For Quick Alerts
ALLOW NOTIFICATIONS  
For Daily Alerts

ಕನ್ನಡದ ಟಾಪ್ 10 ಶ್ರೀಮಂತ ನಟರು, ನಂಬರ್ ಒನ್ ಯಾರು ಗೊತ್ತೆ?

|

ದಕ್ಷಿಣ ಭಾರತದ ಸಿನೆಮಾಗಳಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಇದೆ. ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ದಕ್ಷಿಣ ಭಾರತದ ಸಿನೆಮಾಗಳಿಗೆ ಆಕರ್ಷಿತರಾಗಿ ಬಾಲಿವುಡ್ ನಲ್ಲೂ ರಿಮೇಕ್ ಮಾಡುತ್ತಿದ್ದಾರೆ. ರಾಜಕುಮಾರ್ ಅವರ ಕಾಲದಿಂದಲೂ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿರುವ ಸ್ಯಾಂಡಲ್ ವುಡ್ ಕಳೆದ ಕೆಲ ವರ್ಷಗಳಿಂದ ಜಾಗತಿಕವಾಗಿ ಮಿಂಚುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೆಜಿಎಫ್. ಇದು ಕನ್ನಡ ಚಿತ್ರಗಳಿಗೆ ಜಾಗತಿಕ ಮಟ್ಟದ ವೇದಿಕೆ ಕಲ್ಪಿಸಿಕೊಟ್ಟಿದೆ.

ಸ್ಯಾಂಡಲ್ ವುಡ್ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದೆ. ಅದ್ಭುತ ಪಾತ್ರವರ್ಗ ಮತ್ತು ಕಥಾಹಂದರವನ್ನು ಹೊರತುಪಡಿಸಿ ಚಿತ್ರದ ಬಜೆಟ್ ಕೂಡ ಯಶಸ್ಸನ್ನು ನಿರ್ಧರಿಸುತ್ತದೆ. ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದಾಗ, ನಟನಿಗೆ ಬೇಡಿಕೆಯು ಹೆಚ್ಚಾಗುತ್ತದೆ. ಒಂದು ಚಲನಚಿತ್ರವು ಸೂಪರ್ ಹಿಟ್ ಆದಾಗ, ನಟನು ಅದರಿಂದ ಎಷ್ಟು ಸಂಭಾವನೆ ಪಡೆದಿರಬೇಕು ಎಂಬ ಪ್ರಶ್ನೆ ನಮಗೆ ಕಾಡುತ್ತದೆ. ಕೆಜಿಎಫ್ ನಂತರ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಜಗತ್ತಿನಾದ್ಯಂತ ಪಡೆದಿರುವ ಜನಪ್ರಿಯತೆಯನ್ನು ಗಮನಿಸಿದರೆ, ಇತರ ಕನ್ನಡ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರಬಹುದೆಂದು ಎಂದು ನಾವು ಆಶ್ಚರ್ಯ ಪಡುತ್ತೇವೆ. ಕನ್ನಡ ಚಿತ್ರರಂಗದ ಉನ್ನತ ನಟರು ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಇರುತ್ತದೆ. ಆದ್ದರಿಂದ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸ್ಯಾಂಡಲ್ ವುಡ್ ನಟರ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಬನ್ನಿ ನೋಡೋಣ..

10. ದಿಗಂತ್
 

10. ದಿಗಂತ್

ಮಾಜಿ ಮಾಡೆಲ್ ಆಗಿರುವ ದಿಗಂತ್ ಅವರು ಗಾಳಿಪಟ (2008) ನಲ್ಲಿ ದೂಧಪೇಡಾ ಪಾತ್ರಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ. ಪಂಚರಂಗಿ, ಲೈಫ್ ಇಷ್ಟೇನೆ, ಪಾರಿಜಾತ ಚಿತ್ರಗಳಲ್ಲಿನ ಅಭಿನಯವು ಖ್ಯಾತಿಯನ್ನು ಗಳಿಸಿತು. ಪ್ರತಿ ಚಿತ್ರಕ್ಕೆ ಸುಮಾರು 50 ಲಕ್ಷದಿಂದ 1 ಕೋಟಿಗೆ ಸಂಭಾವನೆ ಪಡೆಯುತ್ತಾರೆ.

9. ವಿಜಯ್

9. ವಿಜಯ್

2004 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಜಯ್ ಅವರು ಪ್ರತಿ ಚಿತ್ರಕ್ಕೆ ಸುಮಾರು ರೂ. 1.5 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರು ಕಿರಿಯ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ದುನಿಯಾ ಚಿತ್ರದಲ್ಲಿ ನಟಿಸಿದ ನಂತರ ನಟರಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಜಂಗ್ಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜಯಮ್ಮನ ಮಗ, ದುನಿಯಾ ಪ್ರಮುಖ ಚಿತ್ರಗಳಾಗಿವೆ.

