For Quick Alerts
ALLOW NOTIFICATIONS  
For Daily Alerts

ಐ ಪಿ ಓ ಲಿಸ್ಟಿಂಗ್, ತ್ವರಿತ ಸಂಪಾದನೆಗೆ ದಾರಿ - ತಪ್ಪಿದರೆ ಕ್ರೂರಿ

2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ಐ ಪಿ ಓ ಮೂಲಕ ಪೇಟೆ ಪ್ರವೇಶಿಸಿದ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ರೂ.1,039 ರ ವಾರ್ಷಿಕ ಗರಿಷ್ಠವನ್ನು ನವೆಂಬರ್ 2018 ರಲ್ಲಿದ್ದು ಅಕ್ಟೋಬರ್ 17 ರಂದು ವಾರ್ಷಿಕ ಕನಿಷ್ಠ ರೂ.371

|

ಸೋಮವಾರದಂದು ವಹಿವಾಟಿಗೆ ಬಿಡುಗಡೆಯಾದ ಐ ಆರ್ ಸಿ ಟಿ ಸಿ ಲಿಮಿಟೆಡ್ ಕಂಪನಿ ವಿತರಿಸಿದ ರೂ.320 ರ ಬದಲಾಗಿ ಅಂದು ದಿನದ ಆರಂಭದಲ್ಲಿ ರೂ.625 ರ ಸಮೀಪದಿಂದ ಆರಂಭವಾಗಿ ರೂ.732 ರ ಸಮೀಪಕ್ಕೆ ತಲುಪಿ ರೂ.728.60 ರಲ್ಲಿ ಅತ್ಯಧಿಕ ಸಂಖ್ಯಾಗಾತ್ರದೊಂದಿಗೆ ಕೊನೆಗೊಂಡಿದೆ. ಸುಮಾರು 112 ಪಟ್ಟು ಹೆಚ್ಚು ಸಂಗ್ರಹಣೆಯ ದಾಖಲೆಯನ್ನು ನಿರ್ಮಿಸಿದ್ದ ಈ ಕಂಪನಿ ಮಂಗಳವಾರದಂದು ರೂ.748 ರ ಗರಿಷ್ಟ ದಾಖಲೆ ಮಟ್ಟ ತಲುಪಿ ರೂ.696 ರ ಸಮೀಪಕ್ಕೆ ಕುಸಿದು , ಗುರುವಾರದಂದು ರೂ.687 ರ ಸಮೀಪಕ್ಕೆ ದಿನದ ಮಧ್ಯಂತರದಲ್ಲಿ ಇಳಿದಿದೆ, ರೂ.724 ರ ಸಮೀಪ ಕೊನೆಗೊಂಡಿದೆ.

ಐ ಪಿ ಓ ಲಿಸ್ಟಿಂಗ್,  ತ್ವರಿತ ಸಂಪಾದನೆಗೆ  ದಾರಿ - ತಪ್ಪಿದರೆ ಕ್ರೂರಿ

ವಿಶ್ವರಾಜ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಷೇರುಗಳು ಮಂಗಳವಾರದಂದು ವಹಿವಾಟಿಗೆ ಬಿಡುಗಡೆಯಾಗಿ ವಿತರಣೆ ಬೆಲೆಯಾದ ರೂ.60 ರಂತೆ ವಿತರಿಸಿದರೂ ವಹಿವಾಟಿನಲ್ಲಿ ರೂ.61.20 ರ ಗರಿಷ್ಟ ತಲುಪಿ ರೂ.60.30 ರಲ್ಲಿ ದಿನದ ಅಂತ್ಯ ಕಂಡಿದೆ.
ಈಗಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಿದ್ದರೂ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಮರ್ಚಂಟ್ ಬ್ಯಾಂಕರ್ / ಕಂಪನಿಗಳ ದುರಾಸೆಗಳಿಗೆ ಬ್ರೇಕ್ ಹಾಕಬೇಕಾದರೆ, ರಿಟೇಲ್ ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಲು ಸೂಕ್ತವಾದ ನಿಯಮ, ನಿಯಂತ್ರಣ ಅಧವಾ ತಿದ್ದುಪಡಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ. 2007 ರಿಂದ ರೇಟಿಂಗ್ ಪಡೆದು ಆರಂಭಿಕ ಷೇರು ವಿತರಣೆ ಮಾಡುವ ನಿಯಮ ಜಾರಿಯಾದ ಮೇಲೂ ಕಾರ್ಪೊರೇಟ್ ಗಳು ನಿಗದಿಪಡಿಸುವ ವಿತರಣಾ ಬೆಲೆಗಳು ಅತಿ ಹೆಚ್ಚಾಗಿದ್ದು, ವಿತರಣೆಯಾದ ನಂತರದ ವರ್ಷಗಳಲ್ಲಿ ಈ ಕಂಪನಿಗಳ ಷೇರುಗಳು ಕಂಡ ಅತಿಯಾದ ಕುಸಿತವು ಹೇಗೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ರೇಟಿಂಗ್ ಎಂಬುದು ಕೇವಲ ಕಣ್ಣೊರೆಸುವ ತಂತ್ರದಂತಾಗಿ ಅದರ ಘನತೆಯನ್ನು ಕಳೆದುಕೊಂಡಿದೆ. ಇತ್ತೀಚಿಗೆ ಈ ರೇಟಿಂಗ್ ಎಂಬುದು ವಹಿವಾಟುದಾರರ ದಿನನಿತ್ಯದ ಚಟುವಟಿಕೆಗೆ ಆಹಾರವಾಗಿದೆ. ಒಂದು ಕಂಪನಿಯ ಷೇರಿನ ಬೆಲೆ ಕುಸಿತ ಕಂಡಾಗ ರೇಟಿಂಗ್ ಇಳಿಸುವುದು ಮತ್ತು ಏರಿಕೆ ಕಂಡಾಗ ರೇಟಿಂಗ್ ಹೆಚ್ಚಿಸುವ ಈ ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ನೀಡುವಂತಹ ಅಗತ್ಯವಿಲ್ಲದಾಗಿದೆ.

