharp fall drags Nifty below 11,150, Sensex falls 372 pts

Late selling in the market drags Nifty below 11,150 level and Sensex by 372 points in today's trading session.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X