8. ಗಣೇಶ

8. ಗಣೇಶ

ಇವರು ನಟ ಮತ್ತು ದೂರದರ್ಶನ ನಿರೂಪಕ. ನಿರೂಪಕರಾಗಿ ವೃತ್ತಿಜೀವನದ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಮುಂಗಾರು ಮಳೆ (2006) ಚಿತ್ರದಲ್ಲಿ ನಟಿಸಿದ ನಂತರ ಅವರು ಪ್ರಸಿದ್ಧರಾದರು. ಈಗ ಪ್ರತಿ ಚಿತ್ರಕ್ಕೆ ಸುಮಾರು ರೂ. 1.75 ಕೋಟಿ ಪಡೆಯುತ್ತಾರೆ.

7. ರಕ್ಷಿತ್ ಶೆಟ್ಟಿ
 

7. ರಕ್ಷಿತ್ ಶೆಟ್ಟಿ

ನಟ, ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ಹೆಸರುವಾಸಿಯಾಗಿದ್ದಾರೆ. ನಟರಾಗುವ ಮೊದಲು ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ವೃತ್ತಿಪರರಾಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದರು. ಈಗ ಪ್ರತಿ ಚಿತ್ರಕ್ಕೂ ಸುಮಾರು ರೂ. 2.75 ಕೋಟಿ ಸಂಭಾವನೆ ಪಡೆಯುತ್ತಾರೆ.

6. ಶಿವರಾಜ ಕುಮಾರ್

6. ಶಿವರಾಜ ಕುಮಾರ್

ಶಿವರಾಜ್‌ಕುಮಾರ್ ತಮ್ಮ ಚೊಚ್ಚಲ ಚಿತ್ರ ಆನಂದ್ ಮೂಲಕ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿಯವರೆಗೆ, ಅವರು 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಯಾಂಡಲ್ ವುಡ್ ಪ್ರಮುಖ ನಟರಾಗಿರುವ ಅವರು ರೂ. 3 ರಿಂದ 4 ಕೋಟಿ ಪಡೆಯುತ್ತಾರೆ. ಚಿತ್ರ ತಂಡವು ನಷ್ಟದಲ್ಲಿದ್ದರೆ ಅವರು ಕಡಿಮೆ ಶುಲ್ಕಕ್ಕೂ ಕೆಲಸ ಮಾಡುತ್ತಾರೆ.

5. ಉಪೇಂದ್ರ

5. ಉಪೇಂದ್ರ

ಒಬ್ಬ ನಟ, ನಿರ್ಮಾಪಕ, ನಿರ್ದೇಶಕ, ಗೀತರಚನೆಕಾರ ಮತ್ತು ಚಿತ್ರಕಥೆಗಾರ ಎಂದೇ ಖ್ಯಾತಿ ಪಡೆದಿರುವ ಉಪ್ಪಿ ಅವರು ಪ್ರತಿ ಚಿತ್ರಕ್ಕೆ ಸುಮಾರು ರೂ. 3.5-4 ಕೋಟಿ ಪಡೆಯುತ್ತಾರೆ. ಉಪೇಂದ್ರ, ಎ, ಕಲ್ಪನಾ, ರಕ್ತ ಕಣ್ಣೀರು, ಗೋಕರ್ಣ,H2O, ಸೂಪರ್, ಬುಧಿವಂತ, ಉಪ್ಪಿ 2 ಪ್ರಮುಖ ಚಿತ್ರಗಳು. ನಿರ್ದೇಶಕರಾಗಿ ಓಂ, ತರ್ಲೆ ನನ್ ಮಗ, ಉಪೇಂದ್ರ, ಎ ಸಾಕಷ್ಟು ಜನಪ್ರಿಯತೆ ಗಳಿಸಿದವು.

4. ದರ್ಶನ್

4. ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಡಿ ಬಾಸ್ ಎಂದೇ ಅಭಿಮಾನಿಗಳಿಗೆ ಇಷ್ಟ. ಸತತ ಪರಿಶ್ರಮ, ಹಲವು ವರ್ಷಗಳ ಹೋರಾಟ ಮತ್ತು ಕಷ್ಟಗಳ ನಂತರ ಅವರು ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ಎಂದು ಪ್ರಸಿದ್ಧರಾದರು. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ದರ್ಶನ್ ಅವರ ಪ್ರತಿ ಚಿತ್ರಕ್ಕೆ ರೂ. 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ.

3. ಪುನೀತ್ ರಾಜ್‌ಕುಮಾರ್

3. ಪುನೀತ್ ರಾಜ್‌ಕುಮಾರ್

ಭಾರತೀಯ ಚಲನಚಿತ್ರ ರಂಗದ ನಟ, ಹಿನ್ನೆಲೆ ಗಾಯಕ, ನಿರ್ಮಾಪಕ ಮತ್ತು ನಿರೂಪಕ ಹೀಗೆ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಾರೆ. ಅಪ್ಪು ಮತ್ತು ಪವರ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಪುನೀತ್, 27 ಚಿತ್ರಗಳಲ್ಲಿ ಪ್ರಮುಖ ನಟರಾಗಿದ್ದಾರೆ. ಬಾಲ್ಯದಲ್ಲಿಯೇ ತಂದೆ ರಾಜ್‌ಕುಮಾರ್ ಅಭಿನಯದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ವಸಂತ ಗೀತಾ (1980), ಭಗವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರ ಅಭಿನಯಗಳನ್ನು ಪ್ರಶಂಸಿಸಲಾಯಿತು. ಬೆಟ್ಟದ ಹೂವು ಚಿತ್ರದಲ್ಲಿ ಅವರು ಅತ್ಯುತ್ತಮ ಬಾಲ ಕಲಾವಿದರಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಪ್ರವೇಶಿಸಿದ ಪುನೀತ್ ಅವರು ಪ್ರತಿ ಚಲನಚಿತ್ರಕ್ಕೆ ರೂ. 5 ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ.

