For Quick Alerts
ALLOW NOTIFICATIONS  
For Daily Alerts

ಆಪಲ್ ಆನ್ ಲೈನ್ ಸ್ಟೋರ್ ಶುರು; ರಿಯಾಯಿತಿ, ಇಎಂಐ, ವಿನಿಮಯ ಇನ್ನೂ ಏನೆಲ್ಲ

By ಅನಿಲ್ ಆಚಾರ್
|

ಆಪಲ್ ಕಂಪೆನಿಯಿಂದ ಇಂದು (ಸೆಪ್ಟೆಂಬರ್ 23, 2020) ಆಪಲ್ ಸ್ಟೋರ್ ಆನ್ ಲೈನ್ ಆರಂಭಿಸಲಾಗಿದೆ. ಗ್ರಾಹಕರು ಈ ಸ್ಟೋರ್ ನಿಂದ ಪ್ರಾಡಕ್ಟ್ ಗಳನ್ನು ನೇರವಾಗಿ ಖರೀದಿ ಮಾಡುವುದಷ್ಟೇ ಅಲ್ಲ, ನೇರವಾಗಿ ಕಸ್ಟಮರ್ ಸಪೋರ್ಟ್ ಸಿಗುತ್ತದೆ. ಜತೆಗೆ ಹಳೇ ಆಪಲ್ ಮೊಬೈಲ್ ಫೋನ್ ಗಳ ವಿನಿಮಯ, ವಿದ್ಯಾರ್ಥಿಗಳಿಗೆ ರಿಯಾಯಿತಿ ಹಾಗೂ ಹಣಕಾಸು ಸಾಲ ಸೌಲಭ್ಯ ಕೂಡ ದೊರೆಯುತ್ತದೆ.

ಈ ವರೆಗೆ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಹಾಗೂ ಆಪಲ್ ಕಂಪೆನಿಯ ಅಧಿಕೃತ ರೀಟೇಲರ್ ಗಳ ಮೂಲಕ ಮಾತ್ರ ಖರೀದಿಸಬಹುದಿತ್ತು. ಆದರೆ ಈಗ ಆಸಕ್ತ ಖರೀದಿದಾರರು ನೇರವಾಗಿ ಕಂಪೆನಿ ಸ್ಟೋರ್ ನಿಂದಲೇ ಆಪಲ್ ಉತ್ಪನ್ನಗಳನ್ನು ಖರೀದಿಸಬಹುದು. ಆಪಲ್ ಹೇಳುವ ಪ್ರಕಾರ, ಇಪ್ಪತ್ನಾಲ್ಕರಿಂದ ಎಪ್ಪತ್ತೆರಡು ಗಂಟೆಯೊಳಗೆ ಆರ್ಡರ್ ಅನ್ನು ತಲುಪಿಸಲಾಗುತ್ತದೆ.

ಆಪಲ್ ತಜ್ಞರಿಂದ ಸಹಾಯ ಪಡೆಯಬಹುದು

ಆಪಲ್ ತಜ್ಞರಿಂದ ಸಹಾಯ ಪಡೆಯಬಹುದು

ಅದರಲ್ಲೂ ಕೆಲವು ಪ್ರಾಡಕ್ಟ್ ಗಳು, ಉದಾಹರಣೆ ಮ್ಯಾಕ್. ಅದನ್ನು ಶಿಪ್ ಮಾಡುವುದಕ್ಕೆ ತಿಂಗಳ ತನಕ ಸಮಯ ತೆಗೆದುಕೊಳ್ಳುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಕೆಲವು ಅನುಕೂಲಗಳಿವೆ ಹಾಗೂ ಅಗತ್ಯ- ಆಸಕ್ತ ಖರೀದಿದಾರರಿಗೆ ಹಣಕಾಸು ಸೌಲಭ್ಯ ಇನ್ನೂ ಸಾಕಷ್ಟು ದೊರೆಯುತ್ತವೆ. ಆಪಲ್ ಸ್ಟೋರ್ ಆನ್ ಲೈನ್ ತಲುಪಲು ಬಯಸುವವರು ಕರೆ ಅಥವಾ ಚಾಟ್ ಮೂಲಕ ಆಪಲ್ ತಜ್ಞರನ್ನು ಸಂಪರ್ಕಿಸಬಹುದು. ಯಾವುದಾದರೂ ನಿರ್ದಿಷ್ಟ ಪ್ರಾಡಕ್ಟ್ ಬಗ್ಗೆ ಅವರ ಸಪೋರ್ಟ್ ಪಡೆಯಬಹುದು. ಈ ತಜ್ಞರು ಹೊಸ ಪ್ರಾಡಕ್ಟ್ ಸೆಟ್ಟಿಂಗ್ ಗೆ ಸಂಬಂಧಿಸಿದಂತೆಯೂ ಗ್ರಾಹಕರಿಗೆ ನೆರವಾಗುತ್ತದೆ.

