For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 600 ಪಾಯಿಂಟ್ ಕುಸಿತ, ಜಮ್ಮು-ಕಾಶ್ಮೀರ ಉದ್ವಿಗ್ನತೆ ಎಫೆಕ್ಟ್!

ದೇಶೀಯ ಷೇರುಪೇಟೆ ಬಿಎಸ್ಇ ಸೆನ್ಸೆಕ್ಸ್ಸೂಚ್ಯಂಕವು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 600 ಪಾಯಿಂಟ್‌ಗಳಷ್ಟು ಕುಸಿದು 37,000 ಕ್ಕಿಂತಲೂ ಕಡಿಮೆ ಅಂಕಗಳಲ್ಲಿ ವಹಿವಾಟು ನಡೆಸಿತು.

|

ದೇಶೀಯ ಷೇರುಪೇಟೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 600 ಪಾಯಿಂಟ್‌ ವರೆಗೆ ಕುಸಿದು 37,000 ಕ್ಕಿಂತಲೂ ಕಡಿಮೆ ಅಂಕಗಳಲ್ಲಿ ವಹಿವಾಟು ನಡೆಸಿತು. ಜಾಗತಿಕ ಸೂಚ್ಯಂಕಗಳ ಮಧ್ಯೆ ನಿರಂತರ ವಿದೇಶಿ ಫಂಡ್ ಹೊರಹರಿವು ಕಂಡುಬಂದಿದೆ.

 

 ಸೆನ್ಸೆಕ್ಸ್ ಸೂಚ್ಯಂಕ 600  ಪಾಯಿಂಟ್ ಕುಸಿತ

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ೧೦.೩೦ರ ಸುಮಾರಿಗೆ 583 ಪಾಯಿಂಟ್‌ಗಳು ಕುಸಿತದೊಂದಿಗೆ 36,535 ಮಟ್ಟದಲ್ಲೂ ಹಾಗು ನಿಫ್ಟಿ ಸೂಚ್ಯಂಕವು 180 ಪಾಯಿಂಟ್ ಅಥವಾ 1.56 ರಷ್ಟು ಕುಸಿದ ಕಂಡು 10,816 ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು.
ಯೆಸ್ ಬ್ಯಾಂಕ್, ಟಾಟಾ ಮೋಟಾರ್ಸ್, ವೇದಾಂತ, ಎಸ್‌ಬಿಐ, ಟಾಟಾ ಸ್ಟೀಲ್, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಒಎನ್‌ಜಿಸಿ, ರಿಲಯನ್ಸ್ ಮತ್ತು ಮಾರುತಿ ಪ್ರಮುಖವಾಗಿ ಶೇ. 8.49 ರಷ್ಟು ಕಂಡಿವೆ. ಮತ್ತೊಂದೆಡೆ, ಟಿಸಿಎಸ್, ಇನ್ಫೋಸಿಸ್, ಭಾರ್ತಿ ಏರ್ಟೆಲ್ ಮತ್ತು ಎಚ್ಡಿಎಫ್ಸಿ ಧನಾತ್ಮಕವಾಗಿ ವಹಿವಾಟು ನಡೆಸುತ್ತಿದ್ದವು.
ಹಿಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 99.90 ಪಾಯಿಂಟ್ ಅಥವಾ ಶೇ. 0.27 ರಷ್ಟು ಏರಿಕೆ ಕಂಡು 37,118.22 ಮಟ್ಟ ತಲುಪಿತ್ತು. ಅಂತೆಯೇ, ಎನ್‌ಎಸ್‌ಇ ನಿಫ್ಟಿ 17.35 ಪಾಯಿಂಟ್ ಅಥವಾ ಶೇ. 0.16 ರಷ್ಟು ಏರಿಕೆ ಕಂಡು 10,997.35 ಕ್ಕೆ ಕೊನೆಗೊಂಡಿತು.

ಶುಕ್ರವಾರ ಯುಎಸ್-ಚೀನಾ ನಡುವಿನ ವಾಣಿಜ್ಯ ಮಾತುಕತೆ ಮತ್ತು ಜಾಗತಿಕ ಮಂದಗತಿಯ ಪ್ರಭಾವ ಮತ್ತು ಕಳವಳಗಳು ಮಾರುಕಟ್ಟೆಗಳನ್ನು ಬೆಚ್ಚಿ ಬೀಳಿಸುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದರು.
ಕಳೆದ ವಾರ ಯುಎಸ್-ಚೀನಾ ವ್ಯಾಪಾರ ಮಾತುಕತೆ, ಎಫ್‌ಪಿಐಗಳ ಮೇಲಿನ ತೆರಿಗೆ, ಆರ್ಥಿಕ ಕುಸಿತ ಮತ್ತು ಹೆಚ್ಚಿನ ವಲಯಗಳಿಗೆ ಹರಿಯುವ ಸಾಲದ ಬಿಕ್ಕಟ್ಟು ಹೀಗೆ ಹಲವಾರು ಅಂಶಗಳು ಷೇರುಪೇಟೆಯ ಏರಿಳಿತಕ್ಕೆ ಕಾರಣವಾಗಿದ್ದವು.

