For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಕೊಡಿಸಲು ಈ ಬಡ ತಂದೆ ಮಾಡಿದ್ದೇನು ಗೊತ್ತಾ?

|

ಕೊರೊನಾವೈರಸ್ ಪಿಡುಗು ಜಗತ್ತಿನಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಸದ್ಯ ಜನಸಾಮಾನ್ಯರು ಇದರಿಂದ ತೀವ್ರ ತೊಂದರೆಗೊಳಗಾಗಿದ್ದಾರೆ. ಲಾಕ್‌ಡೌನ್ ನಿಂದ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಆದರೆ, ಮನುಷ್ಯ ಕುಲಕ್ಕೆ ಹೊಸ ಬದಲಾವಣೆಗೆ ಅಂಟಿಕೊಳ್ಳಲು ಇದೊಂದು ಪಾಠವಾಗುತ್ತದೆ ಎನ್ನಲಾಗುತ್ತಿದೆ. ಸದಾ ಚಟುವಟಿಕೆಯಿಂದ ಇರುತ್ತಿದ್ದ ಶಿಕ್ಷಣ ವಲಯ ಇದೀಗ ಕೊರೊನಾ ಸೃಷ್ಠಿಸಿದ ಅವಾಂತರದಿಂದ ನಿಂತ ನೀರಾಗಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣದ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವರು ಬೇಕು ಎಂದರೆ ಇನ್ನು ಕೆಲವರು ಬೇಡ ಎನ್ನುತ್ತಿದ್ದಾರೆ.

ಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHOಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHO

ಆದರೆ, ಬಡ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಎಂಬುದು ಗಗನ ಕುಸುಮವೇ ಸರಿ. ಉಳ್ಳವರು ಮಕ್ಕಳು ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳಲು ತಯಾರಿದ್ದಾರೆ. ಆದರೆ ಬಡವರ ಮಕ್ಕಳು ಇದನ್ನು ಹೇಗೆ ಪಡೆದಾರೂ ಎಂಬುದು ಸದ್ಯದ ಪ್ರಶ್ನೆ. ತಂದೆಯೊಬ್ಬ ತನ್ನ ಮಕ್ಕಳಿಗೆ ಆನ್‌ಲೈನ್ ಪಾಠಗಳನ್ನು ಕಲಿಸಲು ಮನೆಯಲ್ಲಿ ಜೀವನಧಾರಕ್ಕೆ ಇದ್ದ ಹಸುವನ್ನು ಮಾರಿ ಮೊಬೈಲ್ ಕೊಂಡು ಸುದ್ದಿಯಾಗಿದ್ದಾರೆ.

ಜ್ವಾಲಾಮುಖಿ ಎಂಬ ಗ್ರಾಮದ ಕುಲದೀಪ್ ಕುಮಾರ್

ಜ್ವಾಲಾಮುಖಿ ಎಂಬ ಗ್ರಾಮದ ಕುಲದೀಪ್ ಕುಮಾರ್

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬ ಗ್ರಾಮದ ಕುಲದೀಪ್ ಕುಮಾರ್ ಎನ್ನುವರು ತಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಕೊಡಿಸಬೇಕು ಎಂದು ತಮ್ಮ ಬಳಿ ಜೀವನಾಧಾರಕ್ಕೆ ಇದ್ದ ಏಕೈಕ ಹಸುವನ್ನು ಮಾರಿ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದಾರೆ.

ಸ್ಮಾರ್ಟ್‌ಫೋನ್ ಇಲ್ಲದೇ ಕಷ್ಟಪಡುತ್ತಿದ್ದರು

ಸ್ಮಾರ್ಟ್‌ಫೋನ್ ಇಲ್ಲದೇ ಕಷ್ಟಪಡುತ್ತಿದ್ದರು

2 ಮತ್ತು 4 ನೇ ತರಗತಿ ಓದುತ್ತಿರುವ ಕುಲದೀಪ್ ಕುಮಾರ್ ಮಕ್ಕಳು ಆನ್‌ಲೈನ್ ಪಾಠಗಳನ್ನು ಕಲಿಯಲು ಸ್ಮಾರ್ಟ್‌ಫೋನ್ ಇಲ್ಲದೇ ಕಷ್ಟಪಡುತ್ತಿದ್ದರು. ಕುಲದೀಪ್ ಮೊಬೈಲ್ ಕೊಳ್ಳಲು ಸಾಲಗಾರರ ಮೊರೆ ಹೋಗಿದ್ದರೂ ಸ್ಮಾರ್ಟ್ ಫೋನ್ ಕೊಳ್ಳಲು ಆಗಿರಲಿಲ್ಲ.

6 ಸಾವಿರ ರುಪಾಯಿಗೆ ಹಸು ಮಾರಾಟ

6 ಸಾವಿರ ರುಪಾಯಿಗೆ ಹಸು ಮಾರಾಟ

ಶಾಲೆಯ ಇತರ ಮಕ್ಕಳಂತೆ ತಮ್ಮ ಮಕ್ಕಳು ಪಾಠ ಕಲಿಯಲು ಆಗಲಿಲ್ಲವಲ್ಲ ಎಂದು ನೊಂದ ಕುಲದೀಪ್ ಕುಮಾರ್ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಲೇಬೇಕು ಎಂದು ನಿರ್ಧಾರ ಮಾಡಿ ತಮ್ಮ ಬಳಿ ಇದ್ದ ಹಸುವನ್ನು 6 ಸಾವಿರ ರುಪಾಯಿಗೆ ಮಾರಿ ಸ್ಮಾರ್ಟ್‌ ಫೋನ್ ತಂದು ಕೊಟ್ಟಿದ್ದಾರೆ.

ಬಡ ಮಕ್ಕಳಿಗೆ ಇದು ತೊಂದರೆಯಾಗಲಿದೆ

ಬಡ ಮಕ್ಕಳಿಗೆ ಇದು ತೊಂದರೆಯಾಗಲಿದೆ

ಸದ್ಯ ದೇಶದಲ್ಲಿ ಎದ್ದಿರುವ ಆನ್‌ಲೈನ್ ಶಿಕ್ಷಣ ಎಂಬ ಕೂಗು ಎಬ್ಬಿಸಿರುವ ಅವಾಂತರ ಇದು. ಕೊರೊನಾದಿಂದಾಗಿ ಶಾಲೆಗಳು ಪ್ರಾರಂಭವಾಗಿಲ್ಲ. ಇತ್ತ ಆನ್‌ಲೈನ್ ಶಿಕ್ಷಣವಾದರೂ ನೀಡಬೇಕು ಎಂದು ಶಾಲೆಗಳು ಮುಂದೆ ಬರುತ್ತಿವೆ. ಆದರೆ ಸ್ಮಾರ್ಟ್‌ ಫೋನ್‌ಗಳನ್ನು ಕೊಂಡುಕೊಳ್ಳಲು ಆಗದೇ ಇರುವಂತ ಬಡ ಮಕ್ಕಳಿಗೆ ಇದು ತೊಂದರೆಯಾಗಲಿದೆ.

Read more about: education ಶಿಕ್ಷಣ
English summary

Poor Man In Himachal Pradesh Sells Cow To Buy Smartphone for Online Education For His Children

A Poor Man In Himachal Pradesh Has Been Selling A Cow To Online Education For His Children
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X