For Quick Alerts
ALLOW NOTIFICATIONS  
For Daily Alerts

ಮೇ 31 ರೊಳಗೆ ಬ್ಯಾಂಕ್ ಖಾತೆಯಲ್ಲಿ ರೂ. 342 ಬ್ಯಾಲೆನ್ಸ್ ಇರದಿದ್ದರೆ 4 ಲಕ್ಷ ನಷ್ಟ ಆಗಲಿದೆ!

ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೆ ನಿಮ್ಮ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ರದ್ದಾಗುವ ಸಾಧ್ಯತೆ ಇರುತ್ತದೆ.

|

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಸ್ಕೀಮ್ ಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಲ್ಲಿ ಖಾತೆ ಹೊಂದಿದ್ದಿರಾ?

ನೀವು ಈ ಯೋಜನೆಗಳಲ್ಲಿ ಖಾತೆ ಹೊಂದಿದ್ದರೆ ಮೇ 31 ರೊಳಗೆ ನಿಮ್ಮ ಖಾತೆಯಲ್ಲಿ ರೂ. 342 ಕಡಿತವಾಗುತ್ತದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ರೂ. 342 ಇರುವಂತೆ ನೋಡಿಕೊಳ್ಳಿ.
ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೆ ನಿಮ್ಮ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ರದ್ದಾಗುವ ಸಾಧ್ಯತೆ ಇರುತ್ತದೆ.

ರೂ. 4 ಲಕ್ಷ ವಿಮೆ

ರೂ. 4 ಲಕ್ಷ ವಿಮೆ

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವಿಮಾದಾರರಿಗೆ ರೂ. 4 ಲಕ್ಷ ವಿಮೆ ಸಿಗುತ್ತದೆ. ಜೀವನ ಜ್ಯೋತಿ ಬಿಮಾ ಯೋಜನೆಯಲ್ಲಿ 55ನೇ ವರ್ಷದವರೆಗೆ ಲೈಫ್ ಕವರ್ ಸಿಗುತ್ತದೆ. ವಿಮೆದಾರ ತೀರಿಕೊಂಡರೆ ನಾಮಿನಿಗೆ ರೂ. 2 ಲಕ್ಷ ಸಿಗುತ್ತದೆ.
ಯೋಜನೆಯ ವಿಶೇಷತೆ
ಪ್ರತಿ ವರ್ಷವು ಈ ಯೋಜನೆಗಳು ನವೀಕರಣಗೊಳ್ಳುತ್ತವೆ. ಇದರ ವಾರ್ಷಿಕ ಪ್ರೀಮಿಯಂ ರೂ. 330. 18 ರಿಂದ 55 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಇದರ ಪ್ರಯೋಜನ ಪಡೆಯಬಹುದು. ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯ ವಿಶೇಷತೆ ಹಾಗು ಪ್ರಯೋಜನಗಳೇನು?

ಮೇ 31 ಕೊನೆದಿನ, ಒಟ್ಟು 342 ಪ್ರೀಮಿಯಂ ಮೊತ್ತ

ಮೇ 31 ಕೊನೆದಿನ, ಒಟ್ಟು 342 ಪ್ರೀಮಿಯಂ ಮೊತ್ತ

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ಸಂಪೂರ್ಣ ವಿಕಲಾಂಗನಾದರೆ ರೂ. 2 ಲಕ್ಷದವರೆಗೆ ವಿಮೆ ಸಿಗುತ್ತದೆ.
18-70 ವರ್ಷದೊಳಗಿನವರಿಗೆ ಈ ವಿಮೆ ಸೌಲಭ್ಯ ಸಿಗಲಿದೆ. ಇದರ ವಾರ್ಷಿಕ ಪ್ರೀಮಿಯಂ ಮೊತ್ತ ರೂ. 12.
ಈ ಎರಡೂ ಯೋಜನೆಗಳಿಗೆ ವಾರ್ಷಿಕ ಪ್ರಿಮಿಯಂ ತುಂಬಲು ಮೇ 31 ಕೊನೆ ದಿನವಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ರೂ. 12 ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಗೆ ರೂ. 330 ಪ್ರೀಮಿಯಂ ತುಂಬಬೇಕು. ಎರಡೂ ಸೇರಿ ಒಟ್ಟು ರೂ. 342 ಮೊತ್ತ ಕಟ್ಟಬೇಕು.  ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: 12 ರೂ.ಗೆ 2 ಲಕ್ಷ ವಿಮೆ ಪಡೆಯುವುದು ಹೇಗೆ?

ಷರತ್ತುಗಳು

ಷರತ್ತುಗಳು

- ಮೇ 31 ರೊಳಗೆ ನಿಮ್ಮ ಖಾತೆಯ ಬ್ಯಾಲೆನ್ಸ್ ಮೊತ್ತ ಇಲ್ಲದೆ ಹೋದರೆ ವಿಮೆ ರದ್ದಾಗಲಿದೆ.
- ಬ್ಯಾಂಕ್ ಖಾತೆ ಸ್ಥಗಿತಗೊಳ್ಳುವ ಸ್ಥಿತಿಯಲ್ಲಿದ್ದರೆ ವಿಮೆ ರದ್ದಾಗಲಿದೆ.
- ಒಂದು ಬ್ಯಾಂಕ್ ಖಾತೆಯನ್ನು ಈ ಯೋಜನೆಗಳೊಂದಿಗೆ ಜೋಡಿಸಬಹುದು.
- ಪ್ರೀಮಿಯಂ ಮೊತ್ತ ಪಾವತಿಸದಿದ್ದರೆ ನಂತರ ಯೋಜನೆಗಳು ನವೀಕರಣಗೊಳ್ಳುವುದಿಲ್ಲ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳಡಿ ವಿಮಾ ಪ್ರಯೋಜನ ಪಡೆಯೋದು ಹೇಗೆ?

English summary

pmjjby pmsby keep rs 342 in bank account till 31 may

If your account does not have money, your PPradhan Mantri Jeevan Jyoti Bima Yojana(PMJJBY) and Pradhan Mantri Suraksha Bima Yojana(PMSBY) will be canceled.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X