For Quick Alerts
ALLOW NOTIFICATIONS  
For Daily Alerts

ALERT: ಆಗಸ್ಟ್‌ 1ರಿಂದ ಐಸಿಐಸಿಐ ಬ್ಯಾಂಕ್ ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಾಗಲಿದೆ!

|

ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ಆಗಸ್ಟ್ ತಿಂಗಳಿನಿಂದ ನಗದು ವಹಿವಾಟು, ಎಟಿಎಂ ಇಂಟರ್‌ಚೇಂಜ್ ಹಾಗೂ ಚೆಕ್‌ಬುಕ್‌ಗಳ ಮೇಲಿನ ಶುಲ್ಕಗಳ ಪರಿಷ್ಕರಣೆಯನ್ನು ಜಾರಿಗೆ ತರಲು ಸಜ್ಜಾಗಿದೆ.

 

ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಆಗಸ್ಟ್ 1, 2021ರಿಂದ ಬ್ಯಾಂಕ್ ನಿಯಮಗಳ ಪರಿಷ್ಕರಣೆ ನಡೆಯಲಿದೆ. ಈ ಬದಲಾವಣೆ ಬಳಿಕ ಐಸಿಐಸಿಐ ಬ್ಯಾಂಕ್ ಖಾತೆದಾರರು ಎಟಿಎಂಗಳಲ್ಲಿ ಮೊದಲ ಮೂರು ವಹಿವಾಟುಗಳ ನಂತರ ಬ್ಯಾಂಕೇತರ ಎಟಿಎಂಗಳಿಂದ ನಗದು ಹಿಂಪಡೆಯಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗಿದ್ದಾರೆ ಮುಂದಿನ ತಿಂಗಳಿನಿಂದ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಈ ಕೆಳಗೆ ತಿಳಿಯಿರಿ.

ಚೆಕ್‌ಬುಕ್ ಶುಲ್ಕ ಪರಿಷ್ಕರಣೆ

ಚೆಕ್‌ಬುಕ್ ಶುಲ್ಕ ಪರಿಷ್ಕರಣೆ

ಐಸಿಐಸಿಐ ಬ್ಯಾಂಕ್ ಖಾತೆದಾರರು ಮುಂದಿನ ತಿಂಗಳಿನಿಂದ ಹೆಚ್ಚುವರಿ ಚೆಕ್‌ ಬುಕ್ ಬಳಕೆಗಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ನಿರ್ದಿಷ್ಟ ಮೊದಲ 25 ಹಾಳೆಗಳ ಚೆಕ್‌ಬುಕ್‌ಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಆದರೆ ನಂತರ 10 ಚೆಕ್ ಲೀಫ್‌ಗಳ ಪ್ರತಿ ಹೆಚ್ಚುವರಿ ಚೆಕ್‌ಬುಕ್‌ಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ.

ಹಣ ವಿತ್‌ಡ್ರಾ ಶುಲ್ಕ

ಹಣ ವಿತ್‌ಡ್ರಾ ಶುಲ್ಕ

ಕ್ಯಾಲೆಂಡರ್ ತಿಂಗಳಿನ ಮೊದಲ ಹಣ ವಿತ್‌ಡ್ರಾಗೆ ಆಗಸ್ಟ್‌ನಿಂದ ಉಚಿತವಾಗಿರುತ್ತದೆ. ಅದರ ನಂತರ ಬ್ಯಾಂಕ್ ಖಾತೆದಾರರು ಹಿಂತೆಗೆದುಕೊಳ್ಳುವ ಪ್ರತಿ 1,000 ರೂಪಾಯಿಗೆ 5 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಬ್ಯಾಂಕ್ ಪ್ರತಿ ತಿಂಗಳು ಉಚಿತ ನಗದು ವಹಿವಾಟಿಗೆ 1 ಲಕ್ಷ ರೂಪಾಯಿ ಮಿತಿಯನ್ನು ನಿಗದಿಪಡಿಸಿದೆ. ಇದು ಕನಿಷ್ಠ 150 ರೂಪಾಯಿಗೆ ಒಳಪಟ್ಟಿದೆ.

