For Quick Alerts
ALLOW NOTIFICATIONS  
For Daily Alerts

ಚೀನಾ ರಾಖಿಗಳ ಬ್ಯಾನ್: ಚೀನಾಕ್ಕೆ ಆದ ವ್ಯಾಪಾರ ನಷ್ಟ ಎಷ್ಟು ಗೊತ್ತಾ?

|

ಚೀನಾ ಭಾರತ ಗಡಿಯಲ್ಲಿ ಸೇನಾ ಉದ್ವಿಗ್ನತೆ ಹೆಚ್ಚಾಗಿ ಇದೀಗ ಚೀನಾದ ಮೇಲೆ ಭಾರತದ ಕರಿನೆರಳು ಬಿದ್ದಿದೆ. ಬಾಯ್ಕಾಟ್ ಚೀನಾ ಎಂಬ ಅಭಿಯಾನ ಶುರುವಾಗಿದೆ. ಚೀನಾದಿಂದ ಆಮದು ನಿಲ್ಲಿಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಭಾರತದೊಂದಿಗೆ ಗಡಿ ಸಂಘರ್ಷಕ್ಕಿಳಿದ ಚೀನಾಗೆ ಮೇಲಿಂದ ಮೇಲೆ ಭರ್ಜರಿ ಪೆಟ್ಟು ಬೀಳುತ್ತಿದೆ. ಈ ಸಾಲಿಗೆ ರಾಖಿ ವ್ಯಾಪಾರವೂ ಸೇರ್ಪಡೆಯಾಗಿದೆ.

ಹಿಂದಿನ ವರ್ಷಗಳಲ್ಲಿ ರಾಖಿ ಹಬ್ಬದ ದಿನದಂದು ಚೀನಾದಿಂದ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ 2020 ನೇ ಸಾಲಿನ ರಾಖಿ ಹಬ್ಬಕ್ಕೆ ಮೇಡ್ ಇನ್ ಇಂಡಿಯಾ ರಾಖಿಗಳು ಬಂದಿದ್ದು, ಚೀನಾಗೆ 4,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಚೀನಾ- ಚೀನೀಯರನ್ನು ಹಾಡಿ ಹೊಗಳಿದ ಅಮೆರಿಕ ಶತಕೋಟ್ಯಧಿಪತಿ ಎಲಾನ್ ಮಸ್ಕ್

 

ಜೂ.10 ರಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಕರೆ ನೀಡಿತ್ತು. ಇದಕ್ಕೆ ನಿರೀಕ್ಷಿತ ಬೆಂಬಲ ದೊರೆತಿದ್ದು ದೇಶಿಯ ರಾಖಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

1 ಕೋಟಿ ರಾಖಿ

1 ಕೋಟಿ ರಾಖಿ

ಸಿಎಐಟಿ ಸಹಕಾರದಿಂದ ದೇಶಾದ್ಯಂತ ಭಾರತೀಯ ಸರಕುಗಳನ್ನು ಉಪಯೋಗಿಸಿ, ಅಂಗನವಾಡಿ, ಮನೆಗಳಲ್ಲಿರುವ ಮಹಿಳೆಯರು 1 ಕೋಟಿ ರಾಖಿಗಳನ್ನು ತಯಾರಿಸಿದ್ದಾರೆ.

ಸುಳ್ಳುಗೊಂಡಿದೆ

ಸುಳ್ಳುಗೊಂಡಿದೆ

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಯಶಸ್ವಿಯಾಗುವುದಿಲ್ಲ ಎಂಬ ಅಭಿಪ್ರಾಯ ಈ ಮೂಲಕ ಸುಳ್ಳುಗೊಂಡಿದೆ.

4000 ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು

4000 ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು

ಈ ಮೂಲಕ ಒಂದೇ ಒಂದು ರಾಖಿಯನ್ನೂ ಚೀನಾದಿಂದ ಈ ಬಾರಿ ಆಮದು ಮಾಡಿಕೊಳ್ಳಲಾಗಿಲ್ಲ. ಪ್ರತಿ ವರ್ಷ 6,000 ಕೋಟಿ ರೂಪಾಯಿ ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಈ ಪೈಕಿ 4000 ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಹೇಳಿದ್ದಾರೆ.

ಕ್ವಿಟ್ ಇಂಡಿಯಾ ಅಭಿಯಾನ
 

ಕ್ವಿಟ್ ಇಂಡಿಯಾ ಅಭಿಯಾನ

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮುಂದಿನ ಭಾಗವಾಗಿ ಆ.9 ರಂದು ದೇಶಾದ್ಯಂತ ಇರುವ ಟ್ರೇಡರ್ ಗಳು ಚೀನಾ ಕ್ವಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಭಾರ್ತಿಯ ತಿಳಿಸಿದ್ದಾರೆ.

English summary

Ban On China Made Rakhi In India: Total 4000 Crore Rupees Loss For China

Ban On China Made Rakhi In India: Total 4000 Crore Rupees Loss For China
Company Search
COVID-19