2. ಸುದೀಪ್

2. ಸುದೀಪ್

ಸುದೀಪ್ ಅವರು ಕಿಚ್ಚ ಸುದೀಪ್ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಜನಪ್ರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡುತ್ತಾರೆ. ಅವರ ಚೊಚ್ಚಲ ಚಿತ್ರ ಸ್ಪರ್ಶ ಮೂಲಕ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ತಮಿಳು, ತೆಲುಗು ಮತ್ತು ಕೆಲವು ಪ್ರಸಿದ್ಧ ಹಿಂದಿ ಚಲನಚಿತ್ರಗಳಾದ ರಕ್ತ ಚರಿತ್ರಾ, ಬ್ಲ್ಯಾಕ್ ಮತ್ತು ಬಾಹುಬಲಿಯಲ್ಲಿ ನಟಿಸಿದ್ದಾರೆ. ಈಗ ಚಿತ್ರದ ನಂತರ ಅವರ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಿತು. ಒಂದು ಚಿತ್ರಕ್ಕೆ ಸುಮಾರು ರೂ. 5 ರಿಂದ 6 ಕೋಟಿ ಸಂಭಾವನೆ ಪಡೆಯುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ 10 ಕನ್ನಡ ನಟರಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಇವರ ಕೆಲವು ಜನಪ್ರಿಯ ಚಲನಚಿತ್ರಗಳು ಮೈ ಆಟೋಗ್ರಾಫ್, ಮುಸ್ಸಂಜೆ ಮಾತು, ಸ್ವಾತಿ ಮುತ್ತು, ನಂದಿ, ವೀರ ಮಡಕರಿ, ಬಚ್ಚನ್, ವಿಷ್ಣುವರ್ಧನ, ಕೆಂಪೇಗೌಡ, ಹುಚ್ಚ, ರನ್ನಾ ಮತ್ತು ಈಗ. ಅವರ ಸುಂದರವಾದ ಧ್ವನಿಯನ್ನು ಹೊಂದಿದ್ದಾರೆ.

1. ಯಶ್

1. ಯಶ್

ಬಣ್ಣದ ಜಗತ್ತಿಗೆ ಸಿರಿಯಲ್ ಮುಖಾಂತರ ಹೆಜ್ಜೆಯಿಟ್ಟು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಮೊಗ್ಗಿನ ಮನಸು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಂತರ ಹಿಂತಿರುಗಿ ನೋಡಲಿಲ್ಲ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಅವರ ಗಮನಾರ್ಹ ಚಿತ್ರಗಳೆಂದರೆ ಮೊದಲಸಲ, ಗೂಗ್ಲಿ, ರಾಜಧಾನಿ, ಲಕ್ಕಿ, Mr.and Mrs. ರಾಮಚಾರಿ, ರಾಜಾ ಹುಲಿ, ಕಿರಾತಕ, ಜಾನು, ಗಜಕೇಸರಿ ಹೀಗೆ ಹಲವು. ಏಷಿಯಾನೆಟ್ ನ್ಯೂಸ್ ವರದಿ ಪ್ರಕಾರ, ಯಶ್ ಪ್ರತಿ ಚಿತ್ರಕ್ಕೆ ಸುಮಾರು ರೂ. 5 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಕೊನೆಯ ಚಿತ್ರ ಕೆಜಿಎಫ್ ಯಶಸ್ಸು ಹಾಗು ಜಗತ್ತಿನಾದ್ಯಂತ ಹೊಂದಿರುವ ಅಭಿಮಾನ ಬಳಗ ಗಮನಿಸಿದರೆ, ಅವರು ಈಗ ಸ್ಯಾಂಡಲ್‌ವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ 2 ನಂತರ ಅವರ ಸಂಭಾವನೆ ದುಪ್ಪಟ್ಟಾಗಬಹುದು! ಇದೀಗ ಬೇರೆ ಬೇರೆ ಭಾಷೆಯ ಸ್ಟಾರ್ ಡೈರೆಕ್ಟರ್ ಗಳಿಂದ ಆಫರ್ ಕೂಡ ಬರುತ್ತಿದೆ!

ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ಇವರು ಬಾಲಿವುಡ್ ನ 10 ಅತೀ ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತಾ?

English summary

Top 10 Richest Kannada Actors

Kannada cinema is also known as the Sandalwood or Chandanavana in the colloquially. In this article, we listed the Top 10 Highest Paid Kannada Actors 2019.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more