2010 ರಲ್ಲಿನವರತ್ನ ಕಂಪನಿಕೋಲ್ ಇಂಡಿಯಾ ರೂ.15 ಸಾವಿರಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕಷೇರು ವಿತರಣೆಮಾಡಿತು. ಆಸಂದರ್ಭದಲ್ಲಿ ಸಾರ್ವಜನಿಕ ಸ್ಪಂಧನ ಹೆಚ್ಚಾಗಿ ಸುಮಾರು ಎರಡುಲಕ್ಷಕೋಟಿ ಹಣ ಸಂಗ್ರಹಣೆಯಾಯಿತು. ಅಂದರೆ ಸುಮಾರು ರೂ.1.85 ಲಕ್ಷಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರಸರಿಯಿತು. ಆರಂಭಿಕಷೇರು ವಿತರಣೆಗಳಲ್ಲಿ ಜನಸಾಮಾನ್ಯರು ಭಾಗವಹಿಸುವುದರಿಂದ ಕಾರ್ಪೊರೇಟ್ ಗಳು ಸಹಜ, ಅರ್ಹಬೆಲೆಯಲ್ಲಿ ವಿತರಣೆಮಾಡಲು ಮುಂದಾದರೆ ಹೂಡಿಕೆಗೂ ಪ್ರೋತ್ಸಾಹಿಸುವದರ ಜೊತೆಗೆ ಹಣದುಬ್ಬರದ ನಿಯಂತ್ರಣವು ತನ್ನಷ್ಟಕ್ಕೆ ತಾನೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಸಾರ್ವಜನಿಕರ ಭಾಗಿತ್ವದಿಂದ ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಂತಹ ಕ್ರಮವಾಗಿದೆ. ಈ ಷೇರಿನ ಬೆಲೆ 2005 ರಲ್ಲಿ ರೂ.440 ನ್ನು ತಲುಪಿದ್ದು ನಂತರದಲ್ಲಿ ನಿರಂತರವಾಗಿ ಕುಸಿಯುತ್ತ ಬಂದು ರೂ.177 ರ ಕನಿಷ್ಟಕ್ಕೆ ತಲುಪಿ ಈಗ ರೂ.197 ರ ಸಮೀಪದಲ್ಲಿದೆ.

 

2015 ರಲ್ಲಿ ಪ್ರತಿ ಷೇರಿಗೆ ರೂ.320 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಮನ್ ಪಸಂದ್ ಬೆವರೇಜಸ್ ಅಲ್ಲದೆ ಅದಕ್ಕೂ ಹಿಂದೆ ಒಂದು ಸಮಯದಲ್ಲಿ ಹೆಚ್ಚಿನ ರಭಸದ ಚಟುವಟಿಕೆಯಿಂದ ವಿಜೃಂಭಿಸಿದ ಲ್ಯಾಂಕೋ ಇನ್ಫ್ರಾ, ಮೋಸರ್ ಬೇರ್, ಸ್ಯಾಂಟಲ್ ಕಲರ್, ಎಲ್ ಎಂ ಎಲ್, ಹಾನಂಗ್ ಟಾಯ್ಸ್ ನಂತಹ ಕಂಪನಿಗಳು ಈಗ ವಹಿವಾಟಿನಿಂದ ಹಿಂದೆ ಸರಿದಿದ್ದು, ಡೀಲಿಸ್ಟ್ ಆಗಲಿವೆ. ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ ಹೆಚ್ಚಿನವರು ಅಪಾರವಾದ ಹಾನಿಗೊಳಗಾಗುವುದು ನಿಷ್ಚಿತ.