ಐಫೋನ್ ಗಳ ವಿನಿಮಯ ಕಾರ್ಯಕ್ರಮ

ಐಫೋನ್ ಗಳ ವಿನಿಮಯ ಕಾರ್ಯಕ್ರಮ

ಆಪಲ್ ಐಫೋನ್ ಮಾಡೆಲ್ ಗಳಿಗೆ ವಿನಿಮಯ ಕಾರ್ಯಕ್ರಮಗಳನ್ನು ಸಹ ತರಲಾಗಿದೆ. ಹೊಸ ಫೋನ್ ಖರೀದಿಸುವಾಗ ಹಳೆಯದನ್ನು ಹಿಂತಿರುಗಿಸಿದಲ್ಲಿ, ಕಂಪೆನಿಯಿಂದ ಇಂತಿಷ್ಟು ಎಂದು ಬೆಲೆ ನಿಗದಿ ಮಾಡಲಾಗುತ್ತದೆ. ಹೊಸ ಫೋನ್ ನ ಒಟ್ಟು ದರದಿಂದ ನಿಗದಿಯಾದ ಬೆಲೆಯನ್ನು ಕಡಿತ ಮಾಡಲಾಗುತ್ತದೆ. ಗ್ರಾಹಕರಿಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಸ್ಟೋರ್ ನಿಂದ ವಿನಿಮಯದ ಆಫರ್ ನಲ್ಲಿ 35,000 ರುಪಾಯಿ ತನಕ ದೊರೆಯುತ್ತದೆ. ಹೊಸ ಐಫೋನ್ ಬೆಲೆ ಕಡಿಮೆ ಮಾಡಿಸುವುದಕ್ಕೆ ಅದನ್ನು ಬಳಸಬಹುದು. ಐಫೋನ್ ಎಂಆರ್ ಪಿಯಿಂದ ಅಷ್ಟು ಮೊತ್ತವನ್ನು ಕಳೆಯಲಾಗುತ್ತದೆ. ಬಾಕಿ ಮೊತ್ತ ಪಾವತಿಸಿ, ಫೋನ್ ಖರೀದಿಸಬಹುದು. ಯಾವ ಪ್ರಾಡಕ್ಟ್ ಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಕಂಪೆನಿ ತಿಳಿಸಿಲ್ಲ. ಇನ್ನು ಉತ್ಪನ್ನದ ಸದ್ಯದ ಸ್ಥಿತಿಯ ಆಧಾರದಲ್ಲಿ ಕಂಪೆನಿಯವರೇ ದರ ತೀರ್ಮಾನಿಸುತ್ತಾರೆ.

