For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಹಣಕಾಸು ಕೊರತೆ ಹೆಚ್ಚಳವಾಗುವ ಅಪಾಯ

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜುಲೈ 5ರಂದು ಮಂಡಿಸಲಿರುವ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ (ಜಿಡಿಪಿ) ಪ್ರಾಮುಖ್ಯತೆ ಕೊಡುವ ಭರದಲ್ಲಿ ಹಣಕಾಸು ಕೊರತೆ ಹೆಚ್ಚಳವಾಗುವ ಅಪಾಯ ಇದೆ ಎಂದು ಮೂಲಗಳು ತಿಳಿಸಿವೆ.

|

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜುಲೈ 5ರಂದು ಮಂಡಿಸಲಿರುವ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ (ಜಿಡಿಪಿ) ಪ್ರಾಮುಖ್ಯತೆ ಕೊಡುವ ಭರದಲ್ಲಿ ಹಣಕಾಸು ಕೊರತೆ ಹೆಚ್ಚಳವಾಗುವ ಅಪಾಯ ಇದೆ ಎಂದು ಮೂಲಗಳು ತಿಳಿಸಿವೆ.

 

ಬಜೆಟ್ 2019: ಹಣಕಾಸು ಕೊರತೆ ಹೆಚ್ಚಳವಾಗುವ ಅಪಾಯ

ಹಣಕಾಸು ಸಚಿವೆ ಜನಸಾಮಾನ್ಯರಿಗೆ ಅನೇಕ ಕೊಡುಗೆಗಳನ್ನು ಘೋಷಿಸಲು ಮುಂದಾದರೆ ವಿತ್ತಿಯ ಕೊರತೆಗೆ ಕಡಿವಾಣ ಹಾಕುವ ಬದಲು ಹೆಚ್ಚಾಗಬಹುದು. ಹಣಕಾಸು ಕೊರತೆಯ ಪರಿಣಾಮ ದೇಶಿ ಒಟ್ಟು ಉತ್ಪನ್ನ (ಜಿಡಿಪಿ) ಶೇ. 3.4 ಕ್ಕೆ ನಿಯಂತ್ರಿಸುವ ಬದಲು ಹಣಕಾಸು ಕೊರತೆ ಪ್ರಮಾಣ ಶೇ. 3.6 ಕ್ಕೆ ಹೆಚ್ಚಬಹುದು ಎನ್ನಲಾಗಿದೆ.
ಹಣಕಾಸು ಕೊರತೆ ಎನ್ನುವುದು ಒಟ್ಟು ಆದಾಯ ಹಾಗು ಒಟ್ಟು ವೆಚ್ಚಗಳ ನಡುವಿನ ಅಂತರವಾಗಿದೆ. ಬಜೆಟ್ ಮಂಡನೆಯ ಸಂದರ್ಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಹಣಕಾಸು ಕೊರತೆ ಎದುರಾದರೆ ಖಾಸಗಿ ಬಂಡವಾಳ ಹೂಡಿಕೆ ಮತ್ತು ಉಳಿತಾಯದ ಮೇಲೆ ಭಾರೀ ಪ್ರಭಾವ ಬೀರಲಿದೆ. ಇದು ಹಣದುಬ್ಬರಕ್ಕೆ ಕಾರಣವಾಗಿ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳಲಿದೆ.
ಹಣಕಾಸು ಕೊರತೆಯನ್ನು ಸ್ಥಳೀಯ ಹಾಗು ಬಾಹ್ಯ ಸಾಲ ಪಡೆಯುವ ಮೂಲಕ ಅಥವಾ ಕರೆನ್ಸಿ ಮುದ್ರಣದ ಮೂಲಕ ಸರಿದೂಗಿಸಬಹುದು. ಸ್ಥಳೀಯವಾಗಿ ಹಾಗು ಬಾಹ್ಯ ಸಾಲ ಪಡೆಯುವುದರಿಂದ ಬಡ್ಡಿದರ ಹೆಚ್ಚಳಗೊಳ್ಳುವುದಲ್ಲದೇ, ಆರ್ಥಿಕ ಸಮತೋಲನ ಬಿಗಡಾಯಿಸುತ್ತದೆ. ಇದು ಹಣದುಬ್ಬರಕ್ಕೂ ಕಾರಣವಾಗಬಹುದು.

English summary

Budget 2019: Challenge for the government to meet fiscal deficit target of 3.4%

we expect budget 2019 would contain further stimulus measures to boost the economy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X