ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಈ ಸಾರಿ ಹಬ್ಬದ ಡಿಸ್ಕೌಂಟ್ ಸಿಗೋದು ಡೌಟು!

ಮುಂಬೈ, ಸೆಪ್ಟೆಂಬರ್ 14: ಹಬ್ಬ ಬರುವುದನ್ನೇ ಕಾಯುತ್ತಿರುವ ಆನ್ ಲೈನ್ ಶಾಪಿಂಗ್ ಪ್ರಿಯರಿಗೆ ಇಲ್ಲೊಂದು ಕಹಿಸುದ್ದಿಯಿದೆ. ಖರೀದಿಗಾಗಿ ಆಫರ್ ಬಯಸುತ್ತಿರುವವರಿಗೆ ಈ ಬಾರಿ ಹಬ್ಬದ ಡಿಸ್ಕೌಂಟ್ ಸಿಗುವುದು ಡೌಟು!

ಭಾರತದ ಮುಂಚೂಣಿ ವರ್ತಕರ ಒಕ್ಕೂಟ CAIT (Confederation of All India Traders
Read more ) ಸರ್ಕಾರಕ್ಕೆ ಮನವಿಯೊಂದನ್ನು ಕಳಿಸಿದ್ದು, ಇದರಲ್ಲಿ, "ಇ ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಹಾಕುವ ಹಬ್ಬದ ಆಫರ್ ಗಳನ್ನು ನಿಷೇಧಿಸಬೇಕು" ಎಂದಿದೆ.

ಈ ಸಂಸ್ಥೆಗಳು ದೇಶದ ವಿದೇಶಿ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿ, ಹೆಚ್ಚಿನ ಡಿಸ್ಕೌಂಟ್ ನೀಡುತ್ತಿವೆ ಎಂದು ಅದು ದೂರಿದೆ.

ಅಮೆಜಾನ್‌ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್

Flipkart, Amazon ಗ್ರಾಹಕರಿಗೆ ಕಹಿಸುದ್ದಿ, ಹಬ್ಬಕ್ಕೆ ಆಫರ್ ಇಲ್ಲ?!

ವಾಲ್ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ನ ಆರು ದಿನಗಳ ಫೆಸ್ಟಿವ್ ಸೇಲ್ ಸೆಪ್ಟೆಂಬರ್ 29 ರಂದು ಆರಂಭವಾಗಲಿದೆ. ಅಮೆಜಾನ್ ತನ್ನ ಡಿಸ್ಕ್ಪೌಂಟ್ ಸೇಲ್ ಅನ್ನು ಇನ್ನೂ ಪ್ರಕಟಿಸಬೇಕಿದೆ. ಆದರೆ ಅದಕ್ಕೂ ಮುನ್ನವೇ ಸರ್ಕಾರವೇನಾದರೂ ಈ ಕೊಡುಗೆಗಳ ಮೇಲೆ ನಿಷೇಧ ಹೇರಿದರೆ ಗ್ರಾಹಕರಿಗೆ ನಿರಾಸೆಯಾಗುವುದು ಖಂಡಿತ.

ಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತ

5 ಲಕ್ಷಕ್ಕೂ ಹೆಚ್ಚು ವರ್ತಕರನ್ನು ಹೊಂದಿರುವ CAITಯು ಸರ್ಕಾರಕ್ಕೆ ಪತ್ರ ಬರೆದಿದ್ದು, ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಗಳು ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವುಗಳ ಬಗ್ಗೆ ತನಿಖೆ ನಡೆಯಬೇಕು, ಅದುವರೆಗೂ ಈ ಡಿಸ್ಕೌಂಟ್ ಸೇಲ್ ಗಳಿಗೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+