For Quick Alerts
ALLOW NOTIFICATIONS  
For Daily Alerts

25 ಸಾವಿರ ಕೋಟಿಯ ಬಿರ್ಲಾ ಸಾಮ್ರಾಜ್ಯದ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಆದೇಶ

By ಅನಿಲ್ ಆಚಾರ್
|

ಬಿರ್ಲಾ ಕಾರ್ಪೊರೇಷನ್ ಹಾಗೂ ಎಂಪಿ ಬಿರ್ಲಾ ಸಮೂಹ ಕಂಪೆನಿಗಳ ಮೇಲಿನ ಹತೋಟಿಗಾಗಿ ದಶಕದಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹರ್ಷ್ ವರ್ಧನ್ ಲೋಧಾಗೆ ಹಿನ್ನಡೆಯಾಗಿದೆ. ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ನೀಡಿದ ಆದೇಶದ ಪ್ರಕಾರ, ತಕ್ಷಣದಿಂದಲೇ ಜಾರಿಯಾಗುವಂತೆ ಕಂಪೆನಿಯ ಎಲ್ಲ ಹುದ್ದೆಗಳಿಂದಲೂ ಲೋಧಾ ಅವರನ್ನು ತೆಗೆಯಲಾಗಿದೆ.

 

ಪ್ರಿಯಂವದಾ ಬಿರ್ಲಾ ಎಸ್ಟೇಟ್ ಆಸಕ್ತಿಗೆ ವಿರುದ್ಧವಾಗಿ ಬಿರ್ಲಾ ಕಾರ್ಪೊರೇಷನ್ ಅಧ್ಯಕ್ಷ ಲೋಧಾ ನಡೆದುಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ಹೇಳಿರುವುದಾಗಿ, ಈ ಬಗ್ಗೆ ಮಾಹಿತಿ ಇರುವವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಿರ್ಲಾ ಕುಟುಂಬದವರಿಗೆ ಸಿಕ್ಕ ಮಹತ್ವದ ಜಯ ಎನ್ನಲಾಗಿದೆ. ಅವರು ಪ್ರಿಯವಂದಾ ಅವರ ಮರಣಪತ್ರದ ಕಾನೂನು ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿದ್ದರು.

25 ಸಾವಿರ ಕೋಟಿ  ಎಂ.ಪಿ. ಬಿರ್ಲಾ ಸಾಮ್ರಾಜ್ಯ

25 ಸಾವಿರ ಕೋಟಿ ಎಂ.ಪಿ. ಬಿರ್ಲಾ ಸಾಮ್ರಾಜ್ಯ

ಎರಡೂ ಗುಂಪಿನ ಮಧ್ಯೆ ಹದಿನಾರು ವರ್ಷದಿಂದ ಕಾನೂನು ಸಮರ ನಡೆಯುತ್ತಿತ್ತು. ಪ್ರಿಯಂವದಾ ಮರಣಪತ್ರ (ವಿಲ್) ವಿಚಾರವಾಗಿ ಈ ವ್ಯಾಜ್ಯ ಇತ್ತು. ಪ್ರಿಯಂವದಾ ತಮ್ಮ ಆಸ್ತಿ ಹಾಗೂ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ (ಈಗಿನ ಲೆಕ್ಕಾಚಾರ) ಎಂ.ಪಿ. ಬಿರ್ಲಾ ಸಾಮ್ರಾಜ್ಯವನ್ನು ಆಕೆಯ ಚಾರ್ಟರ್ಡ್ ಅಕೌಂಟೆಂಟ್ ಆರ್.ಎಸ್. ಲೋಧಾ ಮತ್ತು ಅವರ ಎರಡನೇ ಮಗ ಹರ್ಷ್ ವರ್ಧನ್ ಲೋಧಾ ಸುಪರ್ದಿಗೆ ವಹಿಸಿದ್ದರು. ಹೈಕೋರ್ಟ್ ನ ಈ ಆದೇಶದಂತೆ, ಲೋಧಾರನ್ನು ಬಿರ್ಲಾ ಕಾರ್ಪೊರೇಷನ್ ಸಮೂಹ ಅಧ್ಯಕ್ಷ ಹುದ್ದೆಯಿಂದ ತೆಗೆಯಲಾಗುತ್ತದೆ. ಎಂಪಿ ಬಿರ್ಲಾ ಸಮೂಹ ಕಂಪೆನಿಗಳ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದಿಂದಲೂ ತೆಗೆಯಲಾಗುತ್ತದೆ. ಈ ಹಿಂದೆ, ಅಂದರೆ ಮೇ ತಿಂಗಳಲ್ಲಿ ಇಬ್ಬರೂ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠ ಆದೇಶವೊಂದನ್ನು ನೀಡಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ
 

ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ

ಅದರ ಪ್ರಕಾರ, ಸಮೂಹದ ಕೆಲವು ಸಂಸ್ಥೆಗಳಲ್ಲಿ ಸರದಿ ಮೇಲೆ ನಿರ್ದೇಶಕರಾಗಿ ಲೋಧಾರನ್ನು ಮರುನೇಮಕ ಮಾಡುವಂತೆ ತಿಳಿಸಿತ್ತು. ಈ ಸಂಸ್ಥೆಗಳಲ್ಲಿ ಲಾಭಕ್ಕೆ ಸಂಬಂಧಿಸಿದ ಕಮಿಷನ್ ಪಡೆಯಲು ನಿರ್ದಿಷ್ಟವಾಗಿ ಅರ್ಹರು ಎಂದು ಕಂಪೆನಿಯ ಸಾಮಾನ್ಯ ಸಭೆಯಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಗಿತ್ತು. ಬಿರ್ಲಾ ಕುಟುಂಬವು ಈ ಆಯ್ಕೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಆ ಅರ್ಜಿ ತಿರಸ್ಕೃತಗೊಂಡಿತ್ತು. ಆ ನಂತರ ಪ್ರಕರಣವನ್ನು ಹೈಕೋರ್ಟ್ ಗೆ ವಹಿಸಿತ್ತು. ಕೋರ್ಟ್ ನಿಂದ ಶುಕ್ರವಾರ ನೀಡಿದ ಆದೇಶದಲ್ಲಿ, ಎಲ್ಲ ತೀರ್ಮಾನಗಳು ಲೋಧಾ ಏನು ಮಾಡಬೇಕು ಎಂಬುದನ್ನು ತಿಳಿಸಿವೆ. ಅದಕ್ಕೆ ಬದ್ಧರಾಗಬೇಕು. 2019 ಮತ್ತು 2020ರಲ್ಲಿ ಪ್ರತ್ಯೇಕ ಆದೇಶದಲ್ಲಿ ಸಮಿತಿಯು ಲೋಧಾರನ್ನು ಈ ಆಡಳಿತ ಮಂಡಳಿಯಿಂದ ತೆಗೆದುಹಾಕಲು ಸೂಚನೆ ನೀಡಿದೆ. ಯಾವುದೇ ಲಾಭಕ್ಕೆ ತಳುಕು ಹಾಕಿಕೊಂಡ ವೇತನ ಪಾವತಿಗೆ ಬೆಂಬಲಿಸಲು ಸಾಧ್ಯವಿಲ್ಲ ಎಂದಿದೆ. ಆದರೆ ಈ ಆದೇಶ ಅನುಷ್ಠಾನವಾಗಿಲ್ಲ.

ನ್ಯಾ. ಸಾಹಿದುಲ್ಲಾ ಮುನ್ಷಿ ತೀರ್ಪು ಕಾನೂನು ಸಮ್ಮತವಲ್ಲ

ನ್ಯಾ. ಸಾಹಿದುಲ್ಲಾ ಮುನ್ಷಿ ತೀರ್ಪು ಕಾನೂನು ಸಮ್ಮತವಲ್ಲ

ಈ ನಿರ್ದೇಶನದ ಅರ್ಥ ಏನೆಂದರೆ, ಹರ್ಷ್ ವರ್ಧನ್ ಈಗಿನಿಂದಲೇ ಎಂ.ಪಿ. ಬಿರ್ಲಾ ಸಮೂಹವೂ ಸೇರಿ ಅದರ ಒಡೆತನದ ಎಲ್ಲ ಕಂಪೆನಿ, ಟ್ರಸ್ಟ್ ಗಳು ಮತ್ತು ಎಂಪಿ ಬಿರ್ಲಾ ಸೊಸೈಟಿಯ ನಿರ್ದೇಶಕ ಹುದ್ದೆಯನ್ನು ತ್ಯಜಿಸಬೇಕು ಎಂಉ ಬಿರ್ಲಾ ಕುಟುಂಬ ಹೇಳಿದೆ. ಈ ಪ್ರಕರಣದಲ್ಲಿ ಕಂಪೆನಿಗಳು ಕಕ್ಷೀದಾರ ಅಲ್ಲವಾದ್ದರಿಂದ ಅವುಗಳ ವಿರುದ್ಧ ನಿರ್ದೇಶನ ನೀಡಲು ಆಗಲ್ಲ. ಆದರೆ ಸಮಿತಿ ಆಡಳಿತಗಾರರ ತೀರ್ಮಾನವನ್ನು ಲೋಧಾ ಪೂರ್ತಿ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಹರ್ಷ್ ವರ್ಧನ್ ಲೋಧಾರನ್ನು ವಿಂಧ್ಯಾ ಟೆಲಿಲಿಂಕ್ಸ್ ಲಿಮಿಟೆಡ್ ಹಾಗೂ ಬಿರ್ಲಾ ಕೇಬಲ್ ಲಿಮಿಟೆಡ್ ಗೆ ನಿರ್ದೇಶಕರಾಗಿ ಪುನರಾಯ್ಕೆ ವಿಚಾರವಾಗಿ ನ್ಯಾ. ಸಾಹಿದುಲ್ಲಾ ಮುನ್ಷಿ ತೀರ್ಪು ಕಾನೂನು ಸಮ್ಮತವಲ್ಲ ಎಂದು ಹರ್ಷ್ ವರ್ಧನ್ ಪರ ವಕೀಲರು ಹೇಳಿದ್ದಾರೆ. ನಮ್ಮ ಕಕ್ಷೀದಾರರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯಿಂದ ಈಗಿನ ತೀರ್ಪನ್ನು ಪ್ರಶ್ನಿಸಲಾಗುವುದು ಹಾಗೂ ದೀರ್ಘಾವಧಿ ಪರಿಹಾರಕ್ಕೆ ಕೇಳಲಾಗುವುದು ಎಂದಿದ್ದಾರೆ.

English summary

25000 Crore MP Birla Empire Case: Calcutta High Court Removes Harsh Vardhan Lodha From All Post

Harsh Vardhan Lodha, who fought for to retain control of 25,000 crore Birla empire, will now be removed with immediate effect from all company positions, according to Calcutta High Court order.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X