For Quick Alerts
ALLOW NOTIFICATIONS  
For Daily Alerts

ಗಮನಿಸಿ: ಈ ಬ್ಯಾಂಕ್‌ನಲ್ಲಿ ಗೃಹ, ವಾಹನ ಸಾಲದ ಬಡ್ಡಿ ದರ ಕಡಿತ

|

ಈ ಹಬ್ಬದ ಸಂದರ್ಭದಲ್ಲಿ ನೀವು ಮನೆ ಅಥವಾ ವಾಹನವನ್ನು ಖರೀದಿ ಮಾಡುವ ಯೋಜನೆಯನ್ನು ಮಾಡುತ್ತಿದ್ದಿರಿಯೇ?. ಹಾಗಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಹೌದು, ಬ್ಯಾಂಕ್‌ ಆಫ್‌ ಇಂಡಿಯಾ ಭಾನುವಾರ ತನ್ನ ಗೃಹ ಹಾಗೂ ವಾಹನ ಸಾಲದ ಬಡ್ಡಿ ದರದಲ್ಲಿ ಕಡಿತವನ್ನು ಘೋಷಣೆ ಮಾಡಿದೆ. ಬ್ಯಾಂಕ್‌ ಆಫ್‌ ಇಂಡಿಯಾದ ಈ ಬಗ್ಗೆ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

 

ಗೃಹ ಸಾಲದಲ್ಲಿ ಬಡ್ಡಿ ದರವು 35 ಬೇಸಿಕ್‌ ಪಾಯಿಂಟ್‌ ಹಾಗೂ ವಾಹನ ಸಾಲದ ಬಡ್ಡಿ ದರವು 50 ಬೇಸಿಕ್‌ ಪಾಯಿಂಟ್‌ ಅನ್ನು ಕಡಿತ ಮಾಡಲಾಗಿದೆ. ಈ ಮೂಲಕ ಗೃಹ ಸಾಲದ ಮೇಲಿನ ಬಡ್ಡಿ ದರವು ಶೇಕಡ 6.50 ರಿಂದ ಆರಂಭವಾಗಲಿದೆ ಹಾಗೂ ವಾಹನ ಸಾಲದ ಬಡ್ಡಿ ದರವು ಶೇಕಡ 6.85 ಆಗಲಿದೆ. ಈ ಹಿನ್ನೆಲೆ ನಿಮಗೆ ನೀವು ಮೊದಲಿಗಿಂತ ಅಗ್ಗದ ಸಾಲವನ್ನು ಪಡೆಯುತ್ತೀರಿ.

ಗೋಲ್ಡ್‌ ಇಟಿಫ್‌ ಹೂಡಿಕೆ ಅಧಿಕ: ಮುಂಬರುವ ತಿಂಗಳುಗಳಲ್ಲೂ ಏರಿಕೆ ಸಾಧ್ಯತೆ

ಇನ್ನು ಈ ಹಿಂದೆ ಗೃಹ ಸಾಲದಲ್ಲಿ ಬಡ್ಡಿ ದರವು ಈ ಹಿಂದೆ ಶೇಕಡ 6.85 ಆಗಿತ್ತು ಮತ್ತು ವಾಹನ ಸಾಲದ ಬಡ್ಡಿ ದರವು ಈ ಹಿಂದೆ ಶೇಕಡ 7.35 ಆಗಿತ್ತು. ಇನ್ನು ಈ ವಿಶೇಷ ಬಡ್ಡಿ ದರವು ಅಕ್ಟೋಬರ್‌ 18, 2021 ಅಂದರೆ ನಾಳೆಯಿಂದ ಜಾರಿಗೆ ಬರಲಿದ್ದು ಈ ವರ್ಷದ ಡಿಸೆಂಬರ್‌ 31 ರವರೆಗೆ ಜಾರಿಯಲ್ಲಿ ಇರಲಿದೆ.

  ಗಮನಿಸಿ: ಈ ಬ್ಯಾಂಕ್‌ನಲ್ಲಿ ಗೃಹ, ವಾಹನ ಸಾಲದ ಬಡ್ಡಿ ದರ ಕಡಿತ

ಈ ವಿಶೇಷ ಬಡ್ಡಿ ದರವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಹಾಗೂ ಸಾಲವನ್ನು ವರ್ಗಾವಣೆ ಮಾಡಲು ಬಯಸುವವರಿಗೆ ಅನ್ವಯ ಆಗಲಿದೆ. ಇನ್ನು ಈ ಸಂದರ್ಭದಲ್ಲೇ ವಾಹನ ಹಾಗೂ ಗೃಹ ಸಾಲದ ಮೇಲಿನ ಪ್ರೋಸೆಸಿಂಗ್‌ ಚಾರ್ಜ್ ಅನ್ನು ಡಿಸೆಂಬರ್‌ 31, 2021 ರವರೆಗೆ ಮನ್ನಾ ಮಾಡಲಾಗುವುದು ಎಂದು ಕೂಡಾ ಬ್ಯಾಂಕ್‌ ಆಫ್‌ ಇಂಡಿಯಾ ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬ್ಯಾಂಕ್‌ ಆಫ್‌ ಇಂಡಿಯಾ, "ಈಗ ಸಂತೋಷ ದುಪ್ಪಟ್ಟಾಗುತ್ತದೆ.!, ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲವನ್ನು 6.5 ಶೇಕಡಾ ದರದಲ್ಲಿ ನೀಡುತ್ತಿದೆ. ಇದಲ್ಲದೇ, ಸ್ಟಾರ್ ವಾಹನ ಸಾಲಕ್ಕೆ ಶೇ .6.8 ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಪ್ರಕ್ರಿಯೆ ಶುಲ್ಕವು ಶೂನ್ಯವಾಗಿದೆ," ಎಂದು ತಿಳಿಸಿದೆ.