 

ಷೇರುಪೇಟೆ ಮೇಲೆ ಪ್ರಭಾವ ಬೀರಿದ ಅಂಶಗಳು
- ಸೋಮವಾರದ ಜಾಗತಿಕ ಷೇರುಪೆಟೆ ವಹಿವಾಟು ಏಷ್ಯಾದ ಮಾರುಕಟ್ಟೆ ಮೇಲೆ ನಕರಾತ್ಮಕ ಪ್ರತಿಕ್ರಿಯೆಯಾಗಿತ್ತು. ಯುಎಸ್-ಚೀನಾ ವಾಣಿಜ್ಯ ಸಮರ, ಕಳೆದ ವಾರ ಯುಎಸ್ ಫೆಡ್ರಲ್ ಬ್ಯಾಂಕ್ ದರ ಕಡಿತ ಹೂಡಿಕೆದಾರರ ಮೇಲೆ ನಕರಾತ್ಮಕ ಪ್ರಭಾವ ಬೀರಿತ್ತು. ಚೀನಾದ ಯುವಾನ್, ಚೀನಾದ ಆರ್ಥಿಕತೆಯಲ್ಲಿ ಆಳವಾದ ದೌರ್ಬಲ್ಯ ಇವು ಷೇರುಪೇಟೆಯ ಭಾರೀ ಕುಸಿತಕ್ಕೆ ಕಾರಣವಾಗಿವೆ.
- ಇನ್ನೊಂದೆಡೆ ಮುಖ್ಯವಾಗಿ ಜಮ್ಮ ಕಾಶ್ಮೀರದಲ್ಲಿ ಆಗುತ್ತಿರುವ ಬೆಳವಣಿಗೆ ದೇಶಿ ಷೇರುಪೇಟೆಯನ್ನು ಕುಗ್ಗಿಸಿದ್ದು, ಸೆನ್ಸೆಕ್ಸ್ 600ರವರೆಗೆ ಕುಸಿದಿದೆ.
- ಜಮ್ಮು ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನತೆಯ ಮಧ್ಯೆ, 35 ಎ ವಿಧಿ ಅನ್ವಯ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ನಿಬಂಧನೆಗಳನ್ನು ಹಿಂಪಡೆಯಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮ ವರದಿ ಮಾಡಿವೆ. ಭಾನುವಾರ ಮಧ್ಯರಾತ್ರಿ ಶ್ರೀನಗರ ಜಿಲ್ಲೆಯ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಸರ್ಕಾರ ಈಗಾಗಲೇ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಕೆಲವು ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
- ವಿದೇಶಿ ಹೊರಹರಿವು
ಎಫ್‌ಪಿಐ ಹೊರಹರಿವು ತೀವ್ರಗೊಂಡಿರುವುದರಿಂದ ಮ್ಯೂಚುವಲ್ ಫಂಡ್‌ಗಳ ಷೇರು ಖರೀದಿಯು ಈ ದಿನಗಳಲ್ಲಿ ಸಾಕಷ್ಟಿಲ್ಲವೆಂದು ಸಾಬೀತಾಗಿದೆ. ಶುಕ್ರವಾರ, ಎಫ್‌ಪಿಐಗಳು ದೇಶೀಯ ಷೇರುಗಳನ್ನು ರೂ. 2,888 ಕೋಟಿಗೆ ಮಾರಾಟ ಮಾಡಿದ್ದವು.
- ಕಳೆದ ವಾರ ಷೇರುಪೆಟೆಯಲ್ಲಿ ಎದುರಾದ ನಕರಾತ್ಮಕ ಅಂಶಗಳು ಈ ವಾರದಲ್ಲೂ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

English summary

Sensex Cracks Below 37,000-Mark, Tanks 600 Points, Jammu and Kashmir effect!

Domestic equity benchmarks BSE Sensex fell over 531 points to trade below 37,000-mark in early trade on Monday following persistent foreign fund outflows amid negative global cues.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X