ಬ್ಯಾಂಕ್‌ನ ಈ ಬದಲಾವಣೆಗಳು ಖಾತೆ ತೆರೆದಿರುವ ಅಥವಾ ಪೋರ್ಟ್‌ ಮಾಡಿದ ಹೋಮ್ ಬ್ರಾಂಚ್‌ ಖಾತೆಗಳಿಗೆ ಅನ್ವಯಿಸುತ್ತದೆ. ಇನ್ನೂ ಹೋಮ್ ಬ್ರಾಂಚ್ ಹೊರತುಪಡಿಸಿದ ಶಾಖೆಗಳಿಗೆ ದಿನಕ್ಕೆ 25,000 ರೂಪಾಯಿ ವಹಿವಾಟಿಗೆ ಯಾವುದೇ ಶುಲ್ಕವಿರುವುದಿಲ್ಲ. ಅದನ್ನೂ ಮೀರಿದತೆ ಈ ಮೇಲೆ ತಿಳಿಸಿದಂತೆ ಶುಲ್ಕವನ್ನು ವಿಧಿಸಲಾಗುತ್ತದೆ.

 

ಎಟಿಎಂ ವಹಿವಾಟು ಶುಲ್ಕ
 

ಎಟಿಎಂ ವಹಿವಾಟು ಶುಲ್ಕ

ಐಸಿಐಸಿಐ ಬ್ಯಾಂಕ್‌ನ ಗ್ರಾಹಕರು ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಆರು ಮಹಾನಗರಗಳಲ್ಲಿ ಬ್ಯಾಂಕೇತರ ಎಟಿಎಂಗಳಿಂದ ಒಂದು ತಿಂಗಳಿನಲ್ಲಿ ಮೊದಲ ಮೂರು ವಹಿವಾಟುಗಳು ಉಚಿತವಾಗಿವೆ. ಈ ಮಿತಿ ಮೀರಿದರೆ ಪ್ರತಿ ವಹಿವಾಟಿಗೆ 20 ರೂಪಾಯಿ ವಿಧಿಸಲಾಗುತ್ತದೆ.

ಎಟಿಎಂ ಹಣಕಾಸಿನೇತರ ವಹಿವಾಟುಗಳು

ಎಟಿಎಂ ಹಣಕಾಸಿನೇತರ ವಹಿವಾಟುಗಳು

ಮೇಲೆ ತಿಳಿಸಿದ ಮಹಾನಗರಗಳನ್ನು ಹೊರತುಪಡಿಸಿ ಬೇರೆ ಎಲ್ಲ ನಗರಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಒದಗಿಸುತ್ತವೆ. ಬ್ಯಾಂಕಿನ ವೆಬ್‌ಸೈಟ್‌ನ ಪ್ರಕಾರ, ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನ ವಿಂಗಡಿಸಲಾಗಿದೆ.

ಹಣಕಾಸೇತರ ವಹಿವಾಟಿನ ಮಿತಿಯನ್ನು ಮೀರಿದರೆ ಆ ಕ್ಯಾಲೆಂಡರ್ ತಿಂಗಳಲ್ಲಿ ಪ್ರತಿ ಮುಂದಿನ ವಹಿವಾಟಿಗೆ 8.50 ರೂ. ಶುಲ್ಕ ವಿಧಿಸಲಾಗುತ್ತದೆ. ಇದು ಸಿಲ್ವರ್, ಗೋಲ್ಡ್, ಮ್ಯಾಗ್ನಮ್, ಟೈಟಾನಿಯಂ ಮತ್ತು ವೆಲ್ತ್ ಕಾರ್ಡ್‌ಗಳಿಗೆ ಅನ್ವಯಿಸುತ್ತದೆ ಮತ್ತು ಹಣಕಾಸಿನೇತರ ವಹಿವಾಟುಗಳಿಗೆ ಇದನ್ನು ಎದುರಿಸಬೇಕಾಗುತ್ತದೆ.