6 ಪರ್ಸೆಂಟ್ ರಿಯಾಯಿತಿ

6 ಪರ್ಸೆಂಟ್ ರಿಯಾಯಿತಿ

ವಿದ್ಯಾರ್ಥಿಗಳಿಗೆ ಮ್ಯಾಕ್ ಅಥವಾ ಐಪ್ಯಾಡ್ ಮಾಡೆಲ್ ಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಆಕ್ಸೆಸರೀಸ್ ಗಳಿಗೆ ಇದು ಅನ್ವಯ ಆಗುತ್ತದೆ. ಆಪಲ್ ಕೇರ್+ ಖರೀದಿಸಿದರೆ ವಾರಂಟಿ ವಿಸ್ತರಣೆ ಆಗುತ್ತದೆ. ಹಣ ಪಾವತಿ ವಿಚಾರಕ್ಕೆ ಬಂದರೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಎಂಐ, ಯುಪಿಐ, ನೆಟ್ ಬ್ಯಾಂಕಿಂಗ್, ಡೆಲಿವರಿ ನೀಡುವಾಗ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಆಯ್ಕೆ ಹೀಗೆ ನಾನಾ ಸಾಧ್ಯತೆಗಳಿವೆ. ಈ ರಿಯಾಯಿತಿಯು ಸದ್ಯಕ್ಕೆ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಈಗ ಪ್ರವೇಶ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ದೊರೆಯುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದಲ್ಲಿ 6 ಪರ್ಸೆಂಟ್ ಅಥವಾ ಗರಿಷ್ಠ 10 ಸಾವಿರ ರುಪಾಯಿ ತನಕ ರಿಯಾಯಿತಿ ಸಿಗುತ್ತದೆ. ಅದಕ್ಕಾಗಿ ಕನಿಷ್ಠ 20,900 ಮೌಲ್ಯದ ಪ್ರಾಡಕ್ಟ್ ಖರೀದಿಸಿರಬೇಕು. ಈ ಆಫರ್ ಅಕ್ಟೋಬರ್ 16, 2020ರ ತನಕ ಇರುತ್ತದೆ.

ಟುಡೇ ಅಟ್ ಆಪಲ್ ಎಂಬ ಉಚಿತ ಸೆಷನ್

ಟುಡೇ ಅಟ್ ಆಪಲ್ ಎಂಬ ಉಚಿತ ಸೆಷನ್

ಇನ್ನು ಆಪಲ್ ನಿಂದ ಟುಡೇ ಅಟ್ ಆಪಲ್ ಎಂಬ ಉಚಿತ ಸೆಷನ್ ಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಸ್ಥಳೀಯ ಕ್ರಿಯೇಟಿವ್ ವೃತ್ತಿಪರರು ಫೋಟೋಗ್ರಫಿ ಹಾಗೂ ಸಂಗೀತದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಇನ್ನು ದೀಪಾವಳಿ ಹತ್ತಿರ ಬರುತ್ತಿರುವುದರಿಂದ ಗ್ರಾಹಕರಿಗೆ ಸಿಗ್ನೇಚರ್ ಗಿಫ್ಟ್ ಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಆಯ್ದ ಉತ್ಪನ್ನಗಳ ಮೇಲೆ ವೈಯಕ್ತಿಕ ಆಯ್ಕೆಗೆ ತಕ್ಕಂತೆ ಹೆಸರನ್ನು ಮೂಡಿಸಿ ಕೊಡಲಾಗುತ್ತದೆ. ಐಪ್ಯಾಡ್ ಮಾಡೆಲ್ ಗಳು ಹಾಗೂ ಆಪಲ್ ಪೆನ್ಸಿಲ್ ಮೇಲೆ ಇಂಗ್ಲಿಷ್ ನಲ್ಲಿ ಹೆಸರು ಮೂಡಿಸಬಹುದು. ಏರ್ ಪಾಡ್ ಗಳ ಮೇಲೆ ಬಂಗಾಲಿ, ಗುಜರಾತಿ, ಹಿಂದಿ ಮತ್ತಿತರ ಭಾಷೆಗಳಲ್ಲೂ ಹೆಸರು ಮೂಡಿಸಬಹುದು. ಸದ್ಯದ ಕೊರೊನಾ ಬಿಕ್ಕಟ್ಟನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಕಾಂಟ್ಯಾಕ್ಟ್ ಲೆಸ್ ಉಚಿತ ಡೆಲಿವರಿ ಸಹ ನೀಡಲಾಗುತ್ತಿದೆ.

English summary

Apple Store Online Launched in India With Direct Customer Support, Trade-Ins and Others

Apple store online launched in India On September 23, 2020. Customer support, trade in, EMI and other details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X