 

ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್ 0.35 ಶೇಕಡಾ ಕಡಿತಗೊಳಿಸಿದೆ. ಇದರ ಹೊರತಾಗಿ, ವಾಹನ ಸಾಲಗಳ ಬಡ್ಡಿದರವನ್ನು 0.50 ಶೇಕಡಾ ಕಡಿತಗೊಳಿಸಲಾಗಿದೆ. ನೀವು ಅಕ್ಟೋಬರ್ 18 ರ ನಂತರ ಸಾಲ ತೆಗೆದುಕೊಂಡರೆ, ಬಳಿಕ ನೀವು ಕಡಿಮೆ ಬಡ್ಡಿದರದ ಪ್ರಕಾರ ಇಎಂಐ ಪಾವತಿ ಮಾಡಬೇಕಾಗುತ್ತದೆ.

ಈ ಬ್ಯಾಂಕ್‌ಗಳು 1 ವರ್ಷಕ್ಕೆ ಶೇ. 6.75ರಷ್ಟು ರಿಟರ್ನ್ ನೀಡುತ್ತವೆ!

ಇದರೊಂದಿಗೆ, ಮನೆ ಮತ್ತು ಕಾರು ಸಾಲಗಳ ಮೇಲಿನ ಪ್ರಕ್ರಿಯೆ ಶುಲ್ಕವನ್ನು ಬ್ಯಾಂಕ್ 31 ಡಿಸೆಂಬರ್ 2021 ರವರೆಗೆ ಗ್ರಾಹಕರಿಗೆ ಮನ್ನಾ ಮಾಡಲಾಗುತ್ತದೆ. ಅಂದರೆ, ಸಾಲ ತೆಗೆದುಕೊಳ್ಳುವ ಗ್ರಾಹಕರು ಯಾವುದೇ ರೀತಿಯ ಪ್ರಕ್ರಿಯೆ ಶುಲ್ಕವನ್ನು ಇನ್ನು ಮುಂದೆ ಪಾವತಿ ಮಾಡಬೇಕಾಗಿಲ್ಲ.

ಇನ್ನು ಬ್ಯಾಂಕ್‌ ಟ್ವೀಟ್‌ನಲ್ಲಿ ಫೋಟೋವೊಂದನ್ನು ಕೂಡಾ ಹಂಚಿಕೊಂಡಿದೆ. ಇದರಲ್ಲಿ ನಿಮ್ಮ ಮನೆಯ ಇಎಂಐ ಪ್ರತಿ ಲಕ್ಷಕ್ಕೆ 632 ರೂ.ನಿಂದ ಆರಂಭವಾಗುತ್ತದೆ ಎಂದು ಬರೆಯಲಾಗಿದೆ. ಗ್ರಾಹಕರ ವಾಹನ ಸಾಲದ ಇಎಂಐ ಪ್ರತಿ ಲಕ್ಷಕ್ಕೆ 1502 ರೂ. ಆಗಿರಲಿದೆ.

ಇದರ ಹೊರತಾಗಿ, ಸಾಲದ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಬ್ಯಾಂಕ್‌ ಆಫ್‌ ಇಂಡಿಯಾದ ಸಾಲದ ಬಗ್ಗೆ ಅಧಿಕ ಮಾಹಿತಿ ಪಡೆಯಲು, 8010968305 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ನೀವು ಮಿಸ್ಡ್‌ ಕಾಲ್‌ ಮಾತ್ರವಲ್ಲದೇ ಎಸ್‌ಎಂಎಸ್‌ ಮೂಲಕ ಸಾಲದ ಬಗ್ಗೆ ಮಾಹಿತಿ ಪಡೆಯಬಹುದು. ಗೃಹ ಸಾಲದ ಬಗ್ಗೆ ಮಾಹಿತಿ ಪಡೆಯಲು ನೀವು ಎಂದು ಟೈಪ್‌ ಮಾಡಿ 7669300024 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು. ಇನ್ನು ವಾಹನ ಸಾಲದ ಬಗ್ಗೆ ಮಾಹಿತಿ ಪಡೆಯಲು ಎಂದು ಟೈಪ್‌ ಮಾಡಿ 7669300024 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು.

English summary

Bank of India cuts home, vehicle loan rates, Check new rates here

Bank of India cuts home, vehicle loan rates, Check new rates here. Read on.
Story first published: Sunday, October 17, 2021, 19:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X