 

ಹೋಮ್ ಬ್ರಾಂಚ್ ಹಣ ವಹಿವಾಟು ಶುಲ್ಕ

ಹೋಮ್ ಬ್ರಾಂಚ್ ಹಣ ವಹಿವಾಟು ಶುಲ್ಕ

ಐಸಿಐಸಿಐ ಬ್ಯಾಂಕ್ ಹೋಮ್ ಬ್ರಾಂಚ್‌ಗಳಲ್ಲಿ ತಿಂಗಳಿಗೆ ನಾಲ್ಕು ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತದೆ, ಇದು ಸಾಮಾನ್ಯ ಉಳಿತಾಯ ಖಾತೆಗಳಿಗೆ ಠೇವಣಿ ಅಥವಾ ಹಣ ವಿತ್‌ಡ್ರಾಗೆ ಅನ್ವಯಿಸುತ್ತದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ 150 ರೂ. ಶುಲ್ಕವಿದೆ.

ಸ್ಯಾಲರಿ ಅಕೌಂಟ್‌

ಸ್ಯಾಲರಿ ಅಕೌಂಟ್‌

ಐಸಿಐಸಿಐ ಬ್ಯಾಂಕಿನಲ್ಲಿ ಸರಾಸರಿ ಪ್ಲಸ್ ಸಂಬಳ ಖಾತೆದಾರರಿಗೆ, ಮೊದಲ ನಾಲ್ಕು ವಹಿವಾಟುಗಳು ನಿರ್ದಿಷ್ಟ ಕ್ಯಾಲೆಂಡರ್ ತಿಂಗಳಲ್ಲಿ ಉಚಿತವಾಗಿರುತ್ತದೆ. ಇದರ ನಂತರ, ಪ್ರತಿ 1,000 ಅಥವಾ ಅದಕ್ಕಿಂತಹ ಹೆಚ್ಚಿನ ಹಣ ವಹಿವಾಟಿಗೆ 5 ರೂ. ಶುಲ್ಕವಿರುತ್ತದೆ.

ಮೂರನೇ ವ್ಯಕ್ತಿಯ ವಹಿವಾಟು

ಮೂರನೇ ವ್ಯಕ್ತಿಯ ವಹಿವಾಟು

ಯಾವುದೇ ಮೂರನೇ ವ್ಯಕ್ತಿಯ ವಹಿವಾಟುಗಳಿಗೆ, ಅದು ಹಣ ವಿತ್‌ಡ್ರಾ ಅಥವಾ ಠೇವಣಿಯಾಗಿರಲಿ, ಇದರ ಮೇಲಿನ ಮಿತಿ ದಿನಕ್ಕೆ 25,000 ರೂ. ಆಗಿರುತ್ತದೆ. ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ವಿಧಿಸಲಾಗುವುದು ಹಾಗೂ ದಿನಕ್ಕೆ 25 ಸಾವಿರ ರೂ.ಗಿಂತ ಹೆಚ್ಚಿನದನ್ನು ಅನುಮತಿಸಲಾಗುವುದಿಲ್ಲ.

ಹಿರಿಯ ನಾಗರಿಕರ ಖಾತೆಗಳು

ಹಿರಿಯ ನಾಗರಿಕರ ಖಾತೆಗಳು

ಈ ರೀತಿಯ ಖಾತೆಗಳ ವಹಿವಾಟಿನ ಮೇಲೆ ದಿನಕ್ಕೆ 25,000 ರೂ. ಗರಿಷ್ಠ ಮಿತಿಯನ್ನು ಹೊಂದಿರುತ್ತವೆ, ಆದರೆ ಈ ಸಂದರ್ಭದಲ್ಲಿ ಖಾತೆಗೆ ಶುಲ್ಕ ವಿಧಿಸಲಾಗುವುದಿಲ್ಲ.

English summary

Alert: ICICI Bank ATM Withdrawal Transaction Charges Set To Increase From August 1

ICICI customers will have to face higher charges from ATM withdrawals to cash transactions, starting from August 1. Take a look at new charges and rules.
Story first published: Friday, July 30, 2021, 9:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X