 

2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ಐ ಪಿ ಓ ಮೂಲಕ ಪೇಟೆ ಪ್ರವೇಶಿಸಿದ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ರೂ.1,039 ರ ವಾರ್ಷಿಕ ಗರಿಷ್ಠವನ್ನು ನವೆಂಬರ್ 2018 ರಲ್ಲಿದ್ದು ಅಕ್ಟೋಬರ್ 17 ರಂದು ವಾರ್ಷಿಕ ಕನಿಷ್ಠ ರೂ.371 ರ ಸಮೀಪಕ್ಕೆ ಕುಸಿದು ನಂತರ ಕ್ಷಿಪ್ರಗತಿಯಲ್ಲಿ ರೂ.437 ರ ವರೆಗೂ ಜಿಗಿತ ಕಂಡಿದೆ. ಈ ಸಂದರ್ಭದಲ್ಲಿ ಕಂಪನಿಯು ರೂ.10 ಸಾವಿರ ಕೋಟಿ ಮೌಲ್ಯದ ಎನ್ ಸಿ ಡಿ ಗಳನ್ನೂ ವಿತರಿಸುವ ಇಂಗಿತ ವ್ಯಕ್ತವಾಗಿದ್ದುದೇ ಈ ಕುಸಿತಕ್ಕೆ ಕಾರಣವಾಗಿದೆ.
2005 ರಲ್ಲಿ ಜೆಟ್ ಏರ್ ವೇಸ್ ಕಂಪನಿಯು ಪ್ರತಿ ಷೇರಿಗೆ ರೂ.1,100 ರಂತೆ ಆರಂಭಿಕ ಷೇರು ವಿತರಿಸಿತ್ತು. ಆಗ ಆ ವಿತರಣೆಗೆ ಹದಿನಾರು ಪಟ್ಟು ಹೆಚ್ಚು ಸಂಗ್ರಹವಾಗಿತ್ತು. ಆದರೆ ನಂತರದ ದಿನಗಳಲ್ಲಿ , ಪೇಟೆಯಲ್ಲಿ, ವಿತರಣೆ ಬೆಲೆ ಸಹ ತಲುಪದಾಗದೆ, ಈಗ ರೂ.16 ರ ಸಮೀಪಕ್ಕೆ ಕುಸಿದಿದೆ.

ಕೊನೆ ಮಾತು :
ಐ ಪಿ ಓ ಗಳಲ್ಲಿ ವಿತರಿಸಿದ ಷೇರುಗಳು ಲಿಸ್ಟಿಂಗ್ ಅದಮೇಲೆ ಉತ್ತಮ ಆದಾಯ ಕಲ್ಪಿಸುತ್ತಿದ್ದರೆ ಮಾರಾಟ ಮಾಡಿ ಹೊರಬರುವುದು ಕ್ಷೇಮ. ಕಂಪನಿಗಳು ತಮ್ಮ ಐ ಪಿ ಓ ಮೂಲಕ ವಿತರಿಸಿದ ಬೆಲೆಗಳು ಕಡಿಮೆ ಇದ್ದು, ಆಕರ್ಷಕವಾಗಿದ್ದಲ್ಲಿ ಅವು ಪೇಟೆಯಲ್ಲಿ ದೀರ್ಘಕಾಲದ ಚಟುವಟಿಕೆಯಲ್ಲಿರುತ್ತವೆ. ವಿತರಣೆ ಬೆಲೆ ಹೆಚ್ಚಾದಲ್ಲಿ ಅವು ಪೇಟೆಯಲ್ಲಿ ಕೇವಲ ಅಲ್ಪ ಕಾಲದಲ್ಲಿ ಮೆರೆದು ಮಾಯವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಷೇರಿನ ಬೆಲೆಗಳು ನ್ಯಾಯಸಮ್ಮತವಾಗಿದ್ದಲ್ಲಿ ಹೂಡಿಕೆದಾರರ ಬೆಂಬಲ ದೀರ್ಘಕಾಲೀನವಾಗಿರುತ್ತದೆ.

English summary

IPO listing, way to quick earn, brutal if missed

IPOs are priced at very high rates. Investors should cash in at the initial listing time. There are several cases where the market price of a share issued at high level has fallen sharply.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X